ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ

Hong Kong Sixes: ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 12 ಸೀಸನ್​ಗಳನ್ನು ಆಡಲಾಗಿದೆ.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
Team India - HK6
Follow us
|

Updated on: Oct 08, 2024 | 8:05 AM

ನವೆಂಬರ್ 1 ರಿಂದ ನವೆಂಬರ್ 3 ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಕ್ರಿಕೆಟ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸಲಿದೆ. ಆದರೆ ಇಲ್ಲಿ ಟೀಮ್ ಇಂಡಿಯಾದ ಸಂಪೂರ್ಣ ಬಳಗ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಈ ಟೂರ್ನಿಯಲ್ಲಿ ಕೇವಲ 6 ಆಟಗಾರರು ಮಾತ್ರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಈ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳಿದ್ದು, ಈ ಪಂದ್ಯಾವಳಿಯು ಟಿ20 ಕ್ರಿಕೆಟ್​ಗಿಂತ ಭಿನ್ನವಾಗಿರಲಿದೆ.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ನಿಯಮಗಳು:

  • ಒಂದು ತಂಡದ ಆಡುವ ಬಳಗದಲ್ಲಿ ಕೇವಲ 6 ಆಟಗಾರರಿಗೆ ಮಾತ್ರ ಅವಕಾಶ.
  • ಪ್ರತಿ ಪಂದ್ಯದ ಇನಿಂಗ್ಸ್​ವೊಂದರಲ್ಲಿ 5 ಓವರ್​ಗಳನ್ನು ಆಡಲಾಗುತ್ತದೆ.
  • ಪ್ರತಿ ಓವರ್​ನಲ್ಲಿ 8 ಎಸೆತಗಳು ಇರಲಿದೆ. ಸಾಮಾನ್ಯ ಪಂದ್ಯಗಳಲ್ಲಿ ಒಂದು ಓವರ್​ಗೆ 6 ಬಾಲ್​ಗಳು ಮಾತ್ರ ಇರುತ್ತವೆ.
  • ವೈಡ್ ಮತ್ತು ನೋಬಾಲ್​ಗೆ 2 ರನ್​ಗಳನ್ನು ನೀಡಲಾಗುತ್ತದೆ.
  • ವಿಕೆಟ್-ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ತಂಡದ ಪ್ರತಿಯೊಬ್ಬ ಸದಸ್ಯರು ಬೌಲಿಂಗ್ ಮಾಡಬೇಕು.
  • ನಿಗದಿತ 5 ಓವರ್‌ಗಳು ಮುಗಿಯುವ ಮುನ್ನ 5 ವಿಕೆಟ್‌ಗಳು ಪತನವಾದರೆ, ಕೊನೆಯ ಬ್ಯಾಟರ್ ಸಿಂಗಲ್ ಆಗಿ ಬ್ಯಾಟಿಂಗ್ ಮಾಡಬಹುದು.
  • ಸಿಂಗಲ್ ಬ್ಯಾಟ್ಸ್​ಮನ್​ ಜೊತೆ ಮತ್ತೋರ್ವ ಆಟಗಾರ ರನ್ನರ್ ಆಗಿ ನಾನ್​ ಸ್ಟ್ರೈಕ್​ನಲ್ಲಿರಬೇಕು. ಆದರೆ ಆತನಿಗೆ ಬ್ಯಾಟಿಂಗ್ ಅವಕಾಶವಿರುವುದಿಲ್ಲ.
  • ಬ್ಯಾಟ್ಸ್‌ಮನ್‌ 31 ರನ್​ಗಳಿಸಿದರೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಬೇಕು. ಇದಾದ ಬಳಿಕ ಇತರೆ ಬ್ಯಾಟ್ಸ್‌ಮನ್‌ಗಳು ಔಟಾದರೆ, ನಿವೃತ್ತರಾದ ಬ್ಯಾಟರ್​ ಮತ್ತೆ ಬ್ಯಾಟಿಂಗ್ ಮಾಡಬಹುದು.

ಕಣಕ್ಕಿಳಿಯುವ ತಂಡಗಳಾವುವು?

  • ಭಾರತ
  • ಪಾಕಿಸ್ತಾನ್
  • ಆಸ್ಟ್ರೇಲಿಯಾ
  • ಬಾಂಗ್ಲಾದೇಶ್
  • ಹಾಂಗ್​ ಕಾಂಗ್
  • ಇಂಗ್ಲೆಂಡ್
  • ನೇಪಾಳ
  • ನ್ಯೂಝಿಲೆಂಡ್
  • ಒಮಾನ್
  • ಸೌತ್ ಆಫ್ರಿಕಾ
  • ಶ್ರೀಲಂಕಾ
  • ಯುಎಇ

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸ್ವರೂಪವೇನು?

ಈ 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆಲ್ಲುವ ಅಗ್ರ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸುತ್ತದೆ. ದ್ವಿತೀಯ ಸುತ್ತಿನಲ್ಲಿ ಸೆಮಿಫೈನಲ್ ಇರಲಿದ್ದು, ಇದಾದ ಬಳಿಕ ಫೈನಲ್ ಮ್ಯಾಚ್ ನಡೆಯಲಿದೆ.

ಈ ಪಂದ್ಯಾವಳಿ ಶುರುವಾಗಿದ್ದು ಯಾವಾಗ?

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸಿಕ್ಸರ್​ಗೆ ಕೆಳಗೆ ಬಿದ್ದ ವಿರಾಟ್ ಕೊಹ್ಲಿಯ ದಾಖಲೆ

ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 12 ಸೀಸನ್​ಗಳನ್ನು ಆಡಲಾಗಿದೆ. ಆದರೆ 2012 ರಲ್ಲಿ ಮತ್ತೆ ನಿಂತು ಹೋದ ಟೂರ್ನಿಯನ್ನು 2017 ರಲ್ಲಿ ಮತ್ತೆ ಆಯೋಜಿಸಲಾಗಿತ್ತು. ಅದುವೇ ಕೊನೆ, ಇದಾದ ಬಳಿಕ ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿ ನಡೆದಿರಲಿಲ್ಲ. ಇದೀಗ 7 ವರ್ಷಗಳ ಬಳಿಕ ಮತ್ತೆ ಆರು ಆಟಗಾರರ ಪಂದ್ಯಾವಳಿಯನ್ನು ಆಯೋಜಿಸಲು ಹಾಂಗ್ ಕಾಂಗ್ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಆಡಿರುವ ಟೀಮ್ ಇಂಡಿಯಾದ ಆಟಗಾರರು:

  • ಸಚಿನ್ ತೆಂಡೂಲ್ಕರ್
  • ಎಂಎಸ್ ಧೋನಿ
  • ಅನಿಲ್ ಕುಂಬ್ಳೆ
  • ಸಂಜಯ್ ಬಂಗಾರ್
  • ಸುನಿಲ್ ಜೋಷಿ
  • ನಿಖಿಲ್ ಚೋಪ್ರಾ
  • ರಿತೇಂದ್ರ ಸೋಧಿ
  • ಹೃಷಿಕೇಶ್ ಕಾನಿಟ್ಕರ್.

2024ರ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಯಾವಾಗ ಶುರು?

ನವೆಂಬರ್ 1 ರಿಂದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು ಶುರುವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 3 ರಂದು ಜರುಗಲಿದೆ. ಈ ಎಲ್ಲಾ ಪಂದ್ಯಗಳಿಗೆ ಹಾಂಗ್​ ಕಾಂಗ್​ನ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ
ಈ ರಾಶಿಯವರು ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ‌ ಪ್ರಗತಿ ಕಾಣಲಿದ್ದಾರೆ
ಈ ರಾಶಿಯವರು ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ‌ ಪ್ರಗತಿ ಕಾಣಲಿದ್ದಾರೆ
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ