AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs AUS A: ಅಕ್ಕನ ಮದುವೆ ಬಿಟ್ಟು ಆಸೀಸ್ ವಿರುದ್ಧ ಕಣಕ್ಕಿಳಿದಿದ್ದ ಅಭಿಷೇಕ್ ಸೊನ್ನೆಗೆ ಔಟ್

Abhishek Sharma's Golden Duck: ಏಷ್ಯಾಕಪ್‌ನಲ್ಲಿ ಮಿಂಚಿದ್ದ ಅಭಿಷೇಕ್ ಶರ್ಮಾ, ಭಾರತ ಎ ಪರ ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಪದಾರ್ಪಣೆಯಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದರು. ಅಕ್ಕನ ಮದುವೆ ಬಿಟ್ಟು ದೇಶಕ್ಕಾಗಿ ಆಡಲು ಬಂದಿದ್ದರೂ, ರನ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಶ್ರೇಯಸ್ ಅಯ್ಯರ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಕೂಡ ಕಳಪೆ ಪ್ರದರ್ಶನ ನೀಡಿ ಭಾರತ ಎ ತಂಡಕ್ಕೆ ಕಳಪೆ ಆರಂಭ ನೀಡಿದರು.

IND A vs AUS A: ಅಕ್ಕನ ಮದುವೆ ಬಿಟ್ಟು ಆಸೀಸ್ ವಿರುದ್ಧ ಕಣಕ್ಕಿಳಿದಿದ್ದ ಅಭಿಷೇಕ್ ಸೊನ್ನೆಗೆ ಔಟ್
Abhishek Sharma
ಪೃಥ್ವಿಶಂಕರ
|

Updated on: Oct 03, 2025 | 3:50 PM

Share

2025 ರ ಏಷ್ಯಾಕಪ್‌ನಲ್ಲಿ (Asia Cup 2025) ರನ್​ಗಳ ಮಳೆ ಹರಿಸಿದ್ದ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ (Abhishek Sharma) ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ವಾಸ್ತವವಾಗಿ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ (India A vs Australia A) ನಡುವೆ ನಡೆಯುತ್ತಿರುವ ಅನಧಿಕೃತ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಡುವ ಅವಕಾಶ ಪಡೆದಿದ್ದರು. ಆದರೆ ಏಕದಿನ ಮಾದರಿಯಲ್ಲಿ ಅಭಿಷೇಕ್​ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ತಾನು ಎದುರಿಸಿದ ಮೊದಲ ಪಂದ್ಯದಲ್ಲೇ ವಿಕೆಟ್ ಒಪ್ಪಿಸಿದರು. ಅಂದರೆ ಅಭಿಷೇಕ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಅಭಿಷೇಕ್ ಶರ್ಮಾ ಅವರ ಅಕ್ಕ ಕೋಮಲ್ ಶರ್ಮಾ ಅವರ ಮದುವೆ ಶುಕ್ರವಾರ ಅಂದರೆ ಅಕ್ಟೋಬರ್ 3 ರಂದು ಅಮೃತಸರದಲ್ಲಿ ನಡೆಯಲಿದೆ. ಆದರೆ ಈ ಸಮಾರಂಭವನ್ನು ಬಿಟ್ಟು ದೇಶದ ಪರ ಆಡಲು ಕಣಕ್ಕಿಳಿದಿದ್ದ ಅಭಿಷೇಕ್​ಗೆ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ

ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅನಧಿಕೃತ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ಎ ತಂಡ, ಎರಡನೇ ಪಂದ್ಯದಲ್ಲಿ ಕಳಪೆ ಆರಂಭ ಕಂಡಿತು. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಕೇವಲ 21 ರನ್‌ಗಳಿಗೆ ಔಟಾದರು. 2025 ರ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಕೇವಲ ಒಂದು ಎಸೆತ ಆಡಿ ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡರು.

ಏಷ್ಯಾಕಪ್​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಅಭಿಷೇಕ್ ಆಡಿದ ಏಳು ಪಂದ್ಯಗಳಲ್ಲಿ 44.85 ಸರಾಸರಿಯಲ್ಲಿ 3 ಅರ್ಧಶತಕಗಳ ಸಹಿತ 314 ರನ್ ಬಾರಿಸಿದ್ದರು. ಇದಕ್ಕಾಗಿ ಅವರಿಗೆ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಯೂ ಲಭಿಸಿತು. ಆದರೆ ಆಸ್ಟ್ರೇಲಿಯಾ ಎ ವಿರುದ್ಧ ಅವರ ಆಟ ಸಪ್ಪೆಯಾಗಿತ್ತು. ಅಭಿಷೇಕ್ ಮಾತ್ರವಲ್ಲದೆ ಇದೇ ಆಸ್ಟ್ರೇಲಿಯಾ ಎ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್ ಕೂಡ ಬೇಗನೆ ಔಟಾದರು.

ಸಹೋದರಿಯ ಮದುವೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ಅಭಿಷೇಕ್ ಶರ್ಮಾ; ವಿಡಿಯೋ

ನಿರಾಸೆಗೊಳಿಸಿದ ಶ್ರೇಯಸ್ ಅಯ್ಯರ್

ಆಸ್ಟ್ರೇಲಿಯಾ ಎ ವಿರುದ್ಧದ ಈ ಪಂದ್ಯದಲ್ಲಿ ಭಾರತ ಎ ತಂಡ ಕಳಪೆ ಆರಂಭ ಕಂಡಿದ್ದು, ಕೇವಲ 6 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಭಿಷೇಕ್ ಶರ್ಮಾ ಅವರಲ್ಲದೆ, ಹಿಂದಿನ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಗಳಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪ್ರಭ್ಸಿಮ್ರಾನ್ ಸಿಂಗ್ ಕೂಡ ಕೇವಲ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು, ಆದರೆ ಅವರು ಕೂಡ 13 ಎಸೆತಗಳಲ್ಲಿ ಕೇವಲ 8 ರನ್‌ ಬಾರಿಸಿ ಔಟಾದರು.

ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ಹಿಂದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 83 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 110 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಪ್ರಿಯಾಂಶ್ ಆರ್ಯ 84 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 101 ರನ್ ಬಾರಿಸಿದ್ದರು. ಪ್ರಭ್ಸಿಮ್ರಾನ್ ಸಿಂಗ್ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 56 ರನ್ ಕಲೆಹಾಕಿದ್ದರು. ಇವರ ಆಟದಿಂದಾಗಿ ಭಾರತ ಎ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 413 ರನ್‌ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಆಸ್ಟ್ರೇಲಿಯಾ ಎ ತಂಡವು 33.1 ಓವರ್‌ಗಳಲ್ಲಿ ಕೇವಲ 242 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ, ಭಾರತ ಎ ತಂಡವು ಮೊದಲ ಪಂದ್ಯವನ್ನು 171 ರನ್‌ಗಳಿಂದ ಗೆದ್ದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ