IND vs PAK: ಫೈನಲ್ ಫೈಟ್​ನಲ್ಲಿ ಟಾಸ್ ಗೆದ್ದ ಭಾರತ; ಪಾಕ್ ಮೊದಲು ಬ್ಯಾಟಿಂಗ್, ಉಭಯ ತಂಡಗಳು ಹೀಗಿವೆ

|

Updated on: Jul 23, 2023 | 2:15 PM

India A vs Pakistan A Emerging Teams Asia Cup 2023 final: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡವನ್ನು ಎದುರಿಸುತ್ತಿರುವ ಯಶ್ ಧುಲ್ ನಾಯಕತ್ವದ ಭಾರತ ಎ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

IND vs PAK: ಫೈನಲ್ ಫೈಟ್​ನಲ್ಲಿ ಟಾಸ್ ಗೆದ್ದ ಭಾರತ; ಪಾಕ್ ಮೊದಲು ಬ್ಯಾಟಿಂಗ್, ಉಭಯ ತಂಡಗಳು ಹೀಗಿವೆ
ಭಾರತ- ಪಾಕಿಸ್ತಾನ ತಂಡಗಳು
Follow us on

ಇಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತಿರುವ ಎಸಿಸಿ ಉದಯೋನ್ಮುಖ ತಂಡಗಳ ಏಷ್ಯಾಕಪ್ ಫೈನಲ್ (Emerging Teams Asia Cup 2023 final) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡವನ್ನು ಎದುರಿಸುತ್ತಿರುವ ಯಶ್ ಧುಲ್ (Yash Dhull) ನಾಯಕತ್ವದ ಭಾರತ ಎ ತಂಡ (India A vs Pakistan A) ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯಾವಳಿಯಲ್ಲಿ ಇದು ಉಭಯ ತಂಡಗಳ ಎರಡನೇ ಮುಖಾಮುಖಿಯಾಗಿದ್ದು, ಲೀಗ್ ಹಂತದಲ್ಲಿ ಪಾಕ್ ತಂಡವನ್ನು ಎದುರಿಸಿದ್ದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿಯನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಸೋಲಿಸಿತ್ತು. ಇದೀಗ ಪ್ರಶಸ್ತಿಗಾಗಿ ಉಭಯ ತಂಡಗಳು ಎರಡನೇ ಬಾರಿಗೆ ಕಣಕ್ಕಿಳಿಯುತ್ತಿದ್ದು, ಉಭಯರಿಗೂ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಪಂದ್ಯದ ಟಾಸ್ ಮುಗಿಯುವುದರೊಂದಿಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಲೀಗ್​​ ಹಂತದಲ್ಲಿ ತಂಡಗಳ ಪ್ರದರ್ಶನ

ತಲಾ ಮೂರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಲೀಗ್ ಸುತ್ತಿನಲ್ಲಿ ಒಂದೇ ಒಂದು ಸೋಲು ಕಾಣದೆ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದ್ದ ಭಾರತ ತಂಡ, ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡವನ್ನು ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ, ಪಾಕಿಸ್ತಾನ ಎ ತಂಡ ಲೀಗ್​ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತು, ಉಳಿದೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎ ತಂಡವನ್ನು ಸೋಲಿಸಿದ ಪಾಕ್ ಪಡೆ ಫೈನಲ್​ಗೆ ಟಿಕೆಟ್ ಖಚಿತ ಪಡಿಸಿಕೊಂಡಿತ್ತು.

IND vs PAK: ಇಂದು ಏಷ್ಯಾಕಪ್ ಫೈನಲ್​ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ..!

ಭಾರತ ತಂಡ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್(ನಾಯಕ), ನಿಶಾಂತ್ ಸಿಂಧು, ರಿಯಾನ್ ಪರಾಗ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ಮಾನವ್ ಸುತಾರ್, ಆರ್ ಎಸ್ ಹಂಗರ್ಗೇಕರ್, ಯುವರಾಜ್ ಸಿಂಗ್ ದೋಡಿಯಾ

ಪಾಕಿಸ್ತಾನ ತಂಡ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ತಯ್ಯಬ್ ತಾಹಿರ್, ಖಾಸಿಮ್ ಅಕ್ರಮ್, ಮೊಹಮ್ಮದ್ ಹ್ಯಾರಿಸ್(ನಾಯಕ), ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಸುಫಿಯಾನ್ ಮುಖೀಮ್, ಅರ್ಷದ್ ಇಕ್ಬಾಲ್, ಮೆಹ್ರಾನ್ ಮುಮ್ತಾಜ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Sun, 23 July 23