ಇದಕ್ಕೆ ಮುಖ್ಯ ಕಾರಣ, ಬಾಬರ್ ಆಝಂ ಟೆಸ್ಟ್ ಕ್ರಿಕೆಟ್ನಲ್ಲಿ ಅರ್ಧಶತಕ ಬಾರಿಸಿ ಬರೋಬ್ಬರಿ 648 ದಿನಗಳು ಕಳೆದಿರುವುದು. ಡಿಸೆಂಬರ್ 26, 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಅವರು ಕೊನೆಯ ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ಟೆಸ್ಟ್ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸಿಲ್ಲ. ಹೀಗಾಗಿಯೇ ಇದೀಗ ಟೆಸ್ಟ್ ತಂಡಕ್ಕೆ ಬಾಬರ್ ಆಝಂ ಅವರ ಆಯ್ಕೆಯನ್ನು ಕೆಲ ಮಾಜಿ ಆಟಗಾರರು ಪ್ರಶ್ನಿಸಿದ್ದಾರೆ.