IND vs SA T20 Highlights: ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಸುಲಭ ಜಯ

TV9 Web
| Updated By: ಪೃಥ್ವಿಶಂಕರ

Updated on:Sep 28, 2022 | 10:26 PM

IND Vs SA T20 Match Highlights: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಆರಂಭವನ್ನು ಮಾಡಿದ್ದು, ಗೆಲುವಿನ ಹಾದಿಯಲ್ಲಿ ಸತತ ಮೂರನೇ ಹೆಜ್ಜೆ ಇರಿಸಿದೆ.

IND vs SA T20 Highlights: ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಸುಲಭ ಜಯ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಆರಂಭವನ್ನು ಮಾಡಿದ್ದು, ಗೆಲುವಿನ ಹಾದಿಯಲ್ಲಿ ಸತತ ಮೂರನೇ ಹೆಜ್ಜೆ ಇರಿಸಿದೆ. ಸತತ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಸರಣಿ ಗೆದ್ದ ಮೂರು ದಿನಗಳ ನಂತರ ಟೀಂ ಇಂಡಿಯಾ ಹೊಸ ಎದುರಾಳಿಯ ವಿರುದ್ಧವೂ ಗೆದ್ದಿದೆ. ತಿರುವನಂತಪುರಂನಲ್ಲಿ ವೇಗದ ಬೌಲರ್​ಗಳ ಸಹಕಾರಿ ಪಿಚ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಬ್ಯಾಟ್ಸ್​ಮನ್​ಗಳು ಸಂಕಷ್ಟಕ್ಕೆ ಸಿಲುಕಿದರು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಕೇವಲ 106 ರನ್‌ಗಳಿಗೆ ಕಟ್ಟಿಹಾಕಿತು. ಆರಂಭಿಕ ಸಂಕಷ್ಟದ ನಂತರ ಭಾರತ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು.

LIVE NEWS & UPDATES

The liveblog has ended.
  • 28 Sep 2022 10:23 PM (IST)

    ಟೀಂ ಇಂಡಿಯಾಗೆ ಜಯ

    ಕೆಎಲ್ ರಾಹುಲ್ 17ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಶಮ್ಸಿ ಮೇಲೆ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. 107 ರನ್‌ಗಳ ಗುರಿಯನ್ನು ಭಾರತ ಎರಡು ವಿಕೆಟ್ ನಷ್ಟಕ್ಕೆ ಸಾಧಿಸಿತು. ಕೆಎಲ್ ರಾಹುಲ್ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯಕುಮಾರ್ 50 ರನ್ ಗಳಿಸಿ ಅಜೇಯರಾಗಿ ಉಳಿದರು.

  • 28 Sep 2022 10:22 PM (IST)

    ಸೂರ್ಯಕುಮಾರ್ ಅರ್ಧಶತಕ

    ಸೂರ್ಯಕುಮಾರ್ 17ನೇ ಓವರ್​ನ ಮೂರನೇ ಎಸೆತದಲ್ಲಿ 50 ರನ್ ಪೂರೈಸಿದರು. ಇದು ಟಿ20ಯಲ್ಲಿ ಅವರ ಎಂಟನೇ ಅರ್ಧಶತಕ.

  • 28 Sep 2022 10:16 PM (IST)

    ಸೂರ್ಯ ಫೋರ್

    16ನೇ ಓವರ್ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಬೌಂಡರಿ ಬಾರಿಸಿದರು. ರಬಾಡ ಅವರ ಲೌ ಫುಲ್ ಟಾಸ್ ಬಾಲ್ ಅನ್ನು ಸೂರ್ಯಕುಮಾರ್ ಮಿಡ್ ಆಫ್ ಮೇಲೆ ನಾಲ್ಕು ರನ್‌ಗಳಿಗೆ ಆಡಿದರು. ಮುಂದಿನ ಎಸೆತದಲ್ಲಿಯೂ ಸೂರ್ಯಕುಮಾರ್ ಅದ್ಭುತ ಶಾಟ್ ಆಡಿ ನಾಲ್ಕು ರನ್ ಗಳಿಸಿದರು.

  • 28 Sep 2022 10:16 PM (IST)

    ಸೂರ್ಯಕುಮಾರ್ ಅದ್ಭುತ ಹೊಡೆತ

    15ನೇ ಓವರ್​ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಭರ್ಜರಿ ಸಿಕ್ಸರ್ ಬಾರಿಸಿದರು. ನೋಕಿಯಾ ಯಾರ್ಕರ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಫುಲ್ ಟಾಸ್ ಆಗಿತ್ತು. ಸೂರ್ಯಕುಮಾರ್ ಅದನ್ನು ಸಿಕ್ಸ್ ಬಾರಿಸಿದರು.

  • 28 Sep 2022 10:02 PM (IST)

    ಸೂರ್ಯಕುಮಾರ್ ಸಿಕ್ಸರ್

    13ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಸಿಕ್ಸರ್ ಬಾರಿಸಿದರು. ಮಹಾರಾಜ್ ಅವರ ಆಫ್ ಸ್ಟಂಪ್ ಎಸೆತವನ್ನು ಸೂರ್ಯಕುಮಾರ್ ಸಿಕ್ಸರ್​ಗಟ್ಟಿದರು.

  • 28 Sep 2022 09:52 PM (IST)

    ಸೂರ್ಯಕುಮಾರ್ ಫೋರ್

    ಸೂರ್ಯಕುಮಾರ್ 11ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ್ದಾರೆ. ಮಹಾರಾಜ್ ಅವರ ಚೆಂಡು ಆಫ್ ಸ್ಟಂಪ್‌ನ ಹೊರಗೆ ಇತ್ತು ಅದನ್ನು ಸೂರ್ಯಕುಮಾರ್ ಕಟ್ ಮಾಡಿ ನಾಲ್ಕು ರನ್ ಗಳಿಸಿದರು.

  • 28 Sep 2022 09:51 PM (IST)

    ರಾಹುಲ್ ಸಿಕ್ಸರ್

    10ನೇ ಓವರ್​ನ ಕೊನೆಯ ಎಸೆತದಲ್ಲಿ ರಾಹುಲ್ ಸಿಕ್ಸರ್ ಬಾರಿಸಿದರು. ನೋಕಿಯಾ ಅವರ ಟಾಪ್ ಬಾಲ್‌ನಲ್ಲಿ ರಾಹುಲ್ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು.

  • 28 Sep 2022 09:32 PM (IST)

    ಸೂರ್ಯಕುಮಾರ್ ಸಿಕ್ಸರ್

    ಏಳನೇ ಓವರ್​ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ನೋಕಿಯಾ ಮೇಲೆ ಸಿಕ್ಸರ್ ಬಾರಿಸಿದರು.ಇದಾದ ನಂತರ ಮುಂದಿನ ಎಸೆತದಲ್ಲೂ ಸೂರ್ಯಕುಮಾರ್ ಸಿಕ್ಸರ್ ಬಾರಿಸಿದರು.

  • 28 Sep 2022 09:30 PM (IST)

    ಕೊಹ್ಲಿ ಔಟ್

    ಏಳನೇ ಓವರ್‌ನೊಂದಿಗೆ ಬಂದ ಎನ್ರಿಕ್ ನಾರ್ಕಿಯಾ ಮೊದಲ ಎಸೆತದಲ್ಲಿ ಕೊಹ್ಲಿಯನ್ನು ಔಟ್ ಮಾಡಿದರು. ನಾರ್ಕಿಯಾ ಅವರ ಚೆಂಡು ಆಫ್-ಸ್ಟಂಪ್‌ನ ಹೊರಗಿತ್ತು, ಅದನ್ನು ಕೊಹ್ಲಿ ಕಟ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಎಕ್ಸ್​ಟ್ರಾ ಬೌನ್ಸ್ ಆಗಿ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್ ಕೀಪರ್‌ನ ಕೈಗವಸುಗಳಿಗೆ ಹೋಯಿತು.

  • 28 Sep 2022 09:29 PM (IST)

    ರಾಹುಲ್ ಫೋರ್

    ಐದನೇ ಓವರ್‌ನ ಎರಡನೇ ಎಸೆತದಲ್ಲಿ ರಾಹುಲ್ ಖಾತೆಗೆ ಬೌಂಡರಿ ಸೇರಿದೆ. ರಬಾಡ ಅವರು ಆಫ್ ಸ್ಟಂಪ್‌ನಲ್ಲಿ ಬೌನ್ಸರ್ ಎಸೆದರು, ಅದು ರಾಹುಲ್ ಅವರ ಬ್ಯಾಟ್‌ನ ಅಂಚನ್ನು ತಾಗಿ ಸ್ಲಿಪ್‌ ಮೇಲೆ ಬೌಂಡರಿಗೆ ಹೋಯಿತು

  • 28 Sep 2022 09:08 PM (IST)

    ರೋಹಿತ್ ಔಟ್

    ಭಾರತದ ಮೊದಲ ವಿಕೆಟ್ ಪತನಗೊಂಡಿದೆ, ರೋಹಿತ್ ಔಟಾಗಿದ್ದಾರೆ. ಮೂರನೇ ಓವರ್‌ನ ಎರಡನೇ ಎಸೆತವನ್ನು ರಬಾಡ ಬೌಲ್ಡ್ ಮಾಡಿದರು. ಚೆಂಡು ರೋಹಿತ್ ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್ ಕೀಪರ್ ಕೈಗೆ ಹೋಯಿತು. ಕ್ವಿಂಟನ್ ಡಿ ಕಾಕ್ ಕ್ಯಾಚ್ ಹಿಡಿಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.

  • 28 Sep 2022 09:07 PM (IST)

    ರಾಹುಲ್ ಫೋರ್

    ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ರಾಹುಲ್ ಬೌಂಡರಿ ಬಾರಿಸಿದರು. ಪಾರ್ನೆಲ್ ಚೆಂಡನ್ನು ರಾಹುಲ್ ಫ್ಲಿಕ್ ಮಾಡಿ ನಾಲ್ಕು ರನ್‌ಗಳಿಗೆ ವಿಕೆಟ್‌ಕೀಪರ್‌ ಹಿಂದೆ ಕಳುಹಿಸಿದರು.

  • 28 Sep 2022 09:01 PM (IST)

    ರಬಾಡ ಮೇಡನ್ ಓವರ್

    ದಕ್ಷಿಣ ಆಫ್ರಿಕಾ ಪರ ಮೊದಲ ಓವರ್ ಬೌಲ್ ಮಾಡಲು ಬಂದ ರಬಾಡ ಈ ಓವರ್​ನಲ್ಲಿ ಭಾರತದ ಬ್ಯಾಟ್ಸ್​ಮನ್​ಗಳಿಗೆ ಒಂದೇ ಒಂದು ರನ್ ಗಳಿಸಲು ಅವಕಾಶ ನೀಡಲಿಲ್ಲ. ಅವರು ಈ ಓವರ್ ಮೇಡನ್ ಬೌಲ್ ಮಾಡಿದರು.

  • 28 Sep 2022 08:59 PM (IST)

    ಭಾರತದ ಇನ್ನಿಂಗ್ಸ್ ಆರಂಭ

    ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮೈದಾನದಲ್ಲಿದ್ದು, ಅವರ ಮುಂದೆ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಇದ್ದಾರೆ.

  • 28 Sep 2022 08:51 PM (IST)

    ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಅಂತ್ಯ

    ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಮುಗಿದಿದೆ. ಪ್ರವಾಸಿ ತಂಡ ಎಂಟು ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ.

  • 28 Sep 2022 08:40 PM (IST)

    ಮಹಾರಾಜ್ ಔಟ್

    ಮಹಾರಾಜ್ ಔಟಾಗಿದ್ದಾರೆ. 20ನೇ ಓವರ್‌ನ ಮೊದಲ ಎಸೆತದಲ್ಲಿ ಹರ್ಷಲ್ ಪಟೇಲ್ ಅವರನ್ನು ಬೌಲ್ಡ್ ಮಾಡಿದರು.

  • 28 Sep 2022 08:32 PM (IST)

    ಸಿಕ್ಸರ್

    19ನೇ ಓವರ್‌ ಎಸೆದ ಅರ್ಷದೀಪ್‌ಗೆ ಮಹಾರಾಜ್ ಎರಡು ಬಾರಿ ಹೊಡೆದರು. ಮೊದಲ ಎಸೆತದಲ್ಲಿ, ಅವರು ಆಫ್-ಸ್ಟಂಪ್‌ನ ಹೊರಗಿನಿಂದ ಸ್ಕೂಪ್ ಆಡಿ ಬೌಂಡರಿ ಬಾರಿಸಿದರೆ ಇದಾದ ಬಳಿಕ ಸಿಕ್ಸರ್ ಹೊಡೆದರು.

  • 28 Sep 2022 08:28 PM (IST)

    ಮಹಾರಾಜ್ ಫೋರ್

    16ನೇ ಓವರ್‌ನ ಕೊನೆಯ ಎಸೆತದಲ್ಲಿ ಕೇಶವ್ ಮಹಾರಾಜ್ ಖಾತೆಯಲ್ಲಿ ಬೌಂಡರಿ ಸೇರಿದೆ.

  • 28 Sep 2022 08:27 PM (IST)

    ಪರ್ನೆಲ್ ಔಟ್

    16ನೇ ಓವರ್‌ನ ಐದನೇ ಎಸೆತದಲ್ಲಿ ಪಾರ್ನೆಲ್ ಔಟಾದರು. ಅಕ್ಷರ್ ಪಟೇಲ್ ಎಸೆತದಲ್ಲಿ ಪಾರ್ನೆಲ್ ಅವರು ಮಿಡ್ ವಿಕೆಟ್ ಕಡೆಗೆ ಹೊಡೆದರು. ಅಲ್ಲಿ ನಿಂತಿದ್ದ ಸೂರ್ಯಕುಮಾರ್ ಅದ್ಭುತ ಕ್ಯಾಚ್ ಪಡೆದರು.

  • 28 Sep 2022 08:12 PM (IST)

    ಮಹಾರಾಜ್ ಸಿಕ್ಸ್

    ಕೇಶವ್ ಮಹಾರಾಜ್ 13ನೇ ಓವರ್​ನ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ದೀಪಕ್ ಚಾಹರ್ ಅವರ ಶಾರ್ಟ್ ಬಾಲ್ ಅನ್ನು ಮಹಾರಾಜ್ ಮಿಡ್‌ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

  • 28 Sep 2022 08:11 PM (IST)

    ಆಫ್ರಿಕಾದ 50 ರನ್ ಪೂರ್ಣ

    12ನೇ ಓವರ್‌ನ ಮೊದಲ ಎಸೆತದಲ್ಲಿ ದಕ್ಷಿಣ ಆಫ್ರಿಕಾದ 50 ರನ್‌ಗಳು ಪೂರ್ಣಗೊಂಡಿವೆ. ಆದರೆ ಇಲ್ಲಿಗೆ ಬರುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿದ್ದಾರೆ.

  • 28 Sep 2022 07:53 PM (IST)

    ಮಾರ್ಕ್ರಾಮ್ ಔಟ್

    ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಏಡನ್ ಮಾರ್ಕ್ರಾಮ್ ಔಟ್ ಆಗಿದ್ದಾರೆ. ಹರ್ಷಲ್ ಅವರ ಚೆಂಡು ಮಾರ್ಕ್ರಾಮ್ ಅವರ ಪ್ಯಾಡ್‌ಗೆ ತಗುಲಿತು, ಟೀಮ್ ಇಂಡಿಯಾ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಬಳಿಕ ರೋಹಿತ್ ವಿಮರ್ಶೆಯನ್ನು ತೆಗೆದುಕೊಂಡರು. ಅದರಲ್ಲಿ ಔಟಾಗಿರುವುದು ಸ್ಪಷ್ಟವಾಗಿತ್ತು.

  • 28 Sep 2022 07:43 PM (IST)

    ಪವರ್‌ಪ್ಲೇ ಮುಗಿದಿದೆ

    ಪವರ್‌ಪ್ಲೇ ಮುಗಿದಿದ್ದು, ಈ ಆರು ಓವರ್‌ಗಳು ಭಾರತದ ಹೆಸರಿನಲ್ಲಿವೆ ಏಕೆಂದರೆ ದಕ್ಷಿಣ ಆಫ್ರಿಕಾ ಈ ಓವರ್‌ಗಳಲ್ಲಿ ಕೇವಲ 30 ರನ್ ಗಳಿಸಿ ಅರ್ಧದಷ್ಟು ತಂಡದವರು ಪೆವಿಲಿಯನ್‌ಗೆ ಮರಳಿದರು.

  • 28 Sep 2022 07:40 PM (IST)

    ಪರ್ನೆಲ್ ಸಿಕ್ಸ್

    ಐದನೇ ಓವರ್​ನ ಕೊನೆಯ ಎಸೆತದಲ್ಲಿ ಪರ್ನೆಲ್ ಸಿಕ್ಸರ್ ಬಾರಿಸಿದರು. ಚಹಾರ್ ಅವರ ಎಸೆತದಲ್ಲಿ ಪರ್ನೆಲ್ ಲಾಂಗ್ ಆಫ್‌ನಲ್ಲಿ ಸಿಕ್ಸ್ ಹೊಡೆದರು.

  • 28 Sep 2022 07:39 PM (IST)

    ಮಾರ್ಕ್ರಾಮ್ ಫೋರ್

    ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಏಡನ್ ಮಕ್ರಂ ಬೌಂಡರಿ ಬಾರಿಸಿದರು. ಅರ್ಷದೀಪ್ ಅವರ ಲೆಗ್ ಸ್ಟಂಪ್ ಬಾಲ್ ಅನ್ನು ಮಾರ್ಕ್ರಾಮ್ ಫ್ಲಿಕ್ ಮಾಡಿ ನಾಲ್ಕು ರನ್‌ಗಳಿಗೆ ಕಳುಹಿಸಿದರು.

  • 28 Sep 2022 07:28 PM (IST)

    ದಕ್ಷಿಣ ಆಫ್ರಿಕಾಕ್ಕೆ ಐದನೇ ಹೊಡೆತ

    ದಕ್ಷಿಣ ಆಫ್ರಿಕಾಕ್ಕೆ ಐದನೇ ಹೊಡೆತ ಬಿದ್ದಿದೆ. ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ದೀಪಕ್ ಚಹಾರ್ ಔಟ್ ಮಾಡಿದರು.

  • 28 Sep 2022 07:19 PM (IST)

    ಡೇವಿಡ್ ಮಿಲ್ಲರ್ ಔಟ್

    ಅರ್ಷದೀಪ್ ಸಿಂಗ್ ಡೇವಿಡ್ ಮಿಲ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ಈ ವಿಕೆಟ್ ಪಡೆದರು. ಈಗ ಅವರಿಗೆ ತಮ್ಮ ಮುಂದಿನ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧಿಸುವ ಅವಕಾಶವಿದೆ.

  • 28 Sep 2022 07:18 PM (IST)

    ಅರ್ಷದೀಪ್​ಗೆ ವಿಕೆಟ್

    ಅರ್ಷದೀಪ್ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟಿದ್ದಾರೆ. ಎರಡನೇ ಓವರ್‌ನ ಐದನೇ ಎಸೆತದಲ್ಲಿ ರಿಲೆ ರುಸ್ಸೋ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

  • 28 Sep 2022 07:14 PM (IST)

    ಕ್ವಿಂಟನ್ ಡಿ ಕಾಕ್ ಔಟ್

    ಕ್ವಿಂಟನ್ ಡಿ ಕಾಕ್ ಔಟಾಗಿದ್ದಾರೆ. ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಅವರನ್ನು ಅರ್ಷದೀಪ್ ಔಟಾದರು. ಅರ್ಷದೀಪ್ ಅವರ ಹೊರಹೋಗುವ ಚೆಂಡನ್ನು ಕಟ್ ಮಾಡಲು ಡಿಕಾಕ್ ಪ್ರಯತ್ನಿಸಿದರು ಆದರೆ ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ ಸ್ಟಂಪ್‌ಗೆ ಬಡಿಯಿತು.

  • 28 Sep 2022 07:11 PM (IST)

    ಬವುಮಾ ಔಟ್

    ದೀಪಕ್ ಚಹಾರ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರನ್ನು ಬೌಲ್ಡ್ ಮಾಡಿದರು.

  • 28 Sep 2022 07:10 PM (IST)

    ಪಂದ್ಯ ಪ್ರಾರಂಭ

    ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಆರಂಭವಾಗಿದೆ. ಭಾರತದ ಪರ ದೀಪಕ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್ ಮತ್ತು ಟೆಂಬಾ ಬಾವುಮಾ ಇನಿಂಗ್ಸ್ ಆರಂಭಿಸಿದ್ದಾರೆ.

  • 28 Sep 2022 06:47 PM (IST)

    ಆಫ್ರಿಕಾ ತಂಡ

    ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಲೆ ರುಸ್ಸೋ, ಡೇವಿಡ್ ಮಿಲ್ಲರ್, ಏಡನ್ ಮಾರ್ಕ್ರಾಮ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪೆರ್ನೆಲ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ, ತಬರಿಜ್ ಶಮ್ಸಿ, ಕೇಶವ್ ಮಹಾರಾಜ್

  • 28 Sep 2022 06:46 PM (IST)

    ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಅರ್ಷದೀಪ್ ಸಿಂಗ್, ದೀಪಕ್ ಚಹಾರ್, ಹರ್ಷಲ್ ಪಟೇಲ್.

  • 28 Sep 2022 06:36 PM (IST)

    ಟಾಸ್ ಗೆದ್ದ ರೋಹಿತ್

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 28 Sep 2022 06:33 PM (IST)

    ದಕ್ಷಿಣ ಆಫ್ರಿಕಾಕ್ಕೆ ಮೊದಲ ಸೋಲು?

    ದಕ್ಷಿಣ ಆಫ್ರಿಕಾ ಭಾರತದಲ್ಲಿ ಇದುವರೆಗೆ ಯಾವುದೇ T20 ಸರಣಿಯನ್ನು ಕಳೆದುಕೊಂಡಿಲ್ಲ. ಹಾಗಾಗಿ ಈ ಬಾರಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಮೊದಲ ಸರಣಿಯ ಸೋಲನ್ನು ತವರಿನಲ್ಲಿ ನೀಡಲು ಪ್ರಯತ್ನಿಸಲಿದೆ.

  • 28 Sep 2022 06:27 PM (IST)

    ಟೀಮ್ ಇಂಡಿಯಾಗೆ ಕಾಂಬಿನೇಷನ್ ಸಮಸ್ಯೆ

    ಈ ಸರಣಿಯಲ್ಲಿ ಸರಿಯಾದ ಕಾಂಬಿನೇಷನ್ ಹುಡುಕುವುದು ಟೀಂ ಇಂಡಿಯಾಗೆ ಸವಾಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಈ ಸರಣಿಯ ಭಾಗವಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ಯಾರು ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನು ನೋಡಬೇಕಾಗಿದೆ.

  • Published On - Sep 28,2022 6:13 PM

    Follow us
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ