RCB vs LSG Highlights IPL 2023: ರೋಚಕ ಪಂದ್ಯದಲ್ಲಿ ಗೆದ್ದ ಲಕ್ನೋ; ಆರ್ಸಿಬಿಗೆ 2ನೇ ಸೋಲು
Royal Challengers Bangalore vs Lucknow Super Giants IPL 2023 Highlights in Kannada: ಲಕ್ನೋ ವಿರುದ್ಧ ನಡೆದ ಈ ಪಂದ್ಯದ ಕೊನೆಯ ಎಸೆತದವರೆಗೂ ತುಂಬಾ ರೋಮಾಂಚನಕಾರಿಯಾಗಿತ್ತು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಲಕ್ನೋ ತಂಡ ಗೆಲುವು ಸಾಧಿಸಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಸತತ ಎರಡನೇ ಸೋಲು ಅನುಭವಿಸಿದೆ. ಲಕ್ನೋ ವಿರುದ್ಧ ನಡೆದ ಈ ಪಂದ್ಯದ ಕೊನೆಯ ಎಸೆತದವರೆಗೂ ತುಂಬಾ ರೋಮಾಂಚನಕಾರಿಯಾಗಿತ್ತು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಲಕ್ನೋ ತಂಡ ಗೆಲುವು ಸಾಧಿಸಿತು. ಲಕ್ನೋ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಟೋಯ್ನಿಸ್ ಹಾಗೂ ಪೂರನ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕ ನೆರವಿನಿಂದ 213 ರನ್ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಆರಂಭಿಕ ಆಘಾತದ ಹೊರತಾಗಿಯೂ ಸ್ಟೋಯ್ನಿಸ್ ಹಾಗೂ ಪೂರನ್ ಅವರ ಅರ್ಧಶತಕದ ಆಧಾರದ ಮೇಲೆ 1 ವಿಕೆಟ್ನಿಂದ ಗೆಲುವು ಸಾಧಿಸಿತು.
LIVE NEWS & UPDATES
-
ಲಕ್ನೋಗೆ ಒಂದು ವಿಕೆಟ್ ಜಯ
ಕೊನೆಯ ಓವರ್‌ನ 5ನೇ ಎಸೆತದಲ್ಲಿ ಜಯವ್‌ದೇವ್ ಉನದ್ಕಟ್ ಅವರನ್ನು ಹರ್ಷಲ್ ಪಟೇಲ್ ಔಟ್ ಮಾಡಿದರು. ಇದಾದ ಬಳಿಕ ಲಕ್ನೋಗೆ ಕೊನೆಯ ಎಸೆತದಲ್ಲಿ 1 ರನ್ ಅಗತ್ಯವಿದ್ದು, ಕೊನೆಯ ಎಸೆತದಲ್ಲಿ ಅವೇಶ್ ಖಾನ್ ಸಿಂಗಲ್ ರನ್ ಗಳಿಸಿ ಲಕ್ನೋಗೆ ಜಯ ತಂದುಕೊಟ್ಟರು.
-
ಮಾರ್ಕ್ ವುಡ್ ಬೌಲ್ಡ್
ಹರ್ಷಲ್ ಪಟೇಲ್ 20ನೇ ಓವರ್‌ನ ಎರಡನೇ ಎಸೆತದಲ್ಲಿ ಮಾರ್ಕ್ ವುಡ್ ಅವರನ್ನು ಬೌಲ್ಡ್ ಮಾಡಿದರು. ಕೊನೆಯ ಓವರ್ ತುಂಬಾ ರೋಮಾಂಚನಕಾರಿಯಾಗಿದೆ.
-
-
ಬದೋನಿ ಹಿಟ್ ವಿಕೆಟ್
19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆಯುಷ್ ಬಡೋನಿ ಸಿಕ್ಸರ್ ಬಾರಿಸಿದರು. ಆದರೆ ಆ ಬಳಿಕ ಹಿಟ್ ವಿಕೆಟ್ ಆದರು. ಬದೋನಿ 30 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
-
ಪೂರನ್ ಔಟ್
17ನೇ ಓವರ್ ಎಸೆದ ಸಿರಾಜ್, ಪೂರನ್ ವಿಕೆಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
-
24 ಎಸೆತದಲ್ಲಿ 28 ರನ್ ಬೇಕು
ಆರ್‌ಸಿಬಿ ಗೆಲುವನ್ನು ನಿಕೋಲಸ್ ಪೂರನ್ ಕಸಿದುಕೊಳ್ಳುತ್ತಿದ್ದಾರೆ. 16ನೇ ಓವರ್‌ನ ಕೊನೆಯ ಎಸೆತದಲ್ಲೂ ಸಿಕ್ಸರ್ ಬಾರಿಸಿದ ಪೂರನ್ ಲಕ್ನೋ ತಂಡವನ್ನು ಗೆಲುವಿನ ಸಮೀಪ ತಂದಿದ್ದಾರೆ.
-
-
15 ಓವರ್ ಅಂತ್ಯ
ಪೂರನ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 14ನೇ ಓವರ್ನಲ್ಲಿ ಹರ್ಷಲ್ 2 ಸಿಕ್ಸ್ ಹಾಗೂ 1 ಬೌಂಡರಿ ನೀಡದರೆ, 15ನೇ ಓವರ್ನಲ್ಲಿ ಪರ್ನೆಲ್ 1 ಸಿಕ್ಸರ್ ಹಾಗೂ 2 ಬೌಂಡರಿ ನೀಡಿದರು.
-
ಪೂರನ್ ಬೌಂಡರಿ
12ನೇ ಓವರ್ನಲ್ಲಿ ರಾಹುಲ್ ವಿಕೆಟ್ ತೆಗೆದ ಸಿರಾಜ್ 2 ಬೌಂಡರಿ ನೀಡಿ ದುಬಾರಿಯಾದರು. 3ನೇ ಎಸೆತದಲ್ಲಿ ಬದೋನಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಪೂರನ್ ಬೌಂಡರಿ ಬಾರಿಸಿದರು.
-
ರಾಹುಲ್ ಔಟ್
12ನೇ ಓವರ್ ಬೌಲ್ ಮಾಡಲು ಬಂದ ಸಿರಾಜ್ ಕೊನೆಗೂ ನಾಯಕ ರಾಹುಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 11ನೇ ಓವರ್ 6ನೇ ಎಸೆತದಲ್ಲಿ ಪೂರನ್ ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು.
-
ಸ್ಟೋಯ್ನಿಸ್ ಔಟ್
30 ಎಸೆತಗಳಲ್ಲಿ 65 ರನ್ ಗಳಿಸಿ ಅಬ್ಬರಿಸುತ್ತಿದ್ದ ಸ್ಟೋಯ್ನಿಸ್ ಕೊನೆಗೂ ಕರಣ್ ಶರ್ಮಾ ಬೌಲಿಂಗ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.
-
10 ಓವರ್ ಅಂತ್ಯ
10ನೇ ಓವರ್ನಲ್ಲೂ ಸ್ಟೋಯ್ನಿಸ್ 2 ಸಿಕ್ಸರ್ ಬಾರಿಸಿದರು. ಇದರೊಂದಿಗೆ ಲಕ್ನೋ ಸ್ಕೋರ್ 90 ರ ಗಡಿ ದಾಟಿದೆ.
-
ಕರಣ್ ಕೂಡ ದುಬಾರಿ
9ನೇ ಓವರ್ ಎಸೆಯಲು ಬಂದ ಕರಣ್ ಶರ್ಮಾ ಕೂಡ ದುಬಾರಿಯಾದರು. ಈ ಓವರ್ನಲ್ಲಿ ಮತ್ತೆ ಅಬ್ಬರಿಸಿದ ಸ್ಟೋಯ್ನಿಸ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.
-
ಹರ್ಷಲ್ ದುಬಾರಿ
ಹರ್ಷಲ್ ಪಟೇಲ್ ಎಸೆದ 8ನೇ ಓವರ್ನಲ್ಲಿ ಸ್ಟೋಯ್ನಿಸ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು. ತತ್ತರಿಸಿದ ಲಕ್ನೋ ಇನ್ನಿಂಗ್ಸ್ಗೆ ಸ್ಟೋಯ್ನಿಸ್ ಜೀವ ತುಂಬಿದ್ದಾರೆ.
-
ಪವರ್ ಪ್ಲೇ ಅಂತ್ಯ
ಪವರ್ ಪ್ಲೇನ ಕೊನೆಯ ಎಸೆತದಲ್ಲಿ ಸ್ಟೋಯ್ನಿಸ್, ಪರ್ನೆಲ್ಗೆ ಬೌಂಡರಿ ಬಾರಿಸಿದರು. 6 ಓವರ್ ಅಂತ್ಯಕ್ಕೆ ಲಕ್ನೋ 3 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ.
-
ಕೃನಾಲ್ ಔಟ್
4ನೇ ಓವರ್‌ನ ಕೊನೆಯ ಎಸೆತದಲ್ಲಿ ಪರ್ನೆಲ್ ಇನ್ನೊಂದು ವಿಕೆಟ್ ಪಡೆದರು. ಹೂಡಾ ವಿಕೆಟ್ ಬಳಿಕ ಬಂದ ಕೃನಾಲ್ ಕೀಪರ್ ಕೈಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.
-
ಹೂಡಾ ಔಟ್
4ನೇ ಓವರ್ ಎಸೆಯಲು ಬಂದ ಪರ್ನೆಲ್ಗೆ ಹೂಡಾ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ 5ನೇ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
-
ರಾಹುಲ್ ಬೌಂಡರಿ
ಸಿರಾಜ್ ಎಸೆದ 3ನೇ ಓವರ್ನಲ್ಲಿ ರಾಹುಲ್ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರು. ಈ ಓವರ್ನಲ್ಲಿ 6 ರನ್ ಬಂದವು.
-
2ನೇ ಓವರ್ ಅಂತ್ಯ
ಡೇವಿಡ್ ವಿಲ್ಲಿ ಎಸೆದ ಈ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. 2 ಓವರ್ ಅಂತ್ಯಕ್ಕೆ ಲಕ್ನೋ 10 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
-
ಶೂನ್ಯಕ್ಕೆ ಮೇಯರ್ಸ್ ಔಟ್
ಲಕ್ನೋ ಪರ ಬ್ಯಾಟಿಂಗ್ ಆರಂಭಿಸಿದ ಮೇಯರ್ಸ್ ಯಾವುದೇ ರನ್ ಗಳಿಸದೆ ಸಿರಾಜ್ ಎಸೆತದ 3ನೇ ಎಸೆತದಲ್ಲಿ ಬೌಲ್ಡ್ ಆಗಿದ್ದಾರೆ.
-
213 ರನ್ ಟಾರ್ಗೆಟ್
ಮಾರ್ಕ್ವುಡ್ ಎಸೆದ 20ನೇ ಓವರ್ನಲ್ಲಿ ಮ್ಯಾಕ್ಸ್‌ವೆಲ್ 1 ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಆರ್‌ಸಿಬಿ 1 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು. ತಂಡದ ಪರ ಮೂವರು ಟಾಪ್ ಆರ್ಡರ್ ಬ್ಯಾಟರ್ಗಳು ಅರ್ಧಶತಕ ಬಾರಿಸಿದರು.
-
ಮ್ಯಾಕ್ಸ್‌ವೆಲ್ ಅಬ್ಬರದ ಅರ್ಧಶತಕ
ಅವೇಶ್ ಖಾನ್ ಎಸೆದ 19ನೇ ಓವರ್‌ನ ಮೊದಲೆರಡು ಎಸೆತಗಳನ್ನು ಸಿಕ್ಸರ್ಗಟ್ಟಿದ ಮ್ಯಾಕ್ಸ್‌ವೆಲ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಓವರ್ನಲ್ಲಿ 19 ರನ್ ಬಂದವು.
-
ಜಯದೇವ್ಗೆ ಸಿಕ್ಸರ್
18ನೇ ಓವರ್ ಎಸೆದ ಜಯದೇವ್ ದುಬಾರಿಯಾದರು., ಈ ಓವರ್‌ನ ಮೊದಲ ಎಸೆತದಲ್ಲಿ ಗ್ಲೆನ್ ಬೌಂಡರಿ ಬಾರಿಸಿದರೆ, 4 ಮತ್ತು 5ನೇ ಎಸೆತದಲ್ಲಿ ಫಾಫ್ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.
-
ಮ್ಯಾಕ್ಸಿ ಸಿಕ್ಸರ್
17ನೇ ಓವರ್ನಲ್ಲೂ ಆರ್ಸಿಬಿಗೆ ರನ್ ಬಂತು. ಈ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಮ್ಯಾಕ್ಸ್‌ವೆಲ್ 5ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
-
ಫಾಫ್ ಅರ್ಧಶತಕ
ಮಾರ್ಕ್ವುಡ್ ಎಸೆದ 16ನೇ ಓವರ್‌ನ ಮೊದಲ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದ ನಾಯಕ ಫಾಫ್ ಡುಪ್ಲೆಸಿಸ್ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
-
ಬ್ಯಾಕ್ ಟು ಬ್ಯಾಕ್ ಸಿಕ್ಸ್
15ನೇ ಓವರ್ ಎಸೆದ ಬಿಷ್ಣೋಯಿ ಕೊಂಚ ದುಬಾರಿಯಾದರು. ಈ ಓವರ್‌ನ 3ನೇ ಮತ್ತು 4ನೇ ಎಸೆತವನ್ನು ಫಾಫ್ ಸಿಕ್ಸರ್ಗಟ್ಟಿದರೆ, 6ನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್ ಬಾರಿಸಿದರು.
-
ಮ್ಯಾಕ್ಸ್‌ವೆಲ್ ಸಿಕ್ಸರ್
ಅಮಿತ್ ಮಿಶ್ರಾ ಎಸೆದ 14ನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮ್ಯಾಕ್ಸ್‌ವೆಲ್ ಅದರ ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
-
ಕೊಹ್ಲಿ ಔಟ್
12ನೇ ಓವರ್‌ನ 3 ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಕೊಹ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚ್ ನೀಡಿ ಔಟಾದರು.
-
10ನೇ ಓವರ್ನಲ್ಲಿ ಸಿಕ್ಸರ್
ಕೃನಾಲ್ ಎಸೆದ 10ನೇ ಓವರ್ನಲ್ಲಿ ಅಂತಿಮವಾಗಿ ಬೌಂಡರಿ ಬಂತು. ಈ ಓವರ್‌ನ 2ನೇ ಎಸೆತವನ್ನು ಲಾಂಗ್ ಆನ್ನಲ್ಲಿ ಕೊಹ್ಲಿ ಸಿಕ್ಸರ್ಗಟ್ಟಿದರೆ, ಫಾಫ್ ಕೂಡ ಬೌಂಡರಿ ಬಾರಿಸಿದರು.
-
ಬೌಂಡರಿ ಇಲ್ಲ, ಕೊಹ್ಲಿ ಅರ್ಧಶತಕ
ಬಿಷ್ಣೋಯಿ ಎಸೆದ 9ನೇ ಓವರ್ ಕೂಡ ಕೇವಲ ಸಿಂಗಲ್ಗೆ ಸೀಮಿತವಾಗಿತ್ತು. ಈ ಓವರನ್ನಲ್ಲಿ ಲಾಂಗ್ ಆನ್ನಲ್ಲಿ 1 ಸಿಂಗಲ್ ಕದ್ದ ಕೊಹ್ಲಿ 35 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
-
8 ಓವರ್ ಅಂತ್ಯ
ಪವರ್ ಪ್ಲೇ ಮುಗಿದ ನಂತರ ಆರ್‌ಸಿಬಿ ಪಾಳಯದ ಬ್ಯಾಟಿಂಗ್ ನಿಧಾನವಾಗಿದೆ. 7 ಮತ್ತು 8ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆರ್‌ಸಿಬಿ 68/0
-
ಪವರ್ ಪ್ಲೇ ಅಂತ್ಯ
ಮಾರ್ಕ್ವುಡ್ ಎಸೆದ 6ನೇ ಓವರ್ನಲ್ಲಿ ಕೊಹ್ಲಿ ಸ್ಟ್ರೈಟ್ ಹಿಟ್ ಮಾಡಿ ಬೌಂಡರಿ ಬಾರಿಸಿದರೆ, ಅದರ ನಂತರದ ಎಸೆತದಲ್ಲಿ ಮಿಡ್ ವಿಕೆಟ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.
-
ಕೃನಾಲ್ಗೆ ಸಿಕ್ಸರ್
ಕೃನಾಲ್ ಎಸೆದ 5ನೇ ಓವರ್ನಲ್ಲಿ ಕೊಹ್ಲಿ 3ನೇ ಎಸೆತವನ್ನು ಲಾಂಗ್ ಆನ್ನಲ್ಲಿ ಸಿಕ್ಸರ್ಗೆ ಕಳುಹಿಸಿದರು. ಈ ಓವರ್ನಲ್ಲಿ 8 ರನ್ ಬಂದವು.
-
ಕೊಹ್ಲಿ 2 ಬೌಂಡರಿ
ಅವೇಶ್ ಖಾನ್ ಎಸೆದ 4ನೇ ಓವರ್‌ನ ಮೊದಲನೇ ಮತ್ತು 3ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಬಾರಿಸಿದರು.
-
ಫಾಫ್ ಬೌಂಡರಿ
ಕೃನಾಲ್ ಎಸೆದ 3ನೇ ಓವರ್ನಲ್ಲಿ ಫಾಫ್ ಲಾಂಗ್ ಆನ್ನಲ್ಲಿ ಬೌಂಡರಿ ಬಾರಿಸಿದರು. 3 ಓವರ್ ಅಂತ್ಯಕ್ಕೆ ಆರ್‌ಸಿಬಿ 25/0
-
ಕೊಹ್ಲಿ ಸಿಕ್ಸರ್
ಅವೇಶ್ ಖಾನ್ ಎಸೆದ ಎರಡನೇ ಓವರ್ನಲ್ಲಿ ಕೊಹ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.
-
ಆರ್‌ಸಿಬಿ ಬ್ಯಾಟಿಂಗ್ ಆರಂಭ
ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದ್ದು, ತಂಡದ ಪರ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಉನದ್ಕಟ್ ಎಸೆದ ಈ ಓವರ್ನಲ್ಲಿ 4 ರನ್ ಬಂದವು
-
ಲಕ್ನೋ ತಂಡ
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಜಯದೇವ್ ಉನದ್ಕಟ್, ಅಮಿತ್ ಮಿಶ್ರಾ, ಅವೇಶ್ ಖಾನ್, ಮಾರ್ಕ್ ವುಡ್ ಮತ್ತು ರವಿ ಬಿಷ್ಣೋಯ್.
-
ಆರ್‌ಸಿಬಿ ತಂಡ
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಶಹಬಾಜ್ ಅಹ್ಮದ್, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್.
-
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.
-
ಆರ್‌ಸಿಬಿ- ಲಕ್ನೋ ಮುಖಾಮುಖಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ.
Published On - Apr 10,2023 6:51 PM
