ICC T20I Rankings: ನಂ.1 ಪಟ್ಟದ ಮೇಲೆ ಕಣ್ಣಿಟ್ಟ ಸೂರ್ಯಕುಮಾರ್..! ಕೊಹ್ಲಿ- ರೋಹಿತ್​ಗೂ ಲಾಭ

ICC T20I Rankings: ಕಳೆದ ವಾರ, ಸೂರ್ಯಕುಮಾರ್ ಯಾದವ್ ಅವರು ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ 3 ನೇ ಸ್ಥಾನಕ್ಕೆ ತಲುಪಿದ್ದರು. ಆದರೆ ಈಗ ಈ ಆಟಗಾರ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಾಮ್ ಅವರನ್ನು ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on:Sep 28, 2022 | 3:31 PM

ಈಗ ಪ್ರಶ್ನೆ ಏನೆಂದರೆ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಬದಲಿಗೆ ಯಾರು ಆಡುತ್ತಾರೆ? ಎಂಬುದಾಗಿದೆ. ಇಬ್ಬರೂ ಆಟಗಾರರು ವಿಶ್ರಾಂತಿ ಪಡೆದರೆ, ಶ್ರೇಯಸ್ ಅಯ್ಯರ್​ಗೆ ತಂಡದಲ್ಲಿ ಸ್ಥಾನ ಖಚಿತವಾಗಲಿದೆ. ಇದೇ ವೇಳೆ ಚೊಚ್ಚಲ ಬಾರಿಗೆ ತಂಡ ಸೇರಿಕೊಂಡಿರುವ ಶಹಬಾಜ್ ಅಹ್ಮದ್ ಅವರಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ.

1 / 5
ಸೂರ್ಯ ಕೇವಲ 573 ಎಸೆತಗಳಲ್ಲಿ 174 ಸ್ಟ್ರೈಕ್ ರೇಟ್‌ನೊಂದಿಗೆ 1000 ರನ್ ಪೂರೈಸಿದರು. 604 ಎಸೆತಗಳಲ್ಲಿ (166 ಸ್ಟ್ರೈಕ್ ರೇಟ್) 1000 ರನ್ ಗಳಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಭಾರತದ ಸ್ಟಾರ್ ಮುರಿದರು.

2 / 5
ಈ ಇನ್ನಿಂಗ್ಸ್‌ ಮೂಲಕ ಸೂರ್ಯ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿ ದಾಖಲೆ ಕೂಡ ನಿರ್ಮಿಸಿದರು. ಅದರ ಜೊತೆಗೆ ಕಡಿಮೆ ಎಸೆತಗಳಲ್ಲಿ ಈ ದಾಖಲೆ ಮಾಡಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆಗೂ ಪಾತ್ರರಾದರು .

3 / 5
ತಿರುವನಂತಪುರದಲ್ಲಿ ನಡೆದ ಮೊದಲ ಟಿ20ಯಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ದ ಸೂರ್ಯ, ಗುವಾಹಟಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಕ್ಷರಶಃ ರೌದ್ರರೂಪ ತಾಳಿದರು. ತನ್ನ ಇನ್ನಿಂಗ್ಸ್​ನಲ್ಲಿ ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ, 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ 61 ರನ್‌ ಚಚ್ಚಿದ್ದಾರೆ.

4 / 5
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಟಿ20 ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದು, ರೋಹಿತ್ ಶರ್ಮಾ 13ನೇ ಸ್ಥಾನ ಹಾಗೂ ವಿರಾಟ್ ಕೊಹ್ಲಿ 15ನೇ ಸ್ಥಾನಕ್ಕೆ ತಲುಪಿದ್ದಾರೆ.

5 / 5

Published On - 3:26 pm, Wed, 28 September 22

Follow us