IND vs ENG: ರವೀಂದ್ರ ಜಡೇಜಾ ಮೇಲೆ ಒಮ್ಮೆಲೆ ಮುಗಿಬಿದ್ದ ಇಂಗ್ಲೆಂಡ್‌ ಆಟಗಾರರು; ವಿಡಿಯೋ ನೋಡಿ

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹಲವು ಬಾರಿ ಕಾಲ್ಕೆರೆದು ವಾಗ್ವಾದ ನಡೆಸಿದ ಘಟನೆಗಳು ನಡೆದಿವೆ. ಇದೀಗ ರವೀಂದ್ರ ಜಡೇಜಾ ಮತ್ತು ಬ್ರೈಡನ್ ಕಾರ್ಸ್​ ನಡುವೆಯೂ ಅದೇ ರೀತಿಯ ಘಟನೆ ನಡೆಯಿತು. ಆಕಾಶ್ ದೀಪ್ ಮತ್ತು ಬ್ರೈಡನ್ ಕಾರ್ಸ್​, ಜ್ಯಾಕ್ ಕ್ರೌಲಿ ಮತ್ತು ಶುಭ್ಮನ್ ಗಿಲ್ ನಡುವೆ ಕೂಡ ವಾಗ್ವಾದಗಳು ನಡೆದವು.

IND vs ENG: ರವೀಂದ್ರ ಜಡೇಜಾ ಮೇಲೆ ಒಮ್ಮೆಲೆ ಮುಗಿಬಿದ್ದ ಇಂಗ್ಲೆಂಡ್‌ ಆಟಗಾರರು; ವಿಡಿಯೋ ನೋಡಿ
Ravindra Jadeja

Updated on: Jul 14, 2025 | 6:56 PM

ಭಾರತ ಮತ್ತು ಇಂಗ್ಲೆಂಡ್‌ (India vs England) ನಡುವೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lords Test) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಉಭಯ ತಂಡಗಳ ಆಟಗಾರರ ಪ್ರದರ್ಶನದಿಂದ ಚರ್ಚೆಯಾಗಿದ್ದಕ್ಕಿಂತ ಹೆಚ್ಚಾಗಿ ಎರಡು ತಂಡಗಳ ಆಟಗಾರರು ಕಾಲ್ಕೆರದು ಜಗಳ ಮಾಡಿಕೊಂಡಿದ್ದಕ್ಕೆ ಸುದ್ದಿಯಲ್ಲಿದೆ. ಟೆಸ್ಟ್ ಆರಂಭವಾದ ಮೊದಲ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಎರಡು ತಂಡಗಳ ಆಟಗಾರರ ನಡುವೆ ವಾಗ್ಯುದ್ಧ, ದೃಷ್ಟಿ ಯುದ್ಧಗಳು ನಡೆದಿದ್ದು, ಇದೀಗ 5ನೇ ದಿನದಾಟದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮೇಲೆ ಎಲ್ಲಾ ಇಂಗ್ಲೆಂಡ್‌ ಆಟಗಾರರು ಕಾಲ್ಕೆರೆದು ಜಗಳ ಬಂದ ಘಟನೆ ನಡೆದಿದೆ.

ಜಡೇಜಾ-ಕಾರ್ಸ್ ನಡುವೆ ಮುಖಾಮುಖಿ ಡಿಕ್ಕಿ

ವಾಸ್ತವವಾಗಿ, ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್‌ನ 35 ನೇ ಓವರ್ ಅನ್ನು ಬ್ರೈಡನ್ ಕಾರ್ಸ್ ಎಸೆದರು. ಈ ಓವರ್‌ನ ಕೊನೆಯ ಎಸೆತದಲ್ಲಿ , ಜಡೇಜಾ ರನ್ ತೆಗೆದುಕೊಳ್ಳಲು ಓಡುತ್ತಿದ್ದಾಗ, ಇಂಗ್ಲೆಂಡ್ ಬೌಲರ್ ಬ್ರೈಡನ್ ಕಾರ್ಸ್​ಗೆ ಡಿಕ್ಕಿ ಹೊಡೆದರು . ಈ ಡಿಕ್ಕಿಯ ನಂತರ, ಇಬ್ಬರು ಆಟಗಾರರ ನಡುವೆ ವಾಗ್ವಾದ ಪ್ರಾರಂಭವಾಯಿತು ಮತ್ತು ವಾತಾವರಣವು ಸ್ವಲ್ಪ ಸಮಯದೊಳಗೆ ಬಿಸಿಯಾಯಿತು. ಇಬ್ಬರ ನಡುವಿನ ವಾಗ್ವಾದವು ಎಷ್ಟು ಹೆಚ್ಚಾಯಿತೆಂದರೆ ಉಳಿದ ಆಟಗಾರರು ಸಹ ಮಧ್ಯಪ್ರವೇಶಿಸಿದರು. ಪರಿಸ್ಥಿತಿಯನ್ನು ನಿಭಾಯಿಸಲು, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮಧ್ಯಪ್ರವೇಶಿಸಬೇಕಾಯಿತು.

ಕಾರ್ಸ್- ಆಕಾಶ್ ನಡುವೆ ವಾಗ್ವಾದ

ಮೇಲೆ ಹೇಳಿದಂತೆ ಪಂದ್ಯದುದ್ದಕ್ಕೂ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ಕಂಡುಬಂದಿದ್ದು, ಹಲವು ಬಾರಿ ಆಟಗಾರರ ನಡುವೆ ಸ್ವಲ್ಪ ವಾಗ್ವಾದ ನಡೆದಿತ್ತು. ನಾಲ್ಕನೇ ದಿನದ ಅಂತ್ಯದಲ್ಲಿ ಬ್ರೈಡನ್ ಕಾರ್ಸ್ ಮತ್ತು ಆಕಾಶ್ ದೀಪ್ ನಡುವೆ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಕಾಶ್ ದೀಪ್​ಗೆ ಬ್ರೈಡನ್ ಕಾರ್ಸ್ ಏನೋ ಹೇಳುತ್ತಿರುವುದು ಕಂಡುಬಂದಿತು , ಅದಕ್ಕೆ ಆಕಾಶ್ ದೀಪ್ ಕೂಡ ಏನೋ ಸನ್ನೆ ಮಾಡಿದರು.

IND vs ENG: ಊಟದ ವಿರಾಮಕ್ಕೂ ಮುನ್ನವೇ 8 ವಿಕೆಟ್ ಪತನ; ಭಾರತದ ಸೋಲು ಬಹುತೇಕ ಖಚಿತ

ಗಿಲ್- ಕ್ರೌಲಿ ಜಟಾಪಟಿ

ಮೂರನೇ ದಿನದಂದು, ಟೀಂ ಇಂಡಿಯಾ ನಾಯಕ ಮತ್ತು ಇಂಗ್ಲೆಂಡ್ ಆರಂಭಿಕ ಆಟಗಾರ ಜ್ಯಾಕ್ ಕ್ರೌಲಿ ನಡುವೆ ವಾಗ್ವಾದ ನಡೆಯಿತು. ದಿನದ ಕೊನೆಯಲ್ಲಿ, ಜ್ಯಾಕ್ ಕ್ರೌಲಿ ಸಮಯ ವ್ಯರ್ಥ ಮಾಡುತ್ತಿರುವುದರಿಂದ ಅಸಮಾಧಾನಗೊಂಡಿದ್ದ ಶುಭ್​ಮನ್ ಗಿಲ್ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Mon, 14 July 25