- Kannada News Photo gallery Cricket photos IND vs SA Big Blow For India Jasprit Bumrah Ruled Out of 1st T20I Due to Back Pain
IND vs SA: ಎರಡೇ ಪಂದ್ಯಗಳಿಗೆ ಸುಸ್ತಾದ ಬುಮ್ರಾ; ಮತ್ತೆ ಇಂಜುರಿಗೊಂಡ ಯಾರ್ಕರ್ ಕಿಂಗ್..! ಪಂದ್ಯಕ್ಕೆ ಅಲಭ್ಯ
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.
Updated on:Sep 28, 2022 | 7:38 PM

ಆದರೆ, ಬುಮ್ರಾ ವಿಷಯದಲ್ಲಿ ಇದು ಆಗಲಿಲ್ಲ. ಅವರು ಎಲ್ಲಾ ಮೂರು ಫಾರ್ಮ್ಯಾಟ್‌ಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ, ಇದಲ್ಲದೇ ಅವರು ಐಪಿಎಲ್‌ನಲ್ಲೂ ಆಡುತ್ತಿದ್ದಾರೆ. ಈಗ ಅವರು ಹೊಸ ಜವಾಬ್ದಾರಿಗೆ ಸಿದ್ಧರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು 2018 ರಲ್ಲಿ ಭಾರತೀಯ ತಂಡಕ್ಕೆ ತಮ್ಮ ಟೆಸ್ಟ್ ಪಾದಾರ್ಪಣೆ ಮಾಡಿದರು. ಈಗ ಟೀಮ್ ಇಂಡಿಯಾ ಪರ ಬುಮ್ರಾ 29 ಟೆಸ್ಟ್‌ಗಳನ್ನು ಆಡಿದ್ದಾರೆ, ಇದರಲ್ಲಿ ಅವರು 21.73 ಸರಾಸರಿಯಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ.

ಬುಮ್ರಾ ಅಲಭ್ಯತೆ ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ. ಈ ಹಿನ್ನಡೆಯ ನಂತರ, ಈಗ ಅವರ ಸ್ಥಾನಕ್ಕೆ ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಮೊಹಮ್ಮದ್ ಶಮಿ ಇರುತ್ತಾರಾ ಅಥವಾ ದೀಪಕ್ ಚಹಾರ್ ಆಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಆದರೆ ಇದೆಲ್ಲದಕ್ಕೂ ಮಿಗಿಲಾಗ ಟೀಮ್ ಮ್ಯಾನೇಜ್ಮೆಂಟ್ ಬೇರೆಯವರಿಗೆ ಅವಕಾಶ ನೀಡಿದ್ದರೂ ನೀಡಬಹುದು.

ಜಸ್ಪ್ರೀತ್ ಬುಮ್ರಾ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ವೈದ್ಯಕೀಯ ತಂಡ ತಪಾಸಣೆ ನಡೆಸಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಮೊದಲ ಟಿ20ಯಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ಪ್ರಶ್ನಿಸಿದವರಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಸೇರಿದ್ದಾರೆ. ಶೋಯೆಬ್ ಅಖ್ತರ್, 'ಬುಮ್ರಾ ಬೆನ್ನು ಮತ್ತು ಭುಜದ ಮೇಲೆ ಹೆಚ್ಚಿನ ಭಾರ ಬಿಟ್ಟು ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಬುಮ್ರಾ ಬೆನ್ನಿನಲ್ಲಿ ಏನಾದರೂ ಸಮಸ್ಯೆ ಉಟಾಂದರೆ, ಅವರಿಗೆ ಮುಂದೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಇದಕ್ಕೆ ಸೂಕ್ತ ಉದಾಹರಣೆಯಾಗಿ ಇಯಾನ್ ಬಿಷಪ್ ಮತ್ತು ಶೇನ್ ಬಾಂಡ್ ಕೂಡ ಇದ್ದಾರೆ ಎಂದಿದ್ದರು. ಪ್ರತಿ ಪಂದ್ಯದಲ್ಲೂ ಬುಮ್ರಾ ಕೇವಲ ಬೌಲಿಂಗ್ ಅಷ್ಟೇ ಮಾಡಬೇಕು, ಫೀಲ್ಡಿಂಗ್ ಮಾಡಲೇಬಾರದು ಎಂದಿದ್ದಾರು. ಪ್ರತಿ ಪಂದ್ಯದಲ್ಲೂ ಟೀಂ ಇಂಡಿಯಾ ಅವರಿಗೆ ಅವಕಾಶ ನೀಡಿದರೆ, ಬುಮ್ರಾ ಒಂದು ವರ್ಷದಲ್ಲಿ ಸಂಪೂರ್ಣವಾಗಿ ತಂಡದಿಂದ ಹೊರಹೊಗಲಿದ್ದಾರೆ ಎಂದಿದ್ದರು.

ಮೂಲಗಳ ಪ್ರಕಾರ ಇಂಜುರಿಗೊಳಗಾಗಿರುವ ಬುಮ್ರಾಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಮಾಡದಿದ್ದರೂ ಅವರು ಅದರಿಂದ ಚೇತರಿಸಿಕೊಳ್ಳಲು 4 ರಿಂದ 6 ತಿಂಗಳುಗಳು ಬೇಕಾಗುತ್ತದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published On - 7:38 pm, Wed, 28 September 22




