ದೇವಧರ್ ಟ್ರೋಫಿ ರಿಟರ್ನ್​; 2023-24ರ ದೇಶಿಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

|

Updated on: Apr 10, 2023 | 6:44 PM

India Domestic Cricket Schedule: ಬಿಸಿಸಿಐ ಘೋಷಿಸಿದ ವೇಳಾಪಟ್ಟಿಯು 28 ಜೂನ್ 2023 ರಿಂದ ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗಲಿದೆ.

ದೇವಧರ್ ಟ್ರೋಫಿ ರಿಟರ್ನ್​; 2023-24ರ ದೇಶಿಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
ಪ್ರಾತಿನಿಧಿಕ ಚಿತ್ರ
Follow us on

2023-24ರ ಭಾರತದ ದೇಶಿ ಕ್ರಿಕೆಟ್​ನ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಏಪ್ರಿಲ್ 10 ರಂದು ಪ್ರಕಟಿಸಿದೆ. ಬಿಸಿಸಿಐ ಘೋಷಿಸಿದ ವೇಳಾಪಟ್ಟಿಯು 28 ಜೂನ್ 2023 ರಿಂದ ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗಲಿದೆ. ಅಲ್ಲದೆ ಇದರಲ್ಲಿ ಇನ್ನೊಂದು ವಿಶೇಷತೆ ಎಂದರೆ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ದೇವಧರ್ ಟ್ರೋಫಿಯನ್ನು ಬರೋಬ್ಬರಿ 3 ವರ್ಷಗಳ ನಂತರ ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ದೇವಧರ್ ಟ್ರೋಫಿ ಜೂನ್ 24 ರಿಂದ ಪ್ರಾರಂಭವಾಗಲಿದ್ದು, ಒಟ್ಟು 6 ವಲಯ ತಂಡಗಳು (ಮಧ್ಯ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ವಲಯಗಳು) ಈ ಟ್ರೋಫಿಯಲ್ಲಿ ಆಡಲಿವೆ.

ದೇಶಿ ಕ್ರಿಕೆಟ್​ನ ಪೂರ್ಣ ವೇಳಾಪಟ್ಟಿ

  1. 1. ದುಲೀಪ್ ಟ್ರೋಫಿ – ದುಲೀಪ್ ಟ್ರೋಫಿ ಪಂದ್ಯಾವಳಿಯ ನಾಕೌಟ್ ಪಂದ್ಯಗಳು 28 ಜೂನ್ 2023 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯವು ಜೂನ್ 16 ರಂದು ನಡೆಯಲಿದೆ.
  2. 2. ದೇವಧರ್ ಟ್ರೋಫಿ – ಪಂದ್ಯಾವಳಿಯು ಜುಲೈ 24 ರಿಂದ ಪ್ರಾರಂಭವಾಗಲಿದ್ದು, ಲೀಗ್ ಪಂದ್ಯಗಳು ಜುಲೈ 24 ರಿಂದ ಆಗಸ್ಟ್ 1, 2023 ರವರೆಗೆ ನಡೆಯಲಿವೆ. ನಾಕೌಟ್ ಪಂದ್ಯಗಳು ಆಗಸ್ಟ್ 3 ರಂದು ನಡೆಯಲಿವೆ.
  3. 3. ಇರಾನಿ ಕಪ್ – ನಾಕೌಟ್ ಪಂದ್ಯಗಳು – 1 ಅಕ್ಟೋಬರ್ 2023 ರಿಂದ 5 ಅಕ್ಟೋಬರ್ 2023 ರವರೆಗೆ ನಡೆಯಲ್ಲಿವೆ.
  4. 4. ಸೈಯದ್ ಮುಷ್ತಾಕ್ ಅಲಿ ಟ್ರೋಫಿ – 16 ಅಕ್ಟೋಬರ್​ನಿಂದ 27 ಅಕ್ಟೋಬರ್ 2023ರವರೆಗೆ ಲೀಗ್ ಪಂದ್ಯಗಳು ನಡೆಯಲಿದ್ದು, ನಾಕೌಟ್ ಪಂದ್ಯಗಳು 31 ಅಕ್ಟೋಬರ್ 2023 ರಿಂದ 6 ನವೆಂಬರ್ 2023ರವರೆಗೆ ನಡೆಯಲ್ಲಿವೆ.
  5. 5. ವಿಜಯ್ ಹಜಾರೆ ಟ್ರೋಫಿ – 23 ನವೆಂಬರ್ 2023 ರಿಂದ 5 ಡಿಸೆಂಬರ್ 2023ರವರೆಗೆ ಲೀಗ್ ಪಂದ್ಯಗಳ ನಡೆಯಲ್ಲಿವೆ. ಹಾಗೆಯೇ 9 ಡಿಸೆಂಬರ್ 2023 ರಿಂದ 15 ಡಿಸೆಂಬರ್ 2023ರವರೆಗೆ ನಾಕೌಟ್ ಪಂದ್ಯಗಳು ನಡೆಯಲ್ಲಿವೆ
  6. 6. ರಣಜಿ ಟ್ರೋಫಿ – 5 ಜನವರಿ 2024 ರಿಂದ 14 ಮಾರ್ಚ್ 2024 ರವರೆಗೆ ನಡೆಯಲ್ಲಿದೆ.

ಮಹಿಳೆಯರ ವೇಳಾಪಟ್ಟಿ ಹೀಗಿದೆ

  1. ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ನೊಂದಿಗೆ ಸೀನಿಯರ್ ಮಹಿಳಾ ಋತುವು ಆರಂಭವಾಗಲಿದ್ದು, ಈ ಟೂರ್ನಿಯನ್ನು 19 ಅಕ್ಟೋಬರ್‌ನಿಂದ 9 ನವೆಂಬರ್ 2023 ರವರೆಗೆ ಆಡಲಾಗುತ್ತದೆ.
  2. ಇದರ ನಂತರ, ಇಂಟರ್-ಝೋನಲ್ ಟಿ20 ಟ್ರೋಫಿಯನ್ನು ನವೆಂಬರ್ 24 ರಿಂದ ಡಿಸೆಂಬರ್ 4, 2023 ರವರೆಗೆ ಆಡಲಾಗುತ್ತದೆ.
  3. ಸೀನಿಯರ್ ಮಹಿಳೆಯರ ಏಕದಿನ ಟ್ರೋಫಿ ಮುಂದಿನ ವರ್ಷ 4 ಜನವರಿ 2024 ರಿಂದ 26 ಜನವರಿ 2024 ರವರೆಗೆ ನಡೆಯಲಿದೆ.
  4. ಅಂತಿಮವಾಗಿ ವಿಜಯ್ ಟ್ರೋಫಿಯನ್ನು 10 ಮಾರ್ಚ್ 2024 ರಿಂದ 16 ಮಾರ್ಚ್ 2024 ರವರೆಗೆ ಆಡಲಾಗುತ್ತದೆ.

Published On - 6:43 pm, Mon, 10 April 23