IND vs SA 2nd ODI: ಇಂದು ಭಾರತ- ಆಫ್ರಿಕಾ ಎರಡನೇ ಏಕದಿನ: ಧವನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

| Updated By: Vinay Bhat

Updated on: Oct 09, 2022 | 10:09 AM

India vs South Africa: ಇಂದು ರಾಂಚಿಯ ಜೆಎಸ್​ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಆಫ್ರಿಕಾ ನಡುವೆ ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಮೊದಲ ಏಕದಿನದಲ್ಲಿ ಗೆಲುವಿನ ಅಂಚಿಗೆ ಬಂದು ಸೋಲುಂಡಿದ್ದ ಭಾರತ ಇದೀಗ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

IND vs SA 2nd ODI: ಇಂದು ಭಾರತ- ಆಫ್ರಿಕಾ ಎರಡನೇ ಏಕದಿನ: ಧವನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
IND vs SA
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಸೋಲು ಕಂಡ ಭಾರತ (India vs South Africa) ತಂಡ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ರಾಂಚಿಯ ಜೆಎಸ್​ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ. ಮೊದಲ ಏಕದಿನದಲ್ಲಿ ಗೆಲುವಿನ ಅಂಚಿಗೆ ಬಂದು ಸೋಲುಂಡಿದ್ದ ಭಾರತ ಇದೀಗ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಧವನ್ (Shikhar Dhawan) ಪಡೆಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ. ಹೆಚ್ಚು ಯುವ ಆಟಗಾರರಿಂದಲೇ ಕೂಡಿರುವ ಟೀಮ್ ಇಂಡಿಯಾಕ್ಕೆ (Team India) ಇದೊಂದು ಅಗ್ನಿಪರೀಕ್ಷೆಯಾಗಿದೆ. ದೀಪಕ್ ಚಹರ್ ಕಾಲು ಉಳುಕಿ ಗಾಯಗೊಂಡ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇದು ಭಾರತಕ್ಕೆ ದೊಡ್ಡ ಹಿನ್ನಡೆ. ಇವರ ಬದಲು ವಾಷಿಂಗ್ಟನ್ ಸುಂದರ್ ತಂಡ ಸೇರಿಕೊಂಡಿದ್ದಾರೆ.

ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಿಸಬೇಕಿದೆ. ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಬೇಕಾದ ಒತ್ತಡದಲ್ಲಿದ್ದಾರೆ. ರುತುರಾಜ್ ಗಾಯಕ್ವಾಡ್ ಕೂಡ ತಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ. ಇಶಾನ್ ಕಿಶನ್​ಗೆ ಇನ್ನೊಂದು ಅವಕಾಶ ಸಿಗಬಹುದು. ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಮಾತ್ರ ಕಳೆದ ಪಂದ್ಯದಲ್ಲಿ ತಂಡಕ್ಕೆ ನೆರವಾಗಿದ್ದರು. ಶಾರ್ದೂಲ್ ಥಾಕೂರ್ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ಆವೇಶ್ ಖಾನ್ ಲಯ ಕಂಡುಕೊಳ್ಳಬೇಕಿದೆ. ಅಂತೆಯೆ ಕುಲ್ದೀಪ್ ಯಾದವ್ ಹಾಗೂ ರವಿ ಬಿಷ್ಟೋಯಿ ಸ್ಪಿನ್ ಕೆಲಸ ಮಾಡಬೇಕಿದೆ.

ಇತ್ತ ಆಫ್ರಿಕಾ ತಂಡದಲ್ಲಿ ನಾಯಕ ತೆಂಬಾ ಬವುಮಾ ಕಡೆಯಿಂದ ಮಾತ್ರ ಫ್ಲಾಪ್ ಶೋ ಕಂಡುಬರುತ್ತಿದೆ. ಉಳಿದ ಆಟಗಾರರು ಉತ್ತಮ ಆಟವಾಡುತ್ತಿದ್ದಾರೆ. ಕ್ವಿಂಟನ್ ಡಿಕಾಕ್, ಹೆನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಆ್ಯಡಂ ಮರ್ಕ್ರಮ್ ಹಾಗೂ ಜಾನ್​ಮನ್ ಮಲನ್ ಮೇಲೆ ಕೊಂಚ ಒತ್ತಡವಿದೆ. ಕಗಿಸೊ ರಬಾಡ ಹಾಗೂ ಲುಂಗಿ ಎನ್​ಗಿಡಿ ಆಫ್ರಿಕಾದ ಪ್ರಮುಖ ಬೌಲಿಂಗ್ ಅಸ್ತ್ರ. ಇವರಿಗೆ ತಬ್ರೇಜ್ ಶಮ್ಸಿ, ಕೇಶವ್ ಮಹರಾಜ್ ಹಾಗೂ ಪಾರ್ನೆಲ್ ಸಾಥ್ ನೀಡಬೇಕಿದೆ.

ಇದನ್ನೂ ಓದಿ
ಮೊದಲ ಎಸೆತದಲ್ಲೇ ಸೂರ್ಯ- ಕಾರ್ತಿಕ್ ವಿಕೆಟ್ ಪಡೆದಿದ್ದ ಐರ್ಲೆಂಡ್ ವೇಗಿ ಟಿ20 ವಿಶ್ವಕಪ್​ನಿಂದ ಔಟ್..!
Babar Azam: ಭರ್ಜರಿ ಅರ್ಧಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಪಾಕ್ ನಾಯಕ ಬಾಬರ್..!
‘ರನ್ ಗಳಿಸುತ್ತಿದ್ದೇನೆ, ತೂಕ ಕಡಿಮೆ ಮಾಡಿಕೊಂಡಿದ್ದೇನೆ.. ಆದರೆ ಅವಕಾಶ ಸಿಗುತ್ತಿಲ್ಲ’; ಪೃಥ್ವಿ ಶಾ ಅಸಮಾದಾನ
Pankaj Advani: 25 ನೇ ಬಾರಿಗೆ ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್​ಶಿಪ್ ಗೆದ್ದ ಪಂಕಜ್ ಅಡ್ವಾಣಿ..!

ಮಳೆಯ ಕಾಟ ಇದೆಯೇ?:

ಶನಿವಾರದಿಂದ ರಾಂಚಿಯಲ್ಲಿ ಮಳೆಯಾಗುತ್ತಿದೆ. ಅಷ್ಟೇ ಅಲ್ಲ, ಭಾನುವಾರವೂ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಂಚಿಯ ಪ್ರಾದೇಶಿಕ ಹವಾಮಾನ ಇಲಾಖೆಯ ವಿಜ್ಞಾನಿ ಅಭಿಷೇಕ್ ಆನಂದ್ ಟಿವಿ9 ಹಿಂದಿಯೊಂದಿಗೆ ಮಾತನಾಡುತ್ತಾ, 9 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯವಿದ್ದು, ರಾಂಚಿಯಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇದಕ್ಕಾಗಿ ಜೆಸಿಎ ಉತ್ತಮ ವ್ಯವಸ್ಥೆ ಮಾಡಿರುವುದರಿಂದ ಮಳೆಯಿಂದ ಪಂದ್ಯಕ್ಕೆ ಹೆಚ್ಚಿನ ತೊಂದರೆಯಾಗದು ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1 ಗಂಟೆಗೆ ಟಾಸ್ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು.

ಉಭಯ ತಂಡಗಳು:

ಭಾರತ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಜಾನೆಮನ್ ಮಲನ್, ಆಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಗಿಸೋ ರಬಾಡ, ತಬ್ರೇಜ್ ಶಮ್ಸಿ.

Published On - 7:52 am, Sun, 9 October 22