T20 World Cup 2022: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ 5 ಎದುರಾಳಿಗಳು ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Sep 14, 2022 | 9:59 AM

T20 World Cup 2022: ಈ ಎರಡು ಗ್ರೂಪ್​ಗಳಿಂದ ನಾಲ್ಕು ತಂಡಗಳು ಸೂಪರ್​-12 ಗೆ ಅರ್ಹತೆ ಪಡೆಯಲಿದೆ. ಅದರಂತೆ ಈ ಎರಡು ಗ್ರೂಪ್​ಗಳಿಂದ ಆಯ್ಕೆಯಾಗುವ 2 ತಂಡಗಳ ವಿರುದ್ಧ ಟೀಮ್ ಇಂಡಿಯಾ ಒಂದೊಂದು ಪಂದ್ಯವಾಡಲಿದೆ.

T20 World Cup 2022: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ 5 ಎದುರಾಳಿಗಳು ಯಾರು ಗೊತ್ತಾ?
Team India
Follow us on

ಅಕ್ಟೋಬರ್ 16 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದ್ದು, ಟೀಮ್ ಇಂಡಿಯಾ ಸೂಪರ್-12 ಹಂತದ ಪಂದ್ಯದ ಮೂಲಕ ಕಣಕ್ಕಿಳಿಯಲಿದೆ. ಅಂದರೆ ಅಕ್ಟೋಬರ್ 23 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಭಾರತ ತಂಡವು ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಂದರೆ ಸೂಪರ್-12 ನ ಪಂದ್ಯಗಳು ಎರಡು ಗ್ರೂಪ್​ಗಳಾಗಿ ನಡೆಯಲಿದೆ. ಇಲ್ಲಿ ಗ್ರೂಪ್-1 ಹಾಗೂ ಗ್ರೂಪ್​-2 ವಿಭಾಗಗಳಾಗಿ 12 ತಂಡಗಳನ್ನು ವಿಂಗಡಿಸಲಾಗಿದೆ.

ಗ್ರೂಪ್- 1 ತಂಡಗಳು:

  • ಆಸ್ಟ್ರೇಲಿಯಾ
  • ಇಂಗ್ಲೆಂಡ್
  • ನ್ಯೂಜಿಲೆಂಡ್
  • ಅಫ್ಘಾನಿಸ್ತಾನ್
  • ಅರ್ಹತಾ ಸುತ್ತಿನ ಬಿ ಗ್ರೂಪ್​ನ ವಿನ್ನರ್ ತಂಡ
  • ಅರ್ಹತಾ ಸುತ್ತಿನ ಎ ಗ್ರೂಪ್​ನ ರನ್ನರ್ ತಂಡ

ಗ್ರೂಪ್- 2 ತಂಡಗಳು:

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
  • ಭಾರತ
  • ಪಾಕಿಸ್ತಾನ್
  • ಸೌತ್ ಆಫ್ರಿಕಾ
  • ಬಾಂಗ್ಲಾದೇಶ್
  • ಅರ್ಹತಾ ಸುತ್ತಿನ ಬಿ ಗ್ರೂಪ್​ನ ರನ್ನರ್​ ಅಪ್ ತಂಡ
  • ಅರ್ಹತಾ ಸುತ್ತಿನ ಎ ಗ್ರೂಪ್​ನ ವಿನ್ನರ್​ ತಂಡ

ಇಲ್ಲಿ ಟೀಮ್ ಇಂಡಿಯಾ ಗ್ರೂಪ್-2 ನಲ್ಲಿನ ಇತರೆ ಐದು ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಲಿದೆ. ಇಲ್ಲೂ ಕೂಡ ಪಾಯಿಂಟ್ ಟೇಬಲ್​ ಇರಲಿದ್ದು, ಇದರಲ್ಲಿ ಅತ್ಯಧಿಕ ಪಾಯಿಂಟ್ಸ್​ ಕಲೆಹಾಕುವ ಎರಡು ತಂಡಗಳು ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ. ಹಾಗೆಯೇ ಗ್ರೂಪ್​- 1 ನಿಂದ ಕೂಡ 2 ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಲಿದೆ. ಇದಾದ ಬಳಿಕ ಸೆಮಿಫೈನಲ್​ನಲ್ಲಿ ಎರಡು ಗ್ರೂಪ್​ನ 4 ತಂಡಗಳು ಪರಸ್ಪರ ಸೆಣಲಿಸಲಿದೆ.

ಅಂದರೆ ಇಲ್ಲಿ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾದ ಎದುರಾಳಿಗಳೆಂದರೆ ಪಾಕಿಸ್ತಾನ್, ಸೌತ್ ಆಫ್ರಿಕಾ, ಬಾಂಗ್ಲಾದೇಶ್ ಹಾಗೂ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗುವ ತಂಡಗಳು.

ಅರ್ಹತಾ ಸುತ್ತಿನಲ್ಲಿರುವ ತಂಡಗಳು:

ಗ್ರೂಪ್- ಎ

  • ಶ್ರೀಲಂಕಾ
  • ನಮೀಬಿಯಾ
  • ಯುಎಇ
  • ನೆದರ್​ಲ್ಯಾಂಡ್ಸ್

ಗ್ರೂಪ್- ಬಿ

  • ವೆಸ್ಟ್ ಇಂಡೀಸ್
  • ಸ್ಕಾಟ್ಲೆಂಡ್
  • ಜಿಂಬಾಬ್ವೆ
  • ಐರ್ಲೆಂಡ್

ಈ ಎರಡು ಗ್ರೂಪ್​ಗಳಿಂದ ನಾಲ್ಕು ತಂಡಗಳು ಸೂಪರ್​-12 ಗೆ ಅರ್ಹತೆ ಪಡೆಯಲಿದೆ. ಅದರಂತೆ ಈ ಎರಡು ಗ್ರೂಪ್​ಗಳಿಂದ ಆಯ್ಕೆಯಾಗುವ 2 ತಂಡಗಳ ವಿರುದ್ಧ ಟೀಮ್ ಇಂಡಿಯಾ ಒಂದೊಂದು ಪಂದ್ಯವಾಡಲಿದೆ. ಅಂದರೆ ಸೂಪರ್- 12 ಹಂತದಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಪಂದ್ಯಗಳನ್ನು ಆಡಬೇಕಿದೆ. ಕಳೆದ ಬಾರಿಯ ಟಿ20 ವಿಶ್ವಕಪ್​ನಂತೆ ಈ ಸಲ ಕೂಡ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ.

ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:

  • ಅಕ್ಟೋಬರ್-23 : ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
  • ಅಕ್ಟೋಬರ್-27: ಭಾರತ vs ಅರ್ಹತಾ ಸುತ್ತಿನ A ಗ್ರೂಪ್​ನ ರನ್ನರ್​ ಅಪ್ ತಂಡ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
  • ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ
  • ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್
  • ನವೆಂಬರ್-6: ಭಾರತ vs ಅರ್ಹತಾ ಸುತ್ತಿನ B ಗ್ರೂಪ್​ನ ​ವಿನ್ನರ್ ತಂಡ

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಹೀಗಿದೆ:

 ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.