IND vs SA: ಇಂದು ಭಾರತ- ದ. ಆಫ್ರಿಕಾ ಮೂರನೇ ಏಕದಿನ: ನಿರ್ಣಾಯಕ ಪಂದ್ಯಕ್ಕೆ ಉಭಯ ತಂಡಗಳು ಸಜ್ಜು

| Updated By: Vinay Bhat

Updated on: Oct 11, 2022 | 7:52 AM

India vs South Africa: ಇಂದು ಡೆಲ್ಲಿಯ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ಭಾರತ - ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

IND vs SA: ಇಂದು ಭಾರತ- ದ. ಆಫ್ರಿಕಾ ಮೂರನೇ ಏಕದಿನ: ನಿರ್ಣಾಯಕ ಪಂದ್ಯಕ್ಕೆ ಉಭಯ ತಂಡಗಳು ಸಜ್ಜು
IND vs SA
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಸೋಲು ಕಂಡ ಭಾರತ (India vs South Africa) ತಂಡ ಬಳಿಕ ದ್ವಿತೀಯ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಕಮ್​ಬ್ಯಾಕ್ ಮಾಡಿತ್ತು. ಈ ಮೂಲಕ 1-1 ಅಂಕಗಳ ಸಮಬಲ ಸಾಧಿಸಿತ್ತು. ಇದೀಗ ನಿರ್ಣಾಯಕ ಕದನಕ್ಕೆ ಉಭಯ ತಂಡಗಳು ಸಜ್ಜಾಗುತ್ತಿದೆ. ಇಂದು ಡೆಲ್ಲಿಯ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ಮೂರನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಹೆಚ್ಚು ಯುವ ಆಟಗಾರರಿಂದಲೇ ಕೂಡಿರುವ ಟೀಮ್ ಇಂಡಿಯಾಕ್ಕೆ (Team India) ಇದೊಂದು ಅಗ್ನಿಪರೀಕ್ಷೆಯಾಗಿದೆ. ಅಲ್ಲದೆ ಸತತ ವೈಫಲ್ಯ ಅನುಭವಿಸುತ್ತಿರುವ ನಾಯಕ ಶಿಖರ್ ಧವನ್ (Shikhar Dhawan) ಮೇಲೂ ಒತ್ತಡವಿದೆ.

ಭಾರತ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದರೂ ಓಪನರ್​ಗಳು ಸಂಪೂರ್ಣ ಎಡವುತ್ತಿದ್ದಾರೆ. ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಆಡಿದ ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಿಲ್ಲ. ಇಂದು ಇವರಿಬ್ಬರಿಗೂ ಒತ್ತಡವಿದೆ. ಇಶಾನ್ ಕಿಶನ್ ತಮಗೆ ಸಿಕ್ಕ ಮತ್ತೊಂದು ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಅಯ್ಯರ್ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಶಾರ್ದೂಲ್ ಥಾಕೂರ್ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮಾರಕವಾಗಿ ಗೋಚರಿಸುತ್ತಿದ್ದಾರೆ. ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ ಕೆಲಸ ಮಾಡಬೇಕಿದೆ.

ಇತ್ತ ಆಫ್ರಿಕಾ ತಂಡದಲ್ಲಿ ನಾಯಕ ತೆಂಬಾ ಬವುಮಾ ಕಡೆಯಿಂದ ಟಿ20 ಸರಣಿಯಿಂದಲೂ ಫ್ಲಾಪ್ ಶೋ ಕಂಡುಬರುತ್ತಿದೆ. ಕಳೆದ ಪಂದ್ಯದಲ್ಲಿ ಇವರು ಆಡಿರಲಿಲ್ಲ. ಇಂದು ನಿರ್ಣಾಯಕ ಕದನ ಆಗಿರುವುದರಿಂದ ಇವರ ಪ್ರದರ್ಶನ ಮುಖ್ಯವಾಗಲಿದೆ. ಉಳಿದ ಆಟಗಾರರು ಉತ್ತಮ ಆಟವಾಡುತ್ತಿದ್ದಾರೆ. ಕ್ವಿಂಟನ್ ಡಿಕಾಕ್, ಹೆನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಆ್ಯಡಂ ಮರ್ಕ್ರಮ್ ಹಾಗೂ ಜಾನ್​ಮನ್ ಮಲನ್ ಕೂಡ ಕೊಡುಗೆ ನೀಡುತ್ತಿದ್ದಾರೆ. ಕಗಿಸೊ ರಬಾಡ ಹಾಗೂ ಲುಂಗಿ ಎನ್​ಗಿಡಿ ಆಫ್ರಿಕಾದ ಪ್ರಮುಖ ಬೌಲಿಂಗ್ ಅಸ್ತ್ರ. ಇವರಿಗೆ ತಬ್ರೇಜ್ ಶಮ್ಸಿ, ಕೇಶವ್ ಮಹರಾಜ್ ಹಾಗೂ ಪಾರ್ನೆಲ್ ಸಾಥ್ ನೀಡಬೇಕಿದೆ.

ಇದನ್ನೂ ಓದಿ
Shreyas Iyer: ಏಕದಿನ ಕ್ರಿಕೆಟ್​ನ ಚೇಸ್ ಮಾಸ್ಟರ್ ಶ್ರೇಯಸ್ ಅಯ್ಯರ್..! ಅಂಕಿಅಂಶಗಳು ಅದನ್ನೇ ಹೇಳುತ್ತಿವೆ
India vs South Africa 3rd ODI Live Streaming: ಸರಣಿ ನಿರ್ಧಾರಕ ಪಂದ್ಯದಲ್ಲಿ ಗೆಲುವು ಯಾರಿಗೆ? ಪಂದ್ಯ ಆರಂಭ ಯಾವಾಗ?
IND vs SA: ಶ್ರೇಯಸ್ ಔಟ್..? ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ
India T20 WC Squad: ಐಸಿಸಿ ನೀಡಿದ್ದ ಗಡುವು ಅಂತ್ಯ; ಬುಮ್ರಾ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡದ ಬಿಸಿಸಿಐ..!

ಅಂಕಿಅಂಶಗಳನ್ನು ಗಮನಿಸುವುದಾದರೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ 3 ನೇ ಸ್ಥಾನದಲ್ಲಿದರೆ, ದಕ್ಷಿಣ ಆಫ್ರಿಕಾ 6 ನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಇದುವರೆಗೆ 89 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ 50 ಪಂದ್ಯಗಳನ್ನು ಗೆದ್ದಿದರೆ, ಭಾರತ 36 ಪಂದ್ಯಗಳನ್ನು ಗೆದ್ದಿದೆ. ಉಳಿದ 3 ಪಂದ್ಯಗಳು ಮಳೆಯಿಂದ ರದ್ದಾಗಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1 ಗಂಟೆಗೆ ಟಾಸ್ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು.

ಉಭಯ ತಂಡಗಳು:

ಭಾರತ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಜಾನೆಮನ್ ಮಲನ್, ಆಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಗಿಸೋ ರಬಾಡ, ತಬ್ರೇಜ್ ಶಮ್ಸಿ.

Published On - 7:51 am, Tue, 11 October 22