IND vs WI: ವಿಂಡೀಸ್ ವಿರುದ್ಧ ಮಿಂಚಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ! ಏಕದಿನ ಸರಣಿ ಭಾರತದ ಕೈವಶ

| Updated By: ಪೃಥ್ವಿಶಂಕರ

Updated on: Feb 09, 2022 | 9:44 PM

IND vs WI: ಭಾರತದ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅದರಲ್ಲೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಮೊದಲ ಐದು ಓವರ್ ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಪಡೆದರು. ಕೃಷ್ಣ ಪಂದ್ಯದಲ್ಲಿ 12 ರನ್ ನೀಡಿ 4 ವಿಕೆಟ್ ಪಡೆದರು.

IND vs WI: ವಿಂಡೀಸ್ ವಿರುದ್ಧ ಮಿಂಚಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ! ಏಕದಿನ ಸರಣಿ ಭಾರತದ ಕೈವಶ
ಟೀಂ ಇಂಡಿಯಾ
Follow us on

ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ (India vs West Indies, 2nd ODI) ವೆಸ್ಟ್ ಇಂಡೀಸ್ ಅನ್ನು ಭಾರತ 44 ರನ್​ಗಳಿಂದ ಮಣಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಭಾರತ ತಂಡ ಕೇವಲ 237 ರನ್ ಗಳಿಸಿದ್ದರೂ ಅತಿಥಿಗಳಿಗೆ ಗುರಿ ತಲುಪಲು ಅವಕಾಶ ನೀಡಲಿಲ್ಲ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಪರಾಭವಗೊಂಡರು. ನಾಯಕ ನಿಕೋಲಸ್ ಪೂರನ್ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಶಾಯ್ ಹೋಪ್ ಉತ್ತಮ ಆರಂಭವನ್ನು ಪಡೆದರು ಆದರೆ ಕೆಟ್ಟ ಹೊಡೆತವನ್ನು ಆಡುವ ಮೂಲಕ ತಮ್ಮ ವಿಕೆಟ್ ಕಳೆದುಕೊಂಡರು. ಶಮ್ರಾ ಬ್ರೂಕ್ಸ್ 44 ರನ್‌ಗಳ ಇನ್ನಿಂಗ್ಸ್ ಆಡಿದರು ಆದರೆ ಕೆಟ್ಟ ಹೊಡೆತವೂ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿತು.

ಭಾರತದ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅದರಲ್ಲೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಮೊದಲ ಐದು ಓವರ್ ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಪಡೆದರು. ಕೃಷ್ಣ ಪಂದ್ಯದಲ್ಲಿ 12 ರನ್ ನೀಡಿ 4 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು. ದೀಪಕ್ ಹೂಡಾ ಮತ್ತು ಸಿರಾಜ್ ತಲಾ 1 ವಿಕೆಟ್ ಪಡೆದರು.

ಕಳಪೆ ಬ್ಯಾಟಿಂಗ್ ನಡುವೆಯೂ ಗೆದ್ದ ಭಾರತ

ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ನಾಯಕ ರೋಹಿತ್ ಶರ್ಮಾ ಕೇವಲ 5 ರನ್ ಗಳಿಸಿ ಔಟಾದರು. ಇದಾದ ಬಳಿಕ ಕೊಹ್ಲಿ ಹಾಗೂ ಪಂತ್ ಕ್ರೀಸ್​ನಲ್ಲಿ ನೆಲೆಯೂರಲು ಯತ್ನಿಸಿದರಾದರೂ 12ನೇ ಓವರ್​ನಲ್ಲಿ ಓಡಿನ್ ಸ್ಮಿತ್ ಇಬ್ಬರಿಗೂ ಪೆವಿಲಿಯನ್ ಹಾದಿ ತೋರಿಸಿದರು. 18-18 ರನ್ ಗಳಿಸಿದ ನಂತರ ಪಂತ್ ಮತ್ತು ಕೊಹ್ಲಿ ಇಬ್ಬರೂ ಔಟಾದರು. ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು, ಅಂತಹ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಉತ್ತಮ ಜೊತೆಯಾಟ ನೀಡಿದರು. ಅದರಲ್ಲೂ ಕೆಎಲ್ ರಾಹುಲ್ ಅತ್ಯಂತ ವೇಗವಾಗಿ ರನ್ ಕಲೆಹಾಕುತ್ತಿರುವುದು ಕಂಡುಬಂತು. ಇವರಿಬ್ಬರ ನಡುವೆ 90 ರನ್‌ಗಳ ಅಮೂಲ್ಯ ಜೊತೆಯಾಟವಿತ್ತು. ಆದರೆ, 30ನೇ ಓವರ್‌ನಲ್ಲಿ ರಾಹುಲ್ ಔಟಾದ ಕಾರಣ ಈ ಜೊತೆಯಾಟ ಮುರಿದುಬಿತ್ತು. ರಾಹುಲ್ ವೈಯಕ್ತಿಕ ಸ್ಕೋರ್ 49ರಲ್ಲಿ ರನ್ ಔಟ್ ಆದರು.

ರಾಹುಲ್ ನಿರ್ಗಮನದ ನಂತರ ಸೂರ್ಯಕುಮಾರ್ ಯಾದವ್ ವಾಷಿಂಗ್ಟನ್ ಸುಂದರ್ ಜೊತೆ ಕ್ರೀಸ್​ನಲ್ಲಿ ಕಾಲ ಕಳೆದರು. ಸೂರ್ಯಕುಮಾರ್ 70 ಎಸೆತಗಳಲ್ಲಿ ಎರಡನೇ ಏಕದಿನ ಅರ್ಧಶತಕ ಪೂರೈಸಿದರು. ಆದಾಗ್ಯೂ, 13 ಎಸೆತಗಳ ನಂತರ, ಅವರ ವಿಕೆಟ್ ಕೆಟ್ಟ ಶಾಟ್ ಆಡುವ ಮೂಲಕ ಹೋಯಿತು. ಸೂರ್ಯಕುಮಾರ್ 64 ರನ್ ಗಳಿಸಿದರು ಮತ್ತು ವಾಷಿಂಗ್ಟನ್ ಸುಂದರ್ ಕೂಡ 24 ರನ್ ಗಳಿಸಿ ಔಟಾದರು. ದೀಪಕ್ ಹೂಡಾ ಕೆಳ ಕ್ರಮಾಂಕದೊಂದಿಗೆ ಗಮನಾರ್ಹ ಕೊಡುಗೆ ನೀಡಿದರು. ಹೂಡಾ 25 ಎಸೆತಗಳಲ್ಲಿ 29 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 50 ಓವರ್‌ಗಳಲ್ಲಿ 237 ರನ್ ಗಳಿಸಿತು.

ಇದನ್ನೂ ಓದಿ:ICC ODI Rankings: ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ- ರೋಹಿತ್ ನಡುವೆ ಪೈಪೋಟಿ! ಏಳನೇ ಸ್ಥಾನದಲ್ಲಿ ಬುಮ್ರಾ

Published On - 9:34 pm, Wed, 9 February 22