ವೇಗದ ಅರ್ಧಶತಕಗಳ ಪಟ್ಟಿಯಲ್ಲಿ ಮೊದಲ ಹೆಸರು ಅಜಿಂಕ್ಯ ರಹಾನೆ ಅವರದು. ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಹಾನೆ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ತಮ್ಮ ಐಪಿಎಲ್ ವೃತ್ತಿಬದುಕಿನಲ್ಲಿ ಇತಿಹಾಸ ಸೃಷ್ಟಿಸಿದರು.
ರಹಾನೆ ನಂತರ ಈ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಈ ಆಲ್ರೌಂಡರ್ ಆರ್ಸಿಬಿ ವಿರುದ್ಧ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಶಾರ್ದೂಲ್ ಠಾಕೂರ್ ಹೊರತುಪಡಿಸಿ, ರಾಜಸ್ಥಾನ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 20 ಎಸೆತಗಳಲ್ಲಿ ಸೀಸನ್ನ ಎರಡನೇ ವೇಗದ ಅರ್ಧಶತಕ ಬಾರಿಸಿದರು.
ಇನ್ನು ಲಕ್ನೋ ಪರ ಚೊಚ್ಚಲ ಐಪಿಎಲ್ ಆಡುತ್ತಿರುವ ಕೈಲ್ ಮೇಯರ್ಸ್ ಸಿಎಸ್ಕೆ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದಲ್ಲದೆ, ಸೀಸನ್ ಮೂರನೇ ವೇಗದ ಅರ್ಧಶತಕ ದಾಖಲಿಸಿದರು.
ಸಿಎಸ್ಕೆ ಆಟಗಾರ ರುತುರಾಜ್ ಗಾಯಕ್ವಾಡ್ ಕೂಡ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಮತ್ತು ಲಕ್ನೋ ವಿರುದ್ಧ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇವರಲ್ಲದೆ ಸಂಜು ಸ್ಯಾಮ್ಸನ್, ಕೈಲ್ ಮೇಯರ್ಸ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಈ ಸೀಸನ್ನಲ್ಲಿ ಇದುವರೆಗೆ ತಲಾ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.
Published On - 5:43 pm, Mon, 10 April 23