IPL 2022 Auction: ಬರೋಬ್ಬರಿ 9 ಹರಾಜಿನಲ್ಲಿ ಭಾಗವಹಿಸಿ ದುಬಾರಿ ಬೆಲೆ ಪಡೆದ ಭಾರತದ ಬೌಲರ್ ಯಾರು ಗೊತ್ತಾ?

IPL 2022 Auction: ಆದಾಗ್ಯೂ, 2018 ರಲ್ಲಿ, ಜಯದೇವ್ ಉನದ್ಕತ್ ಬಂಪರ್ ಗಳಿಸಿದರು. ಅವರನ್ನು ರಾಜಸ್ಥಾನ್ ರಾಯಲ್ಸ್ 11.5 ಕೋಟಿಗೆ ಖರೀದಿಸಿತು. 2019 ರಲ್ಲಿ, ರಾಜಸ್ಥಾನ್ ರಾಯಲ್ಸ್ ಅವರನ್ನು ಬಿಡುಗಡೆ ಮಾಡಿ ಮತ್ತೆ ಹರಾಜಿನಲ್ಲಿ ಇರಿಸಿತು

IPL 2022 Auction: ಬರೋಬ್ಬರಿ 9 ಹರಾಜಿನಲ್ಲಿ ಭಾಗವಹಿಸಿ ದುಬಾರಿ ಬೆಲೆ ಪಡೆದ ಭಾರತದ ಬೌಲರ್ ಯಾರು ಗೊತ್ತಾ?
ಆರ್​ಆರ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Feb 09, 2022 | 9:47 PM

ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ( IPL 2022 Mega Auction) 10 ಐಪಿಎಲ್ ತಂಡಗಳು ಆಟಗಾರರ ಮೇಲೆ ಬಾಜಿ ಕಟ್ಟಲಿವೆ. ವಿಶ್ವದ ಅತಿದೊಡ್ಡ ಲೀಗ್ (IPL 2022 Auction) ಹರಾಜಿನಲ್ಲಿ ಆಟಗಾರರ ಮೇಲೆ ಸಾಕಷ್ಟು ಹಣ ಹರಿಯುತ್ತದೆ. ಹರಾಜಿನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಆಟಗಾರನು ಉತ್ತಮ ಮೊತ್ತವನ್ನು ಪಡೆಯಲಿ ಎಂದು ಪ್ರಾರ್ಥಿಸುತ್ತಾನೆ. ಐಪಿಎಲ್ ಮಾತ್ರ ಅಪರಿಚಿತ ಆಟಗಾರರಿಗೆ ಕೋಟಿಗಟ್ಟಲೆ ಹಣ ವ್ಯಯಿಸುವ ಮತ್ತು ದೊಡ್ಡ ಆಟಗಾರರಿಗೆ ಹೆಚ್ಚು ಹಣ ಸಿಗದ ಏಕೈಕ ವೇದಿಕೆಯಾಗಿದೆ. ಐಪಿಎಲ್ ಹರಾಜಿನಲ್ಲಿ 9 ಬಾರಿ ಭಾಗವಹಿಸಿದ ಮತ್ತು ಪ್ರತಿ ಬಾರಿಯೂ ಅವರನ್ನು ಖರೀದಿಸಿದ ಭಾರತೀಯ ಆಟಗಾರನೂ ಇದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ, ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ (Jaydev Unadkat) ಅವರು ಐಪಿಎಲ್ ಹರಾಜಿನಲ್ಲಿ 9 ಬಾರಿ ಅಖಾಡದಲ್ಲಿದ್ದು ಪ್ರತಿ ಭಾರಿಯೂ ಮಾರಾಟವಾಗಿದ್ದಾರೆ.

ಈ ಎಡಗೈ ವೇಗದ ಬೌಲರ್ ಮೇಲೆ ತಂಡಗಳು ಕೋಟ್ಯಂತರ ರೂಪಾಯಿಗಳ ಸುರಿಮಳೆಗೈದಿವೆ. ಯಾವ ಸೀಸನ್‌ನ ಹರಾಜಿನಲ್ಲಿ ಜಯದೇವ್ ಉಂದ್ಕತ್ ಎಷ್ಟು ಹಣವನ್ನು ಪಡೆದರು ಎಂಬುದನ್ನು ನೀವು ಮುಂದೆ ಓದುತ್ತೀರಿ. ಆದರೆ ಮೊದಲು, ಈ ಆಟಗಾರನ ಐಪಿಎಲ್ ಅಂಕಿಅಂಶಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಜಯದೇವ್ ಉನದ್ಕತ್ 86 ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದು, 8.74 ಎಕಾನಮಿ ರೇಟ್ ಹೊಂದಿದ್ದಾರೆ. ಉನದ್ಕತ್ ಈ ಪಂದ್ಯದಲ್ಲಿ ಎರಡು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಜಯದೇವ್ ಉನದ್ಕತ್ ಇತಿಹಾಸ

ಜಯದೇವ್ ಉನದ್ಕತ್ ಅವರು 2011 ರಲ್ಲಿ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 1.15 ಕೋಟಿಗೆ ಖರೀದಿಸಿತು. ಉನಾದ್ಕತ್ ಅವರನ್ನು 2012 ರಲ್ಲಿ ಕೋಲ್ಕತ್ತಾ ತಂಡದಲ್ಲಿ ಉಳಿಸಿಕೊಂಡಿತು ಮತ್ತು ನಂತರ ಅವರನ್ನು ಮುಂದಿನ ಋತುವಿನಲ್ಲಿ ಬಿಡುಗಡೆ ಮಾಡಲಾಯಿತು. 2013 ರಲ್ಲಿ ಉನದ್ಕತ್ ಮತ್ತೆ ಹರಾಜಿಗೆ ಬಂದರು ಮತ್ತು ಅವರನ್ನು RCB 2.41 ಕೋಟಿ ವೆಚ್ಚದಲ್ಲಿ ತನ್ನದಾಗಿಸಿಕೊಂಡಿತು. ಮುಂದಿನ ವರ್ಷ ಅಂದರೆ 2014ರಲ್ಲಿ ಮತ್ತೆ ಉನಾದ್ಕತ್ ಹರಾಜಿಗೆ ಬಂದರು ಮತ್ತು ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ 2.80 ಕೋಟಿಗೆ ಖರೀದಿಸಿತು. 2015 ರಲ್ಲಿ, ಉನಾದ್ಕತ್ ಮತ್ತೊಮ್ಮೆ ಹರಾಜಿಗೆ ಬಂದರು ಮತ್ತು ಮತ್ತೊಮ್ಮೆ ದೆಹಲಿ ಅವರನ್ನು 1.15 ಕೋಟಿಗೆ ಖರೀದಿಸಿತು. 2016ರಲ್ಲಿ ಉನದ್ಕತ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 1.6 ಕೋಟಿಗೆ ಖರೀದಿಸಿತ್ತು. 2017 ರ ಹರಾಜಿನಲ್ಲಿ ಉನಾದ್ಕತ್ ಅವರ ಮೌಲ್ಯವು ಗಮನಾರ್ಹವಾಗಿ ಕುಸಿಯಿತು ಮತ್ತು ಅವರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ 30 ಲಕ್ಷಕ್ಕೆ ಖರೀದಿಸಿತು.

ಆದಾಗ್ಯೂ, 2018 ರಲ್ಲಿ, ಜಯದೇವ್ ಉನದ್ಕತ್ ಬಂಪರ್ ಗಳಿಸಿದರು. ಅವರನ್ನು ರಾಜಸ್ಥಾನ್ ರಾಯಲ್ಸ್ 11.5 ಕೋಟಿಗೆ ಖರೀದಿಸಿತು. 2019 ರಲ್ಲಿ, ರಾಜಸ್ಥಾನ್ ರಾಯಲ್ಸ್ ಅವರನ್ನು ಬಿಡುಗಡೆ ಮಾಡಿ ಮತ್ತೆ ಹರಾಜಿನಲ್ಲಿ ಇರಿಸಿತು ಮತ್ತು ಅವರು ಮತ್ತೆ 8.4 ಕೋಟಿ ರೂ.ಗಳಿಗೆ ಮಾರಾಟವಾದರು. 2020 ರಲ್ಲಿ ರಾಜಸ್ಥಾನ ಅವರನ್ನು ಮತ್ತೆ 3 ಕೋಟಿಗೆ ಖರೀದಿಸಿತು. ಉನದ್ಕತ್ 9 ಬಾರಿ ಹರಾಜಿಗೆ ಬಂದು ಪ್ರತಿ ಬಾರಿಯೂ ಮಾರಾಟವಾಗಿದ್ದಾರೆ. ಈಗ ಐಪಿಎಲ್ 2022 ರಲ್ಲಿ ಈ ಬೌಲರ್ ಮೇಲೆ ಯಾವ ತಂಡ ಬಾಜಿ ಕಟ್ಟುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

Published On - 9:47 pm, Wed, 9 February 22

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್