- Kannada News Sports Cricket news EAM S Jaishankar gifts signed bat from Virat Kohli to Deputy PM of Australia See pics
ಆಸ್ಟ್ರೇಲಿಯಾದ ಉಪ ಪ್ರಧಾನಿಗೆ ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಗಿಫ್ಟ್ ಕೊಟ್ಟ ಜೈಶಂಕರ್
ಭಾರತದ ವಿದೇಶಾಂಗ ಜೈಶಂಕರ್ ಅವರು ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್‌ಗೆ ಉಡುಗೊರೆಯಾಗಿ ನೀಡಿದ್ದು, ಈಗ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
Updated on:Oct 10, 2022 | 5:57 PM


ಜೈಶಂಕರ್ ಅವರು ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನು ರಿಚರ್ಡ್‌ಗೆ ಉಡುಗೊರೆಯಾಗಿ ನೀಡಿದ್ದು, ಈಗ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

ಉಡುಗೊರೆ ಪಡೆದು ಮಾತನಾಡಿದ ರಿಚರ್ಡ್ ಮಾರ್ಲ್ಸ್, ಕ್ರಿಕೆಟ್ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳು ನಮ್ಮಿಬ್ಬರನ್ನು ಇನ್ನಷ್ಟು ಹತ್ತಿರವಾಗಿಸಿವೆ ಎಂದಿದ್ದಾರೆ.

ಈ ಹಿಂದೆಯೂ ಜೈಶಂಕರ್ ಅವರು ನ್ಯೂಜಿಲೆಂಡ್ ಪ್ರವಾಸದ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಸಂಬಂಧವನ್ನು ಶ್ಲಾಘಿಸಿ, ನ್ಯೂಜಿಲೆಂಡ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಕೃತಜ್ಞತೆ ಸಲ್ಲಿಸಿದ್ದರು.

ಜಾನ್ ರೈಟ್ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರಿಗೆ ಭಾರತ ಸದಾ ಕೃತಜ್ಞರಾಗಿರಬೇಕು ಎಂದಿದ್ದ ಜೈಶಂಕರ್, ಭಾರತದಲ್ಲಿ ಯಾರೂ ಸಹ ರೈಟ್ ಅವರನ್ನು ಮರೆಯಲು ಸಾಧ್ಯವಿಲ್ಲ. ಹಾಗೆಯೇ ಐಪಿಎಲ್ ಅಭಿಮಾನಿಗಳು ಕೂಡ ಫ್ಲೆಮಿಂಗ್ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.

2003 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಜಾನ್ ರೈಟ್ ಅವರ ಕೋಚಿಂಗ್‌ನಲ್ಲಿ ಫೈನಲ್ ತಲುಪಿದರೆ, ಫ್ಲೆಮಿಂಗ್ ಅವರ ಕೋಚಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ.
Published On - 5:57 pm, Mon, 10 October 22




