ನವೆಂಬರ್ 1 ರಿಂದ ಶುರುವಾಗಲಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 7 ಆಟಗಾರರನ್ನು ಒಳಗೊಂಡಿರುವ ಈ ತಂಡವನ್ನು ಕನ್ನಡಿಗ ರಾಬಿನ್ ಉತ್ತಪ್ಪ ಮುನ್ನಡೆಸಲಿದ್ದಾರೆ. ಹಾಗೆಯೇ ಈ ತಂಡದಲ್ಲಿ ಕರ್ನಾಟಕದ ಕ್ರಿಕೆಟಿಗರಾದ ಸ್ಟುವರ್ಟ್ ಬಿನ್ನಿ ಹಾಗೂ ಭರತ್ ಚಿಪ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಕೇದಾರ್ ಜಾಧವ್, ಮನೋಜ್ ತಿವಾರಿ, ಶಹಬಾಝ್ ನದೀಮ್ ಹಾಗೂ ಶ್ರೀವತ್ಸ್ ಗೋಸ್ವಾಮಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಆಟಗಾರರನ್ನು ಈ ಟೂರ್ನಿಗೆ ಬಿಸಿಸಿಐಗೆ ಹೆಸರಿಸಿದೆ.
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು 6 ಆಟಗಾರರನ್ನು ಒಳಗೊಂಡಿರುವ ಪಂದ್ಯಾವಳಿ. ಅಲ್ಲದೆ ಈ ಟೂರ್ನಿಯ ಪ್ರತಿ ಇನಿಂಗ್ಸ್ನಲ್ಲಿ ಕೇವಲ 5 ಓವರ್ಗಳನ್ನು ಮಾತ್ರ ಆಡಲಾಗುತ್ತದೆ. ಈ ಪಂದ್ಯಾವಳಿಯ ನಿಯಮಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಈ 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆಲ್ಲುವ ಅಗ್ರ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸುತ್ತದೆ. ದ್ವಿತೀಯ ಸುತ್ತಿನಲ್ಲಿ ಸೆಮಿಫೈನಲ್ ಇರಲಿದ್ದು, ಇದಾದ ಬಳಿಕ ಫೈನಲ್ ಮ್ಯಾಚ್ ನಡೆಯಲಿದೆ.
ಇದನ್ನೂ ಓದಿ: ಸಿರಾಜ್ ಈಗ ಡಿಎಸ್ಪಿ: ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?
ಭಾರತ ತಂಡ: ರಾಬಿನ್ ಉತ್ತಪ್ಪ (ನಾಯಕ), ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ, ಶಹಬಾಜ್ ನದೀಮ್, ಭರತ್ ಚಿಪ್ಲಿ, ಶ್ರೀವತ್ಸ್ ಗೋಸ್ವಾಮಿ (ವಿಕೆಟ್ ಕೀಪರ್).