IND vs SL: ಏಷ್ಯಾಕಪ್​ನಲ್ಲಿಂದು ಭಾರತ-ಶ್ರೀಲಂಕಾ ಮುಖಾಮುಖಿ: ರೋಹಿತ್ ಪಡೆಗೆ ಅಗ್ನಿಪರೀಕ್ಷೆ

| Updated By: Vinay Bhat

Updated on: Sep 06, 2022 | 8:07 AM

ಕಳೆದ ಮ್ಯಾಚ್​ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿರುವ ಟೀಮ್ ಇಂಡಿಯಾಕ್ಕೆ (Team India) ಇದು ಮಾಡು ಇಲ್ಲವೇ ಮಡಿ ಪಂದ್ಯ. ಫೈನಲ್ ತಲುಪಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಿದೆ.

IND vs SL: ಏಷ್ಯಾಕಪ್​ನಲ್ಲಿಂದು ಭಾರತ-ಶ್ರೀಲಂಕಾ ಮುಖಾಮುಖಿ: ರೋಹಿತ್ ಪಡೆಗೆ ಅಗ್ನಿಪರೀಕ್ಷೆ
IND vs SL
Follow us on

ಏಷ್ಯಾಕಪ್​ನ (Asia Cup 2022) ಸೂಪರ್ 4 ಹಂತದಲ್ಲಿಂದು ಮೂರನೇ ಪಂದ್ಯ ಆಯೋಜಿಸಲಾಗಿದ್ದು ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳು ಮುಖಾಮುಖಿ ಆಗುತ್ತಿದೆ. ಕಳೆದ ಮ್ಯಾಚ್​ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿರುವ ಟೀಮ್ ಇಂಡಿಯಾಕ್ಕೆ (Team India) ಇದು ಮಾಡು ಇಲ್ಲವೇ ಮಡಿ ಪಂದ್ಯ. ಫೈನಲ್ ತಲುಪಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಇತ್ತ ಶ್ರೀಲಂಕಾ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿತ್ತು. ಇಂದು ಸಿಂಹಳೀಯರು ಭಾರತ ವಿರುದ್ಧ ಗೆದ್ದರೆ ಬಹುತೇಕ ಫೈನಲ್​ಗೆ ಲಗ್ಗೆಯಿಟ್ಟಂತೆ.

ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿದ್ದರೂ ಅದನ್ನು ದೊಡ್ಡ ಮೊತ್ತವಾಗಿ ಕನ್ವರ್ಟ್ ಮಾಡಲು ವಿಫಲವಾಗುತ್ತಿದೆ. ರೋಹಿತ್ರಾಹುಲ್ ಓಪನರ್​ಗಳ ಮೇಲೆ ಇಂದುಕೂಡ ಒತ್ತಡವಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಬೊಂಬಾಟ್ ಫಾರ್ಮ್​ನಲ್ಲಿದ್ದು ತಂಡಕ್ಕೆ ಅದೇ ಕೊಡುಗೆಯನ್ನು ನೀಡಬೇಕಿದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಹೀಗಾಗಿ ಇವರು ಫಾರ್ಮ್​ಗೆ ಮರಳಬೇಕಿದೆ.

ಸೂರ್ಯಕುಮಾರ್ ಯಾದವ್ ಅವರಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ರಿಷಭ್ ಪಂತ್ ಪಾಕ್ ವಿರುದ್ಧ ಕಳಪೆ ಆಟವಾಡಿ ಟ್ರೋಲ್ ಕೂಡ ಆಗಿದ್ದರು. ಹೀಗಾಗಿ ಇವರ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಬಂದರೆ ಅಚ್ಚರಿ ಪಡಬೇಕಿಲ್ಲ. ಪಾಕ್​ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಆಲ್​ರೌಂಡರ್​ ಜಡೇಜಾ ಇಲ್ಲದಿರುವುದು ತಂಡಕ್ಕೆ ಹೆಚ್ಚಿನ ಸಂಕಷ್ಟ ತಂದೊಡ್ಡಿದೆ. ಚಹಲ್​​​ ಕೈಚಳಕ ನಡೆಯುತ್ತಿಲ್ಲ. ಹೀಗಾಗಿ, ಭುವನೇಶ್ವರ್ ಕುಮಾರ್​, ಅರ್ಷ್‌ದೀಪ್​ ಹಾಗೂ ಬಿಷ್ಣೋಯ್ ಮೇಲೆ ಹೆಚ್ಚಿನ ಒತ್ತಡವಿದೆ. ಚಹಲ್ ಬದಲು ಅಶ್ವಿನ್ ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ
India Playing XI vs SL: ಒಂದು ಬದಲಾವಣೆ ಸಾಧ್ಯತೆ: ಹೀಗಿರಲಿದೆ ಪ್ಲೇಯಿಂಗ್ 11
Dinesh Karthik: ಮುಂದಿನ ಪಂದ್ಯದಲ್ಲೂ DK ಗೆ ಚಾನ್ಸ್ ಸಿಗೋದು ಡೌಟ್..!
IND vs SL: ಭಾರತಕ್ಕೆ ಲಂಕಾ ಎದುರಾಳಿ: ಟಿ20ಯಲ್ಲಿ ಯಾರು ಬಲಿಷ್ಠ?
IPL 2023: 3 ತಂಡಗಳಿಗೆ ಹೊಸ ಕೋಚ್​ಗಳ ಆಯ್ಕೆ

ಶ್ರೀಲಂಕಾ ತಂಡ ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದೆ. ಆದರೆ, ಬೌಲರ್​ಗಳು ವಿಫಲರಾಗುತ್ತಿದ್ದಾರೆ. ಇಡೀ ಏಷ್ಯಾಕಪ್ 2022 ಟೂರ್ನಿಯಲ್ಲಿ ಲಂಕಾ ಬೌಲರ್​ಗಳು ಮೋಡಿ ಮಾಡಿಲ್ಲ. ದನುಷ್ಕ ಗುಣತಿಲಕ, ಪತುಮ್‌ ನಿಸಂಕ, ಭನುಕಾ ರಾಜಪಕ್ಷ, ಕುಸಲ್ ಮೆಂಡಿಸ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇವರಿಗೆ ಬೌಲರ್​ಗಳು ಕೂಡ ಸಾಥ್ ನೀಡಿದರೆ ಭಾರತಕ್ಕೆ ಈ ಪಂದ್ಯ ಕಠಿಣವಾಗುವುದು ಖಚಿತ.

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದ ಪಿಚ್‌ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ. ಈ ಪಿಚ್​ನಲ್ಲಿ ನಿಧಾನಗತಿಯ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದ ಇತಿಹಾಸವಿದೆ.

ಸಂಭಾವ್ಯ ಪ್ಲೇಯಿಂಗ್ XI:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.

ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪತುಮ್‌ ನಿಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್‌ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.

Published On - 8:07 am, Tue, 6 September 22