Rohit Sharma: ಮೈದಾನದಲ್ಲೇ ತಾಳ್ಮೆ ಕಳೆದುಕೊಂಡ ರೋಹಿತ್: ಸಿಟ್ಟಿನಲ್ಲಿ ಚಹಲ್ಗೆ ಹೇಳಿದ್ದೇನು ಗೊತ್ತಾ?
Yuzvendra Chahal and Rohit Sharma Video: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಒಂದು ಕ್ಷಣ ತಾಳ್ಮೆ ಕಳೆದುಕೊಂಡರು. ಯುಜ್ವೇಂದ್ರ ಚಹಲ್ ಮೇಲೆ ಸಿಟ್ಟಿಗೆದ್ದು ಅವರು ಏನು ಹೇಳಿದರು ಎಂಬುದನ್ನು ನೇವೇ ನೋಡಿ.
ಟೀಮ್ ಇಂಡಿಯಾ (Team India) ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ವಶಪಡಿಸಿಕೊಂಡ ಸಂಭ್ರಮದಲ್ಲಿದೆ. ಬುಧವಾರ ನಡೆದ ಎರಡನೇ ಏಕದಿನ ಕದನದಲ್ಲಿ ಭಾರತ 44 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಪ್ರಸಿದ್ಧ್ ಕೃಷ್ಣ (Prasidh Krishna) ಬೌಲಿಂಗ್ ದಾಳಿಗೆ ತತ್ತರಿಸಿದ ಕೆರಿಬಿಯನ್ನರು 200ರ ಗಡಿ ಮುಟ್ಟಲೂ ಸಾಧ್ಯವಾಗದೆ ಸೋಲುಂಡರು. ಭಾರತ 2-0 ಅಂತರದಿಂದ ಏಕದಿನ ಸರಣಿ ವಶಪಡಿಸಿಕೊಂಡಿದ್ದು ಕ್ಲೀನ್ಸ್ವೀಪ್ನತ್ತ ಚಿತ್ತ ನೆಟ್ಟಿದೆ. ಪರಿಪೂರ್ಣ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಮುನ್ನಡೆಸಿದ ಮೊದಲ ಸರಣಿಯಲ್ಲೇ ಭಾರತ ಬೊಂಬಾಟ್ ಪ್ರದರ್ಶನ ತೋರಿದೆ. ಹಿಟ್ಮ್ಯಾನ್ ನಾಯಕತ್ವದ ವೈಖರಿ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಬೌಲರ್ಗಳ ಉಪಯೋಗಿಸಿಕೊಂಡಿದ್ದಯ ಅತ್ಯುತ್ತಮವಾಗಿತ್ತು. ಸಾಮಾನ್ಯವಾಗಿ ಮೈದಾನದಲ್ಲಿ ಕೂಲ್ ಆಗೇ ಇರುವ ರೋಹಿತ್ ಎರಡನೇ ಏಕದಿನ ಪಂದ್ಯದಲ್ಲಿ ಮಾತ್ರ ಕೊಂಚ ಅಗ್ರೆಸಿವ್ ಆಗಿದ್ದರು. ಒಂದು ಹಂತದಲ್ಲಿ ಆಟಗಾರನ ಮೇಲೆ ತಾಳ್ಮೆಯನ್ನೂ ಕಳೆದುಕೊಂಡರು.
ಹೌದು, ಭಾರತ ಎರಡನೇ ಏಕದಿನ ಪಂದ್ಯ ಗೆದ್ದ ಕ್ರೆಡಿಟ್ ಬೌಲರ್ಗಳಿಗೆ ಮತ್ತು ನಾಯಕನಿಗೆ ಸಲ್ಲಬೇಕು ಎಂದರೆ ತಪ್ಪಾಗಲಾರದು. ಯಾಕಂದ್ರೆ ನಾಯಕ ಬೌಲರ್ಗಳನ್ನು ಉಪಯೋಗಿಸಕೊಂಡ ರೀತಿ ಮತ್ತು ಬೌಲರ್ಗಳು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಯಿಂದ ಎದುರಾಳಿ ವಿಕೆಟ್ಗಳು ಉರುಳುತ್ತಾ ಸಾಗಿದವು. ಅದರಂತೆ ಪಂದ್ಯದ ಮಹತ್ವದ ಘಟ್ಟದಲ್ಲಿ ರೋಹಿತ್ ಅವರು 45ನೇ ಓವರ್ ಅನ್ನು ವಾಷಿಂಗ್ಟನ್ ಸುಂದರ್ಗೆ ನೀಡಿದರು. ಹಿಟ್ಮ್ಯಾನ್ ತಾಳ್ಮೆ ಕಳೆದುಕೊಂಡಿದ್ದು ಇದೇ ಸಂದರ್ಭದಲ್ಲಿ.
2 ಸಿಕ್ಸ್ ಸಿಡಿಸಿ ಗೆಲುವಿಗೆ ಎದುರಾಗಿ ನಿಂತಿದ್ದ ಓಡೆನ್ ಸ್ಮಿತ್ ವಿಕೆಟ್ ಭಾರತಕ್ಕೆ ತುಂಬಾನೆ ಮುಖ್ಯವಾಗಿತ್ತು. ಹೀಗಾಗಿ ಸುಂದರ್ ಅವರನ್ನು ಕರೆತಂದ ರೋಹಿತ್ ಫೀಲ್ಡ್ ಸೆಟ್ ಮಾಡುತ್ತಿದ್ದರು. ಆಗ ಚಹಲ್ ಅವರ ವರ್ಥನೆ ಕಂಡು ಹಿಟ್ಮ್ಯಾನ್ ಸಿಟ್ಟಿಗೆದ್ದರು. ಹಿಂದೆ ಹೋಗು, ಏನಾಗಿದೆ ನಿನಗೆ, ನೀನು ಯಾಕೆ ಸರಿಯಾಗಿ ಓಡುತ್ತಿಲ್ಲ? ಎಂದು ಸಿಟ್ಟಿನಲ್ಲಿ ಗದರಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Me to my buddies in Gully Cricket when they get tired after 2 overs of Fielding ??? pic.twitter.com/NDIuNWRPY4
— Shantanu Ghosh (@imshantanu105) February 9, 2022
ಪಂದ್ಯ ಮುಗಿದ ಬಳಿಕ ರೋಹಿತ್ ಭಾರತದ ಬೌಲಿಂಗ್ ಪಡೆಯನ್ನು ಹಾಡಿಹೊಗಳಿದರು. “ಸರಣಿಯನ್ನು ಕೈವಶ ಮಾಡಿಕೊಂಡಿದ್ದು ನಿಜಕ್ಕೂ ಖುಷಿ ತಂದಿದೆ. ಈ ಪಂದ್ಯದಲ್ಲಿ ನಮಗೆ ಕೆಲ ಸವಾಲುಗಳಿದ್ದವು. ನಮ್ಮ ಬೌಲಿಂಗ್ ಪಡೆ ಕಣಕ್ಕಿಳಿದು ಅದ್ಭುತ ಪ್ರದರ್ಶನ ತೋರಿತು. ಸೂರ್ಯಕುಮಾರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಸಮಯವನ್ನು ತೆಗೆದುಕೊಂಡು ತಂಡ ಅವರಿಂದ ಏನು ಭಯಸುತ್ತಿದೆ ಎಂಬುದನ್ನು ಅರಿತು ಆಟವಾಡಿದ್ದಾರೆ. ಕೆಎಲ್ ರಾಹುಲ್ ಕೂಡ ಟಾಪ್ ಆರ್ಡರ್, ಮಧ್ಯಮ ಕ್ರಮಾಂಕ ಯಾವುದೇ ಸ್ಥಾನ ಕೊಟ್ಟರು ಅದ್ಭುತ ಆಟವಾಡುತ್ತಿದ್ದಾರೆ,” ಎಂದು ಹೇಳಿದರು.
IND vs WI: ಭಾರತ vs ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಮಾಹಿತಿ
Virat Kohli Catch: ವಿರಾಟ್ ಕೊಹ್ಲಿ ಹಿಡಿದ ಸ್ಟನ್ನಿಂಗ್ ಕ್ಯಾಚ್ ಕಂಡು ದಂಗಾದ ರೋಹಿತ್ ಮಾಡಿದ್ದೇನು ನೋಡಿ