ಸಿರಾಜ್ ಈಗ ಡಿಎಸ್​ಪಿ: ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?

Mohammed Siraj: 2024ರ ಟಿ20 ವಿಶ್ವಕಪ್​ನಲ್ಲಿ ಮೊಹಮ್ಮದ್ ಸಿರಾಜ್ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ತೆಲಂಗಾಣದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಈ ಸಾಧನೆಗಾಗಿ ತೆಲಂಗಾಣ ಸರ್ಕಾರ ಮೊಹಮ್ಮದ್ ಸಿರಾಜ್​ಗೆ ಡಿಎಸ್​ಪಿ ಹುದ್ದೆ ನೀಡಿ ಗೌರವಿಸಿದೆ.

ಝಾಹಿರ್ ಯೂಸುಫ್
|

Updated on:Oct 12, 2024 | 10:19 AM

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತೆಲಂಗಾಣದ ಡೆಪ್ಯೂಟಿ ಸೂಪರಿಂಟೆಂಡಂಟ್‌ ಅಫ್‌ ಪೊಲೀಸ್ (DSP) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾಡಿದ ಸಾಧನೆಗಾಗಿ ತೆಲಂಗಾಣ ಸರ್ಕಾರ ಸಿರಾಜ್ ಅವರಿಗೆ ಗೌರವಾನ್ವಿತ ಡಿಎಸ್​ಪಿ ಹುದ್ದೆ ನೀಡಿದೆ.

1 / 7
2024 ರಲ್ಲಿ ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಕೂಡ ಭಾಗಿಯಾಗಿದ್ದರು. ಹೈದರಾಬಾದ್​ ಮೂಲದ ಕ್ರಿಕೆಟಿಗನ ಈ ಸಾಧನೆಗಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಸಿರಾಜ್ ಅವರಿಗೆ ಗೌರವಾನ್ವಿತ ಡಿಎಸ್​ಪಿ ಹುದ್ದೆ ನೀಡಲು ಹಾಗೂ ಜಮೀನು ಮಂಜೂರು ಮಾಡಲು ನಿರ್ದೇಶಿಸಿದ್ದರು.

2 / 7
ಅದರಂತೆ ಶುಕ್ರವಾರ ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿತೇಂದರ್ ಅವರಿಗೆ ವರದಿ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಡಿಎಸ್​ಪಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ನೇಮಕದ ಬೆನ್ನಲ್ಲೇ ಸಿರಾಜ್ ಟೀಮ್ ಇಂಡಿಯಾವನ್ನು ತೊರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

3 / 7
ಏಕೆಂದರೆ ಸರ್ಕಾರಿ ಉದ್ಯೋಗ ಸಿಕ್ಕ ಹಿನ್ನಲೆಯಲ್ಲಿ ಸಿರಾಜ್ ಅವರಿಗೆ 1 ಲಕ್ಷ ರೂ. ಅಧಿಕ ವೇತನ ದೊರೆಯಲಿದೆ. ಆದರೆ ಅವರು ಸದ್ಯಕ್ಕಂತು ಟೀಮ್ ಇಂಡಿಯಾವನ್ನು ತೊರೆಯುವ ಸಾಧ್ಯತೆಯಿಲ್ಲ. ಏಕೆಂದರೆ ಸಿರಾಜ್​ ಅವರಿಗೆ ನೀಡಲಾಗಿರುವುದು ಗೌರವಾನ್ವಿತ ಹುದ್ದೆ. ಈ ಹುದ್ದೆಯನ್ನು ಅವರು ಯಾವಾಗ ಬೇಕಿದ್ದರೂ ಅಲಂಕರಿಸಬಹುದು. ಅಂದರೆ ಟೀಮ್ ಇಂಡಿಯಾದಿಂದ ನಿವೃತ್ತರಾದ ಬಳಿಕ ಅವರು ಡಿಎಸ್​ಪಿ ಆಗಿ ಕಾರ್ಯ ನಿರ್ವಹಿಸಬಹುದು.

4 / 7
ಹಾಗಾಗಿ ಸಿರಾಜ್ ಸದ್ಯಕ್ಕಂತು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್​ಪಿ) ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ. ಇನ್ನು ಕ್ರಿಕೆಟ್ ನಿವೃತ್ತಿಯ ಬಳಿಕ ಅವರು ಡಿಎಸ್​ಪಿ ಹುದ್ದೆಯನ್ನು ಅಲಂಕರಿಸುವ ಮುನ್ನ 2 ವರ್ಷಗಳ ಪೊಲೀಸ್ ಟ್ರೈನಿಂಗ್ ಕೂಡ ಮುಗಿಸಬೇಕು. ಇದಾದ ಬಳಿಕವಷ್ಟೇ ಅವರು ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಳ್ಳಬಹುದಾಗಿದೆ.

5 / 7
ಅಂದಹಾಗೆ 2007ರ ಟಿ20 ವಿಶ್ವಕಪ್ ಫೈನಲ್​ ಹೀರೋ ಜೋಗಿಂದರ್ ಶರ್ಮಾ ಈಗ ಹರ್ಯಾಣದ ಡಿಎಸ್​ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಜೋಗಿಂದರ್ ಶರ್ಮಾ ಅವರಿಗೆ ಹರ್ಯಾಣ ಸರ್ಕಾರ ಡಿಎಸ್​ಪಿ ಹುದ್ದೆಯೊಂದಿಗೆ 21 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅದರಂತೆ ಇದೀಗ ಜೋಗಿಂದರ್ ಶರ್ಮಾ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

6 / 7
ಹಾಗೆಯೇ ಉತ್ತರ ಪ್ರದೇಶ ಸರ್ಕಾರ ಭಾರತ ಮಹಿಳಾ ತಂಡದ ಆಟಗಾರ್ತಿ ದೀಪ್ತಿ ಶರ್ಮಾ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್‌ಪಿ) ನೇಮಿಸಿದೆ. ಟೀಮ್ ಇಂಡಿಯಾ ಪರ ಮಾಡಿದ ಸಾಧನೆಗಾಗಿ ಯುಪಿ ಸರ್ಕಾರ ಈ ಗೌರವಾನ್ವಿತ ಹುದ್ದೆಯನ್ನು ನೀಡಿದೆ. ಇದೀಗ ಡಿಎಸ್​ಪಿ ಹುದ್ದೆ ಅಲಂಕರಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಕೂಡ ಸೇರ್ಪಡೆಯಾಗಿದ್ದಾರೆ.

7 / 7

Published On - 8:54 am, Sat, 12 October 24

Follow us
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?

ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!

ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ

ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?

ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು

ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ

ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ