AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 3 ತಂಡಗಳಿಗೆ ಹೊಸ ಕೋಚ್​ಗಳ ಆಯ್ಕೆ

IPL 2023 Updates: ಎಸ್​ಆರ್​​ಹೆಚ್​, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳು ಮುಂದಿನ ಸೀಸನ್ ಐಪಿಎಲ್​ನಲ್ಲಿ ಹೊಸ ಕೋಚ್​ಗಳೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ.

IPL 2023: 3 ತಂಡಗಳಿಗೆ ಹೊಸ ಕೋಚ್​ಗಳ ಆಯ್ಕೆ
IPL 2023
TV9 Web
| Edited By: |

Updated on:Sep 05, 2022 | 5:31 PM

Share

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಸಿದ್ಧತೆಗಳು ಈಗಾಗಲೇ ಶುರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಕೆಲ ಫ್ರಾಂಚೈಸಿಗಳು ತಮ್ಮ ಸಿಬ್ಬಂದಿ ವರ್ಗಗಳ ಬದಲಾವಣೆಗೆ ಮುಂದಾಗಿದೆ. ಅದರಂತೆ ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕಲಂ ಅವರನ್ನು ಕೈ ಬಿಟ್ಟಿದೆ. ಬದಲಾಗಿ ಮುಂಬೈ ರಣಜಿ ತಂಡದ ಮಾಜಿ ಕೋಚ್ ಚಂದ್ರಕಾಂತ್ ಪಂಡಿತ್​ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ. ಇನ್ನು ಸನ್​ರೈಸರ್ಸ್ ಹೈದರಾಬಾದ್ ತಂಡ ಕೂಡ ಮುಖ್ಯ ಕೋಚ್ ಸ್ಥಾನದಿಂದ ಆಸ್ಟ್ರೇಲಿಯಾದ ಟಾಮ್ ಮೂಡಿಯನ್ನು ವಜಾಗೊಳಿಸಿದೆ.

ಟಾಮ್ ಮೂಡಿ 2013 ರಿಂದ 2019 ರವರೆಗೆ ಎಸ್​ಆರ್​ಹೆಚ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ 2016 ರಲ್ಲಿ ಎಸ್​ಆರ್​ಹೆಚ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು. ಇದಾದ ಬಳಿಕ 2021 ರಲ್ಲಿ ಮತ್ತೆ ಕೋಚ್ ಆಗಿ ನೇಮಕವಾಗಿದ್ದರು. ಆದರೆ ಕಳೆದೆರಡು ಸೀಸನ್​ಗಳಲ್ಲಿ ತಂಡದ ಕಳಪೆ ಪ್ರದರ್ಶನದ ಕಾರಣ ಅವರನ್ನು ಕೈ ಬಿಡಲಾಗಿದೆ. ಅಲ್ಲದೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಹೊಸ ಕೋಚ್ ಆಗಿ ವೆಸ್ಟ್ ಇಂಡೀಸ್​ನ ದಂತಕಥೆ ಬ್ರಿಯಾನ್ ಲಾರಾ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ಮುಖ್ಯ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಯನ್ನು ಕೈಬಿಟ್ಟಿದೆ. ಮುಂದಿನ ಸೀಸನ್​ಗಾಗಿ ಪಂಜಾಬ್ ಕಿಂಗ್ಸ್​ ಕುಂಬ್ಳೆ ಅವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಹೀಗಾಗಿ ಪಂಜಾಬ್ ಪರ ಕೂಡ ಹೊಸ ಕೋಚ್ ಆಗಿ ಇಂಗ್ಲೆಂಡ್ ತಂಡದ ಮಾಜಿ ಕೋಚ್ ಟ್ರೆವರ್ ಬೇಲಿಸ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಹಿಂದೆ 2020 ರಲ್ಲಿ ಟ್ರೆವರ್ ಬೇಲಿಸ್ ಎಸ್​ಆರ್​ಹೆಚ್​ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ 2019 ರಲ್ಲಿ ಇಂಗ್ಲೆಂಡ್ ತಂಡವು ಬೇಲಿಸ್ ಅವರ ಸಾರಥ್ಯದಲ್ಲೇ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. ಇಲ್ಲಿ ಮತ್ತೊಂದು ವಿಶೇಷ ಎಂದರೆ 2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದಾಗ ಕೆಕೆಆರ್​ ತಂಡದ ಮುಖ್ಯ ಕೋಚ್ ಆಗಿದ್ದವರೇ ಟ್ರೆವರ್ ಬೇಲಿಸ್.

ಹೀಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಇದೀಗ ಟ್ರೆವರ್ ಬೇಲಿಸ್ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ. ಅದರಂತೆ ಎಸ್​ಆರ್​​ಹೆಚ್​, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳು ಮುಂದಿನ ಸೀಸನ್ ಐಪಿಎಲ್​ನಲ್ಲಿ ಹೊಸ ಕೋಚ್​ಗಳೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ.

Published On - 5:31 pm, Mon, 5 September 22