Virat Kohli Catch: ವಿರಾಟ್ ಕೊಹ್ಲಿ ಹಿಡಿದ ಸ್ಟನ್ನಿಂಗ್ ಕ್ಯಾಚ್​ ಕಂಡು ದಂಗಾದ ರೋಹಿತ್ ಮಾಡಿದ್ದೇನು ನೋಡಿ

IND vs WI Second ODI: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಕ್ಯಾಚ್ ಹಿಡಿದ ತಕ್ಷಣ ನಾಯಕ ರೋಹಿತ್ ಶರ್ಮಾ ಏನು ಮಾಡಿದರು ಎಂಬುದನ್ನು ನೋಡಿ.

Virat Kohli Catch: ವಿರಾಟ್ ಕೊಹ್ಲಿ ಹಿಡಿದ ಸ್ಟನ್ನಿಂಗ್ ಕ್ಯಾಚ್​ ಕಂಡು ದಂಗಾದ ರೋಹಿತ್ ಮಾಡಿದ್ದೇನು ನೋಡಿ
Virat Kohli Catch IND vs WI 2nd ODI
Follow us
TV9 Web
| Updated By: Vinay Bhat

Updated on:Feb 10, 2022 | 10:47 AM

ಇಂಗ್ಲೆಂಡ್ ವಿರುದ್ಧದ ಸರಣಿ ಗೆದ್ದು ನೇರವಾಗಿ ಭಾರತಕ್ಕೆ ಬಂದ ವೆಸ್ಟ್ ಇಂಡೀಸ್ (West Indies) ತಂಡಕ್ಕೆ ಭಾರೀ ಮುಖಭಂಗವಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲುಂಡು ಸರಣಿ ಕಳೆದುಕೊಂಡಿದೆ. ಟೀಮ್ ಇಂಡಿಯಾ (Team India) ಆಫ್ರಿಕಾ ನೆಲದಲ್ಲಿ ಅನುಭವಿಸಿದ ಹೀನಾಯ ಸೋಲನ್ನು ಮರೆತು ತವರಿನಲ್ಲಿ ಬೊಂಬಾಟ್ ಕಮ್​​ಬ್ಯಾಕ್ ಮಾಡಿದೆ. ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 44 ರನ್​ಗಳ ಭರ್ಜರಿ ಗೆಲುವು ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದು, ಇದೀಗ ಕ್ಲೀನ್​ಸ್ವೀಪ್​ನತ್ತ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ನಿರೀಕ್ಷೆಗೆ ತಕ್ಕ ಆಟವಾಡಿಲ್ಲವಾದರೂ ಬೌಲಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ನೀಡಿದ ಸಂಘಟಿತ ಪ್ರದರ್ಶನದಿಂದ ಗೆಲುವು ಕಂಡಿತು. ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ ಮಿಂಚು ಹರಿಸಿದರೆ, ಭಾರತದ ಫೀಲ್ಡಿಂಗ್​ ಕೂಡ ಅದ್ಭುತವಾಗಿತ್ತು. ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಿಡಿದ ಒಂದು ಕ್ಯಾಚ್ ಅಮೋಘವಾಗಿತ್ತು.

ಹೌದು, ಭಾರತ ನೀಡಿದ್ದ 238 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲಿ ಉತ್ತಮ ಆಟವಾಡಿತಾದರೂ ಬಳಿಕ ಸುದೀರ್ಘವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ಅಂತಿಮ ಹಂತದಲ್ಲಿ ಭಾರತದ ಗೆಲುವಿಗೆ ಎದುರಾಗಿ ನಿಂತಿದ್ದು ಓಡೆನ್ ಸ್ಮಿತ್. 2 ಸಿಕ್ಸ್ ಸಿಡಿಸಿ ತಂಡಕ್ಕೆ ಆಸೆರಾಗಿದ್ದ ಇವರ ವಿಕೆಟ್ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿತ್ತು. ಇಂಥಹ ಕಠಿಣ ಸಂದರ್ಭದಲ್ಲಿ ನಾಯಕ ರೋಹಿತ್ 45ನೇ ಓವರ್​ ಅನ್ನು ವಾಷಿಂಗ್ಟನ್ ಸುಂದರ್​ಗೆ ನೀಡಿದರು.

ಸುಂದರ್ ಅವರ ಈ ಓವರ್​ನ ಕೊನೇ ಎಸೆತದಲ್ಲಿ ಸ್ಮಿತ್ ಚೆಂಡನ್ನ ಸಿಕ್ಸ್​ಗೆಂದು ಯತ್ನಿಸಿದರು. ಆದರೆ, ಟಾಪ್ ಎಡ್ಜ್ ಆಗಿ ಚೆಂಡು ಡೀಪ್ ಮಿಡ್ ವಿಕೆಟ್ ಕಡೆ ಸಾಗಿತು. ಫೀಲ್ಡ್​​ನಲ್ಲಿದ್ದ ವಿರಾಟ್ ಕೊಹ್ಲಿ ಓಡಿ ಬಂದು ಸ್ಟನ್ನಿಂಗ್ ಕ್ಯಾಚ್ ಹಿಡಿದರು. ಭಾರತ ತಂಡಕ್ಕೆ ಮಾರಕವಾಗಿದ್ದ ಬ್ಯಾಟರ್​ನ ಅನ್ನು ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದು ಔಟ್ ಮಾಡಿದ್ದನ್ನು ಕಂಡು ನಾಯಕ ರೋಹಿತ್ ಒಂದು ಕ್ಷಣ ದಂಗಾದರು. ಬಳಿಕ ಕೊಹ್ಲಿ ಬಳಿಕ ನಗುತ್ತಾ ಓಡಿ ಬಂದು ಸಂಭ್ರಮ ಹಂಚಿಕೊಂಡರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಆಘಾತದ ನಡುವೆ ಕನ್ನಡಿಗ ಕೆಎಲ್ ರಾಹುಲ್ (49 ರನ್, 48 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (64ರನ್, 83 ಎಸೆತ, 5 ಬೌಂಡರಿ) ಆಸರೆಯಿಂದ 9 ವಿಕೆಟ್‌ಗೆ 237 ರನ್ ಪೇರಿಸಿತು. ಪ್ರತಿಯಾಗಿ ವಿಂಡೀಸ್ ತಂಡ ಪ್ರಸಿದ್ಧ್ ಕೃಷ್ಣ ಸಾರಥ್ಯದಲ್ಲಿ ಸಂಘಟಿಸಿದ ದಾಳಿಗೆ ನಲುಗಿ46 ಓವರ್‌ಗಳಲ್ಲಿ 193 ರನ್‌ಗಳಿಗೆ ಸರ್ವಪತನ ಕಂಡಿತು. 9 ಓವರ್ ಬೌಲಿಂಗ್ ಮಾಡಿ 3 ಮೇಡನ್ ಓವರ್ ಜೊತೆಗೆ ಕೇವಲ 12 ರನ್ ನೀಡಿದ ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ತಂಡದ 4 ವಿಕೆಟ್ ಪಡೆದು ಮಿಂಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

Rohit Sharma: ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಹೊಗಳಿದ್ದು ಯಾರನ್ನ ನೋಡಿ

IND vs WI: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡು ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ

Published On - 10:12 am, Thu, 10 February 22

ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ