IND C vs PAK C: ಇಂದು ಭಾರತ vs ಪಾಕಿಸ್ತಾನ್ ಮುಖಾಮುಖಿ

|

Updated on: Jul 06, 2024 | 12:07 PM

World Championship of Legends 2024: ಇಂಗ್ಲೆಂಡ್​ನಲ್ಲಿ ಮಾಜಿ ಕ್ರಿಕೆಟಿಗರ ನಡುವಣ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಇಂಡಿಯಾ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿದೆ. ಇಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸುತ್ತಿರುವುದು ವಿಶೇಷ.

IND C vs PAK C: ಇಂದು ಭಾರತ vs ಪಾಕಿಸ್ತಾನ್ ಮುಖಾಮುಖಿ
IND vs PAK
Follow us on

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟಿ20 ಟೂರ್ನಿಯ 8ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಗಲಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯವು ಇದೀಗ ಎಲ್ಲರ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ. ಏಕೆಂದರೆ ಉಭಯ ತಂಡಗಳಲ್ಲೂ ಲೆಜೆಂಡ್ಸ್ ಆಟಗಾರರಿದ್ದು, ಹೀಗಾಗಿ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ಎದುರು ನೋಡುತ್ತಿದ್ದಾರೆ.

ಈ ಪಂದ್ಯದಲ್ಲಿ ಭಾರತೀಯ ಪಡೆಯನ್ನು ಯುವರಾಜ್ ಸಿಂಗ್ ಮುನ್ನಡೆಸಿದರೆ, ಪಾಕ್ ಪಡೆಯ ಸಾರಥ್ಯವನ್ನು ಯೂನಿಸ್ ಖಾನ್ ವಹಿಸಿಕೊಂಡಿದ್ದಾರೆ. ಹಾಗೆಯೇ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್​ರಂತಹ ಸ್ಟಾರ್ ಆಟಗಾರರಿದ್ದಾರೆ.

ಹಾಗೆಯೇ ಪಾಕಿಸ್ತಾನ್ ಚಾಂಪಿಯನ್ಸ್ ತಂಡದಲ್ಲಿ ಶಾಹಿದ್ ಅಫ್ರಿದಿ, ಶೊಯೆಬ್ ಮಲಿಕ್, ಮಿಸ್ಬಾ ಉಲ್ ಹಕ್, ಅಬ್ದುಲ್ ರಝಾಕ್​ನಂತಹ ಅತ್ಯುತ್ತಮ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಾಂಪಿಯನ್ಸ್ ತಂಡಗಳ ಈ ಮುಖಾಮುಖಿಯಲ್ಲೂ ಭರ್ಜರಿ ಹೋರಾಟವನ್ನು ನಿರೀಕ್ಷಿಸಬಹುದು.

ಎಷ್ಟು ಗಂಟೆಗೆ ಪಂದ್ಯ ಶುರು?

ಇಂಡಿಯಾ ಚಾಂಪಿಯನ್ಸ್ vs ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ T20 ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9 ಗಂಟೆಯಿಂದ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಆ್ಯಪ್​ನಲ್ಲಿ ಈ ಮ್ಯಾಚ್​ನ ಲೈವ್ ಸ್ಟ್ರೀಮಿಂಗ್ ಇರಲಿದೆ.

ಉಭಯ ತಂಡಗಳು:

ಇಂಡಿಯಾ ಚಾಂಪಿಯನ್ಸ್ ತಂಡ: ರಾಬಿನ್ ಉತ್ತಪ್ಪ, ನಮನ್ ಓಜಾ (ವಿಕೆಟ್ ಕೀಪರ್), ಸುರೇಶ್ ರೈನಾ, ಯುವರಾಜ್ ಸಿಂಗ್ (ನಾಯಕ), ಗುರುಕೀರತ್ ಸಿಂಗ್ ಮಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಧವಳ್ ಕುಲಕರ್ಣಿ, ರಾಹುಲ್ ಶುಕ್ಲಾ, ಆರ್ ಪಿ ಸಿಂಗ್, ಸೌರಭ್ ತಿವಾರಿ, ಅನುರೀತ್ ಸಿಂಗ್, ರಾಹುಲ್ ಶರ್ಮಾ, ಅಂಬಾಟಿ ರಾಯುಡು, ಪವನ್ ನೇಗಿ.

ಇದನ್ನೂ ಓದಿ: VIDEO: ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್: ಯಾಕೆ ಗೊತ್ತಾ?

ಪಾಕಿಸ್ತಾನ್ ಚಾಂಪಿಯನ್ಸ್ ತಂಡ: ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ಶರ್ಜೀಲ್ ಖಾನ್, ಸೊಹೈಬ್ ಮಕ್ಸೂದ್, ಶೋಯಬ್ ಮಲಿಕ್, ಯೂನಿಸ್ ಖಾನ್ (ನಾಯಕ), ಮಿಸ್ಬಾ ಉಲ್ ಹಕ್, ಶಾಹಿದ್ ಅಫ್ರಿದಿ, ಅಬ್ದುಲ್ ರಝಾಕ್, ಅಮೀರ್ ಯಾಮಿನ್, ವಹಾಬ್ ರಿಯಾಜ್, ಸಯೀದ್ ಅಜ್ಮಲ್, ತೌಫೀಕ್ ಉಮರ್, ಮೊಹಮ್ಮದ್ ಹಫೀಝ್, ಯಾಸಿರ್ ಅರಾಫತ್, ಸೊಹೈಲ್ ತನ್ವಿರ್, ಸೊಹೈಲ್ ಖಾನ್, ಉಮರ್ ಅಕ್ಮಲ್, ತನ್ವೀರ್ ಅಹ್ಮದ್.

 

 

Published On - 11:45 am, Sat, 6 July 24