IND vs SA: 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದರೂ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ

| Updated By: Vinay Bhat

Updated on: Sep 29, 2022 | 10:49 AM

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಯಲ್ಲಿ ಭರ್ಜರಿ ಗೆಲುವು ಸಾಧಿಸಿ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರ ಜೊತೆಗೆ ರೋಹಿತ್ ಪಡೆ ಟಿ20 ಕ್ರಿಕೆಟ್​ನಲ್ಲಿ ಕೆಟ್ಟ ದಾಖಲೆ ಬರೆದಿದೆ.

IND vs SA: 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದರೂ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ
IND vs SA
Follow us on

ತಿರುವನಂತಪುರಂನ ಗ್ರೀನ್​ಫೀಲ್ಡ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs South Africa) ಭರ್ಜರಿ ಗೆಲುವು ಸಾಧಿಸಿದೆ. ಅರ್ಶ್​​ದೀಪ್ ಸಿಂಗ್ (Arshdeep Singh), ದೀಪಕ್ ಚಹರ್ ಹಾಗೂ ಹರ್ಷಲ್ ಪಟೇಲ್ ಮಾರಕ ಬೌಲಿಂಗ್ ಹಾಗೂ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ (Suryakumar Yadav) ಆಕರ್ಷಕ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರ ಜೊತೆಗೆ ರೋಹಿತ್ ಪಡೆ ಟಿ20 ಕ್ರಿಕೆಟ್​ನಲ್ಲಿ ಕೆಟ್ಟ ದಾಖಲೆ ಬರೆದಿದೆ.

ಈ ಪಂದ್ಯದಲ್ಲಿ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ತೀರಾ ನಿಧಾನಗತಿಯ ಆರಂಭ ಪಡೆದುಕೊಂಡಿತು. ಜೊತೆಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕೂಡ ಕಳೆದುಕೊಂಡಿತು. ರಾಹುಲ್ ಕೂಡ ಆಮೆಗತಿಯ ಬ್ಯಾಟಿಂಗ್ ನಡೆಸಿದರು. ಇದರ ಪರಿಣಾಮ ಭಾರತ ಪವರ್ ಪ್ಲೇಯಲ್ಲಿ ಕಲೆಹಾಕಿದ್ದು ಕೇವಲ 17 ರನ್​ಗಳನ್ನು ಮಾತ್ರ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ. ಕಗಿಸೊ ರಬಾಡ ತಮ್ಮ ಮೂರು ಓವರ್​ನಲ್ಲಿ ಕೊಟ್ಟಿದ್ದು ಕೇವಲ 6 ರನ್​ಗಳನ್ನು ಮಾತ್ರ. ಇತ್ತ ಪಾರ್ನೆನ್ ಕೂಡ ಮೊದಲ ಮೂರು ಓವರ್​ಗಳಲ್ಲಿ ಕೇವಲ 11 ರನ್ ಬಿಟ್ಟುಕೊಟ್ಟರಷ್ಟೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್​ ದಾಳಿಗೆ ಅಕ್ಷರಶಃ ನೆಲಕಚ್ಚಿ ಹೋಯಿತು. ಕೇವಲ 9 ರನ್​ಗೆ 5 ವಿಕೆಟ್​ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಕ್ವಿಂಟನ್ ಡಿ ಕಾಕ್ ಕೇವಲ​ 1 ರನ್​ಗೆ ಔಟಾದರೆ, ನಾಯಕ ತೆಂಬಾ ಬವುಮಾ ಹಾಗೂ ರಿಲೀ ರೊಸೊವ್ ಸೊನ್ನೆ ಸುತ್ತಿದರು. ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಕೂಡ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು.

ಇದನ್ನೂ ಓದಿ
Suryakumar Yadav: ಸೂರ್ಯನ ಸಿಡಿಲಬ್ಬರಕ್ಕೆ ಕೊಹ್ಲಿ, ಧವನ್, ರೋಹಿತ್ ದಾಖಲೆ ಉಡೀಸ್
IND vs SA: ಮಿಂಚಿದ ಅರ್ಷದೀಪ್- ದೀಪಕ್, ರಾಹುಲ್- ಸೂರ್ಯ ಅರ್ಧಶತಕ; ಭಾರತಕ್ಕೆ ಸುಲಭ ಜಯ
IND vs SA: 15 ಎಸೆತ, 5 ವಿಕೆಟ್.. ನಾಲ್ವರು ಶೂನ್ಯಕ್ಕೆ ಔಟ್! ಹರಿಣಗಳ ಪೆವಿಲಿಯನ್ ಪರೇಡ್ ವಿಡಿಯೋ ನೋಡಿ
IND vs SA: ಎರಡೇ ಪಂದ್ಯಗಳಿಗೆ ಸುಸ್ತಾದ ಬುಮ್ರಾ; ಮತ್ತೆ ಇಂಜುರಿಗೊಂಡ ಯಾರ್ಕರ್ ಕಿಂಗ್..! ಪಂದ್ಯಕ್ಕೆ ಅಲಭ್ಯ

ಈ ಸಂದರ್ಭ ತಂಡವನ್ನು ಕೊಂಚ ಮೇಲಕ್ಕೆತ್ತಿದ್ದು ಕೇಶವ್​ ಮಹಾರಾಜ್ ಹಾಗೂ ಆ್ಯಡಂ ಮರ್ಕ್ರಮ್.​ ಮಹರಾಜ್ 35 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್​ ಸಿಡಿಸಿ 41 ರನ್​ ಗಳಿಸಿ ಔಟಾದರು. ಆ್ಯಡಂ ಮಾರ್ಕ್ರಮ್​ 25 ರನ್​ ಗಳಿಸಿದರು. ಆಲ್​ರೌಂಡರ್​ ವೇಯ್ನ ಪಾರ್ನೆಲ್​ 37 ಎಸೆತಗಳಲ್ಲಿ 24 ರನ್ ಕಲೆಹಾಕಿ ನೆರವಾದರು. ಆಫ್ರಿಕಾ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ಭಾರತ ಅರ್ಶ್​ದೀಪ್ ಸಿಂಗ್ 3 ವಿಕೆಟ್ ಕಿತ್ತರೆ, ದೀಪಕ್ ಚಹರ್, ಹರ್ಷಲ್ ಪಟೇಲ್ ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆ ಮುಖ್ಯ ಎರಡು ವಿಕೆಟ್​ಗಳನ್ನು ಕೂಡ ಕಳೆದುಕೊಂಡಿತು. ನಾಯಕ ರೋಹಿತ್​ ಶರ್ಮಾ ಖಾತೆ ತೆರೆಯುವ ಮುನ್ನವೇ ಔಟಾದರು. ವಿರಾಟ್​ ಕೊಹ್ಲಿ ಕೂಡ 3 ರನ್​ಗೆ ಸುಸ್ತಾದರು. ಬಳಿಕ ಕ್ರೀಸ್​ ಹಂಚಿಕೊಂಡ ಕೆ ಎಲ್​ ರಾಹುಲ್​ ಹಾಗೂ ಸೂರ್ಯಕುಮಾರ್​ ಯಾದವ್​ ಹರಿಣಗಳ ಮೇಲೆ ಸವಾರಿ ಮಾಡಿದರು. 4 ಸಿಕ್ಸರ್​, 2 ಬೌಂಡರಿ ಬಾರಿಸಿದ ರಾಹುಲ್​ ಔಟಾಗದೇ 51 ರನ್​ ಗಳಿಸಿದರು. ಭರ್ಜರಿ ಫಾರ್ಮ್​ನಲ್ಲಿರುವ ಸೂರ್ಯಕುಮಾರ್​ ಯಾದವ್ 3 ಸಿಕ್ಸರ್​, 5 ಬೌಂಡರಿ ಸಮೇತ 50 ರನ್​ ಬಾರಿಸಿದರು. ಇವರ ಬ್ಯಾಟಿಂಗ್ ನೆರವಿನಿಂದ ಭಾರತ 16.4 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿ ಜಯ ಸಾಧಿಸಿತು.

Published On - 10:49 am, Thu, 29 September 22