Happy Birthday Suryakumar Yadav: ಸೆಪ್ಟೆಂಬರ್ 14 ರಂದು ಜನಿಸಿದ ಸೂರ್ಯಕುಮಾರ್ ಯಾದವ್ ಅವರ 14 ಇಂಟ್ರೆಸ್ಟಿಂಗ್ ವಿಷಯಗಳು
Happy Birthday Suryakumar Yadav: ಸೂರ್ಯಕುಮಾರ್ ಭಾರತ ಪರ 13 ಏಕದಿನ ಪಂದ್ಯಗಳನ್ನು ಆಡಿದ್ದು, ಈ ವೇಳೆ 2 ಅರ್ಧಶತಕಗಳೊಂದಿಗೆ 340 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 64 ರನ್.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ಗೆ (Happy Birthday Suryakumar Yadav) ಇಂದು ಜನ್ಮದಿನದ ಸಂಭ್ರಮ. ಸೆಪ್ಟೆಂಬರ್ 14, 2022 ರಂದು 32ನೇ ವರ್ಷಕ್ಕೆ ಕಾಲಿಟ್ಟಿರುವ ಟೀಮ್ ಇಂಡಿಯಾದ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಕುರಿತಾದ 14 ಕುತೂಹಲಕಾರಿ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ.
- ಸೂರ್ಯಕುಮಾರ್ ಯಾದವ್ ಬಾಲ್ಯದಲ್ಲಿ ಕ್ರಿಕೆಟ್‌ಗಿಂತ ಮೊದಲು ಬ್ಯಾಡ್ಮಿಂಟನ್ ಆಡುತ್ತಿದ್ದರು. ಆದರೆ ಮನೆಯಿಂದ ಹೊರ ಹೋಗಿ ಆಡುವ ನೆಪದಲ್ಲಿ ಅವರು ಕ್ರಿಕೆಟ್ನತ್ತ ಮುಖ ಮಾಡಿದ್ದರು. ಬಾಲ್ಯದ ಅವರ ಈ ಆಲೋಚನೆಯು ಅವರನ್ನು ಬ್ಯಾಡ್ಮಿಂಟನ್ ಆಟಗಾರನಾಗುವ ಬದಲು ಅದ್ಭುತ ಬ್ಯಾಟ್ಸ್‌ಮನ್ ಆಗಿಸಿದ್ದು ಈಗ ಇತಿಹಾಸ.
- ಸೆಪ್ಟೆಂಬರ್ 14 ಸೂರ್ಯಕುಮಾರ್ ಯಾದವ್ ಅವರ ಜನ್ಮ ದಿನಾಂಕ. ವಿಶೇಷ ಎಂದರೆ ಅವರು ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದು ಕೂಡ 14ನೇ ದಿನಾಂಕದದ್ದೇ. ಅಂದರೆ ಮಾರ್ಚ್ 14, 2021 ರಂದು ಅವರು ಭಾರತದ ಪರ ಪದಾರ್ಪಣೆ ಮಾಡಿದ್ದರು.
- ಸೂರ್ಯಕುಮಾರ್ ಯಾದವ್ ಅವರ ಆದಾಯ ಸುಮಾರು 30 ಕೋಟಿ ಎಂದು ಅಂದಾಜಿಸಲಾಗಿದೆ. ಅಂದರೆ ಅವರ ಮಾಸಿಕ ಗಳಿಕೆ ಸುಮಾರು 75 ಲಕ್ಷದಿಂದ 1 ಕೋಟಿ ರೂ.ವರೆಗೆ ಇದೆ.
- ಐಪಿಎಲ್ 2022 ರಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ 8 ಕೋಟಿ ರೂ.ಗೆ ಉಳಿಸಿಕೊಂಡಿದೆ. 2018 ರಿಂದ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್, ಅದಕ್ಕೂ ಮುನ್ನ 2011, 2012 ಮತ್ತು 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದರೆ ಹೆಚ್ಚಾಗಿ ಆಡುವ ಅವಕಾಶ ಸಿಕ್ಕರಲಿಲ್ಲ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕೂಡ 4 ಸೀಸನ್ ಆಡಿದ್ದರು.
- ಎಂಎಸ್ ಧೋನಿಯಂತೆ ಸೂರ್ಯಕುಮಾರ್ ಯಾದವ್ ಕೂಡ ಕಾರುಗಳೆಂದರೆ ತುಂಬಾ ಇಷ್ಟ. ಇತ್ತೀಚೆಗೆ ಅವರು Mercedes-Benz GLE ಕೂಪೆ ಖರೀದಿಸಿದ್ದಾರೆ. ಈ ಹೊಸ ಕಾರಿನ ಬೆಲೆ 2.15 ಕೋಟಿ ರೂ. ಇದಲ್ಲದೆ, 1.22 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಕೂಡ ಹೊಂದಿದ್ದಾರೆ. ಹಾಗೆಯೇ ಸ್ಕೋಡಾ ಸೂಪರ್ಬ್ 39 ಮತ್ತು ನಿಸ್ಸಾನ್ ಜೊಂಗಾ ಹಾಗೂ ಪೋರ್ಚ್ 911 ಟರ್ಬೊ ಕಾರುಗಳು ಕೂಡ ಸೂರ್ಯಕುಮಾರ್ ಯಾದವ್ ಬಳಿಯಿದೆ.
- ಕಾರುಗಳಲ್ಲದೆ ಸೂರ್ಯಕುಮಾರ್ ಯಾದವ್ ಅವರ ಬಳಿ ಒಂದಷ್ಟು ದುಬಾರಿ ಬೈಕ್ಗಳು ಕೂಡ ಇರುವುದು ವಿಶೇಷ. ಇತ್ತೀಚೆಗೆ BMW S RR 1000 ಬೈಕ್ ಅನ್ನು ಸುಮಾರು 27 ಲಕ್ಷ ರೂ. ನೀಡಿ ಖರೀದಿಸಿದ್ದರು.
- ಸೂರ್ಯಕುಮಾರ್ ಯಾದವ್ ಮುಂಬೈನ ಪಿಳ್ಳೈ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ರಣಜಿಯಲ್ಲಿ ಮುಂಬೈ ತಂಡವನ್ನೇ ಪ್ರತಿನಿಧಿಸಿದ್ದರು. ಇದೀಗ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವುದು ವಿಶೇಷ.
- ಸೂರ್ಯಕುಮಾರ್ ಯಾದವ್ ಜುಲೈ 2016 ರಲ್ಲಿ ದೇವಿಶಾ ಸೇಥಿ ಅವರನ್ನು ವಿವಾಹವಾದರು. ವಿಶೇಷ ಎಂದರೆ ಇಬ್ಬರೂ ಕಾಲೇಜಿನಲ್ಲಿ ಪ್ರೇಮಿಗಳಾಗಿದ್ದರು. ಆ ಬಳಿಕ ತನ್ನ ಪ್ರೇಯಸಿಯನ್ನೇ ವಿವಾಹವಾಗಿ ಸೂರ್ಯಕುಮಾರ್ ದಾಂಪತ್ಯ ಜೀವನವನ್ನು ಆರಂಭಿಸಿದ್ದರು. ಇದೀಗ ಪತ್ನಿ ದೇವಿಶಾ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್. ಪ್ರಸ್ತುತ, ಅವರ ಸ್ಟ್ರೈಕ್ ರೇಟ್ 173.29 ಆಗಿದೆ.
- ಸೂರ್ಯಕುಮಾರ್ ಯಾದವ್ ಪ್ರಸ್ತುತ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಭಾರತದ ಅಗ್ರ ಬ್ಯಾಟ್ಸ್‌ಮನ್ ಎಂಬುದು ವಿಶೇಷ. ಅಂದರೆ ಪ್ರಸ್ತುತ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
- ಟಿ20 ಕ್ರಿಕೆಟ್ನಲ್ಲಿ ಭಾರತ ಪರ ಗರಿಷ್ಠ ಸ್ಕೋರ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿದೆ. ಅವರು ಇಂಗ್ಲೆಂಡ್ ವಿರುದ್ಧ ಅಜೇಯ 117 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (122) ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ (118) ಇದ್ದಾರೆ.
- ಸೂರ್ಯಕುಮಾರ್ ಯಾದವ್ ಇದುವರೆಗೆ ಕೇವಲ 1 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಅದು ಕೂಡ ಟಿ20 ಕ್ರಿಕೆಟ್ನಲ್ಲಿ ಎಂಬುದು ವಿಶೇಷ.
- ಸೂರ್ಯಕುಮಾರ್ ಭಾರತ ಪರ 13 ಏಕದಿನ ಪಂದ್ಯಗಳನ್ನು ಆಡಿದ್ದು, ಈ ವೇಳೆ 2 ಅರ್ಧಶತಕಗಳೊಂದಿಗೆ 340 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 64 ರನ್.
- ಟೀಮ್ ಇಂಡಿಯಾ 26 ಟಿ20 ಇನ್ನಿಂಗ್ಸ್‌ಗಳನ್ನು ಆಡಿರುವ ಸೂರ್ಯಕುಮಾರ್ 172.29 ಸ್ಟ್ರೈಕ್ ರೇಟ್ನಲ್ಲಿ 811 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ
Published On - 11:24 am, Wed, 14 September 22