IND vs WI: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡು ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ

ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಮಾರಕ ಬೌಲಿಂಗ್ ಜೊತೆ ಇತರೆ ಬೌಲರ್​ಗಳ ಸಹಕಾರದ ನೆರವಿನಿಂದ ರೋಹಿತ್ ಶರ್ಮಾ ಪಡೆ 44 ರನ್​ಗಳ ಜಯದೊಂದಿಗೆ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶೇಷ ಸಾಧನೆಯನ್ನೂ ಮಾಡಿದೆ.

IND vs WI: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡು ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
India vs West Indies 2nd ODI
Follow us
| Updated By: Vinay Bhat

Updated on: Feb 10, 2022 | 7:19 AM

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ (India vs West Indies) ತಂಡ ಮತ್ತೊಂದು ಅಮೋಘ ಗೆಲುವು ಕಂಡಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಅವರ ಮಾರಕ ಬೌಲಿಂಗ್ ಜೊತೆ ಇತರೆ ಬೌಲರ್​ಗಳ ಸಹಕಾರದ ನೆರವಿನಿಂದ ರೋಹಿತ್ ಶರ್ಮಾ ಪಡೆ 44 ರನ್​ಗಳ ಜಯದೊಂದಿಗೆ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಬ್ಯಾಟಿಂಗ್​ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಸಾಧಿಸಿಲ್ಲವಾದರೂ ಬೌಲರ್​ಗಳು ಕೆರಿಬಿಯನ್ನರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ (Team India) ವಿಶೇಷ ಸಾಧನೆಯನ್ನೂ ಮಾಡಿದೆ. ದ್ವಿಪಕ್ಷೀಯ ಸರಣಿಯಲ್ಲಿ ತಂಡವೊಂದರ ವಿರುದ್ಧ ದೀರ್ಘಕಾಲದಿಂದ ಅತಿ ಹೆಚ್ಚು ಗೆಲುವನ್ನ ಸಾಧಿಸಿದ ತಂಡವಾಗಿ ಭಾರತ ಹೊರಹೊಮ್ಮಿದೆ. 2007 ರಿಂದ 2022ರ ವರೆಗೆ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 11 ಸರಣಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನ 1996-2021ರ ಅವಧಿಯಲ್ಲಿ 11 ಸರಣಿಯನ್ನ ಗೆದ್ದ ಸಾಧನೆ ಮಾಡಿತ್ತು.

ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ಉತ್ತಮ ಆರಂಭ ಪಡೆದುಕೊಂಡಿರಲಿಲ್ಲ. ತಂಡದ ಆರಂಭಿಕರಲ್ಲಿ ಬದಲಾವಣೆ ಮಾಡಿ ಪ್ರಯೋಗ ನಡೆಸಿದರೂ ಪ್ರಯೋಜನ ಸಿಗಲಿಲ್ಲ. ರಿಷಭ್ ಪಂತ್(18) ಜೊತೆಗೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(5) ಉತ್ತಮ ಆರಂಭ ಒದಗಿಸಲು ವಿಫರಾದರು. ಮಾಜಿ ನಾಯಕ ವಿರಾಟ್ ಕೊಹ್ಲಿ(18) ಕೂಡ ದೊಡ್ಡ ಮೊತ್ತ ಗಳಿಸಲಿಲ್ಲ. ಭಾರತವು 43 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿತು. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್.

ರಾಹುಲ್ ಮತ್ತು ಸೂರ್ಯಕುಮಾರ್ 91 ರನ್‌ಗಳ ಜೊತೆಯಾಟವನ್ನು ಆಡುವುದರ ಮೂಲಕ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ರಾಹುಲ್ 49 ರನ್ (48 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 64 ರನ್ (83 ಎಸೆತ, 5 ಬೌಂಡರಿ) ಕಲೆಹಾಕಿ ತಂಡಕ್ಕೆ ಆಪತ್ಬಾಂಧವರಾದರು. ಕೆಳ ಕ್ರಮಾಂಕದಲ್ಲಿ ದೀಪಕ್ ಹೂಡಾ 29 ರನ್ (25 ಎಸೆತ, 2 ಬೌಂಡರಿ) ಮತ್ತು ವಾಷಿಂಗ್ಟ್‌ನ್ ಸುಂದರ್ 24 ರನ್ (41 ಎಸೆತ, 1 ಬೌಂಡರಿ) ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿತು. ಯುಜ್ವೇಂದ್ರ ಚಹಲ್ ಅಜೇಯ 11 ಹಾಗೂ ಪ್ರಸಿದ್ಧ್ ಕೃಷ್ಣ ಔಟ್ ಆಗದೆ 0 ರನ್ ಕಲೆಹಾಕಿದರು.

238 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಭಾರತೀಯ ಬೌಲರ್​​ಗಳ ದಾಳಿಗೆ ನಲುಗಿ ಹೋಯಿತು. ಟೀಮ್ ಇಂಡಿಯಾ ಬೌಲರ್ ಗಳು ಆರಂಭದಿಂದಲೇ ನಿಯಂತ್ರಣ ಸಾಧಿಸಿದರು. ಆರಂಭಿಕ ಆಟಗಾರ ಶಾಯ್ ಹೋಪ್ 27 ರನ್ (54 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು ನಂತರ ವಿಕೆಟ್ ಕಳೆದುಕೊಂಡು ಸಾಗಿದ ವಿಂಡೀಸ್ ತಂಡಕ್ಕೆ ಶಮರ್ ಬ್ರೂಕ್ಸ್ ಆಸರೆಯಾದರು. ಆದರೆ 44 ರನ್(64 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿದ ವೇಳೆ ದೀಪಕ್ ಹೂಡಾ ದಾಳಿಯಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ನಂತರ ಕೆಳ ಕ್ರಮಾಂಕದಲ್ಲಿ ಅಕೇಲ್ ಹೋಸೇನ್ 34 ರನ್ (52 ಎಸೆತ, 3 ಬೌಂಡರಿ) ಮತ್ತು ಓಡನ್ ಸ್ಮಿತ್ 24 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ನಿರೀಕ್ಷೆಗೆ ತಕ್ಕಂತೆ ಬ್ಯಾಟ್‍ ಬೀಸಲು ವಿಫಲರಾದರು.

ಈ ಮೂಲಕ ವೆಸ್ಟ್ ಇಂಡೀಸ್ 46 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲ್ ಔಟ್ ಆಯಿತು.9 ಓವರ್ ಬೌಲಿಂಗ್ ಮಾಡಿ 3 ಮೇಡನ್ ಓವರ್ ಜೊತೆಗೆ ಕೇವಲ 12 ರನ್ ನೀಡಿದ ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ತಂಡದ 4 ವಿಕೆಟ್ ಪಡೆದು ಮಿಂಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.

IPL 2022 Auction: ಬರೋಬ್ಬರಿ 9 ಹರಾಜಿನಲ್ಲಿ ಭಾಗವಹಿಸಿ ದುಬಾರಿ ಬೆಲೆ ಪಡೆದ ಭಾರತದ ಬೌಲರ್ ಯಾರು ಗೊತ್ತಾ?

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ