IND vs SA 1st T20I: ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ: ಸೂರ್ಯನಿಗೆ ಮತ್ತೊಂದು ಅಗ್ನಿ ಪರೀಕ್ಷೆ

|

Updated on: Dec 10, 2023 | 6:54 AM

India vs South Africa 1st T20I: ಇಂದು (ಡಿಸೆಂಬರ್ 10) ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಮೂಲಕ ಇಂಡೋ-ಆಫ್ರಿಕಾ ನಡುವಣ ಸುದೀರ್ಘ ಸರಣಿಗೆ ಚಾಲನೆ ಸಿಗಲಿದೆ.

IND vs SA 1st T20I: ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ: ಸೂರ್ಯನಿಗೆ ಮತ್ತೊಂದು ಅಗ್ನಿ ಪರೀಕ್ಷೆ
IND vs SA 1st T20I
Follow us on

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ (India vs South Africa) ಇಂದು ಚಾಲನೆ ಸಿಗಲಿದೆ. ಮೂರು ಟಿ20, ಮೂರು ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ-ಆಫ್ರಿಕಾ ಕಾದಾಟ ನಡೆಸಲಿದೆ. ಈ ಪೈಕಿ ಇಂದು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದು ವಿಶ್ವಾಸದಲ್ಲಿರುವ ಸೂರ್ಯಕುಮಾರ್ ಪಡೆ ಮತ್ತೊಂದು ಜಯವನ್ನು ಎದುರು ನೋಡುತ್ತಿದ್ದರೆ, ಅತ್ತ ತವರಿನಲ್ಲಿ ಆಫ್ರಿಕಾ ಅಬ್ಬರಿಸಲು ತಯಾರಾಗಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಹಲವರ ಆಗಮನ:

ಶುಭ್​ಮನ್ ಗಿಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲ ಆಟಗಾರರು ವಿಶ್ವಕಪ್ ಬಳಿಕ ತಂಡಕ್ಕೆ ಮರಳಿದ ಕಾರಣ, ಮೆನ್ ಇನ್ ಬ್ಲೂ ಸಾಕಷ್ಟು ಬಲಿಷ್ಠವಾಗಿದೆ. ಇದರ ಜೊತೆಗೆ ಗೊಂದಲವೂ ಉಂಟಾಗಿದೆ. ಗಿಲ್ ವಾಪಸಾಗಿರುವುದರಿಂದ ಭಾರತ ಯಾವ ಆರಂಭಿಕ ಆಟಗಾರನನ್ನು ಕೈಬಿಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರುತುರಾಜ್ ಗಾಯಕ್ವಾಡ್ ನಂ 3 ಬ್ಯಾಟರ್ ಆಗಬಹುದು. ಆದರೆ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿರುವುದರಿಂದ ಅವರಿಗೆ ಯಾವ ಕ್ರಮಾಂಕ ನೋಡಬೇಕು. ಗಾಯಕ್ವಾಡ್ ಬೆಂಚ್ ಕಾಯುವ ಸಾಧ್ಯತೆ ಕೂಡ ಇದೆ.

ಮಧ್ಯಮ ಕ್ರಮಾಂಕ ಕೂಡ ಗೊಂದಲದಲ್ಲಿದೆ. ಭಾರತ ಕ್ರಿಕೆಟ್ ತಂಡವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನಂಬರ್ 5 ಆಗಿ ಯಾರನ್ನು ಆಯ್ಕೆ ಮಾಡುತ್ತಾರೆ ನೋಡಬೇಕು. ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಮತ್ತು ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿದ್ದರೆ, 5ನೇ ಸ್ಥಾನಕ್ಕಾಗಿ ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಹೋರಾಡುತ್ತಿದ್ದಾರೆ. ಭಾರತಕ್ಕೆ ಕೀಪರ್ ಬೇಕಾಗಿರುವುದರಿಂದ ಜಿತೇಶ್ ಶರ್ಮಾ ಮತ್ತು ಇಶಾನ್ ಕಿಶನ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ
LLC 2023: ಲೆಜೆಂಡ್ಸ್ ಲೀಗ್​ನಲ್ಲಿ ಮಣಿಪಾಲ್ ಟೈಗರ್ಸ್ ಚಾಂಪಿಯನ್ಸ್​
ಆಕ್ಷನ್​ನಲ್ಲಿ ಹರಾಜಾದ ಹಾಗೂ ಹರಾಜಾಗದ ಆಟಗಾರ್ತಿಯರ ಪಟ್ಟಿ ಇಲ್ಲಿದೆ
ಭಾರತ ತಂಡಕ್ಕೆ ಹೀನಾಯ ಸೋಲುಣಿಸಿದ ಇಂಗ್ಲೆಂಡ್
WPL 2024: ಹರಾಜಿನ ಬಳಿಕ 5 ತಂಡಗಳು ಹೀಗಿವೆ

IND vs SA 1st T20I: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ: ಯಾಕೆ ಗೊತ್ತೇ?

ಹಾಗೆಯೆ ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ವಿಷಯವೂ ಇದೆ. ಬಿಷ್ಣೋಯ್ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಇತ್ತ ಯಾದವ್‌ ವಿಶ್ವಕಪ್​ನಲ್ಲಿ ನೀಡಿದ ಪ್ರದರ್ಶನ ಅದ್ಭುತವಾಗುತ್ತು. ರವೀಂದ್ರ ಜಡೇಜಾ ಕೂಡ ಇದ್ದಾರೆ. ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಅರ್ಶ್​ದೀಪ್ ಸಿಂಗ್ ವೇಗಿಗಳಾಗಿದ್ದಾರೆ.

ಆಫ್ರಿಕಾ ತಂಡ ಹೇಗಿದೆ?

ಭಾರತದಂತೆಯೇ, ದಕ್ಷಿಣ ಆಫ್ರಿಕಾ ಕೂಡ 2024 ರ ಟಿ20 ವಿಶ್ವಕಪ್‌ಗೆ ತಯಾರಾಗಲು ಕೇವಲ 6 T20I ಗಳನ್ನು ಹೊಂದಿದೆ. T20 ವಿಶ್ವಕಪ್ 2024 ಕ್ಕೆ ಟೆಂಬಾ ಬವುಮಾ ಇಲ್ಲದೆ, ದಕ್ಷಿಣ ಆಫ್ರಿಕಾವು ಹೊಸ-ರೂಪದ ತಂಡವನ್ನು ಹೊಂದಲಿದೆ, ಕ್ವಿಂಟನ್ ಡಿ ಕಾಕ್ ಬಿಗ್ ಬ್ಯಾಷ್ ಲೀಗ್‌ ಆಡುತ್ತಿರುವ ಕಾರಣ ಈ ಟಿ20 ಸರಣಿಯನ್ನು ಕಸಿದುಕೊಂಡಿದ್ದಾರೆ. ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ ಜೊತೆಗೆ ಲುಂಗಿ ಎನ್‌ಗಿಡಿ ಕೂಡ ವಿಶ್ರಾಂತಿಯಲ್ಲಿದ್ದಾರೆ. ಪೇಸ್ ಬ್ಯಾಟರ್‌ನಲ್ಲಿ ಹೊಸ ಮುಖ ನಾಂದ್ರೆ ಬರ್ಗರ್ ಹೊರತುಪಡಿಸಿ ಜೆರಾಲ್ಡ್ ಕೋಟ್ಜಿ ಮತ್ತು ಆಂಡಿಲ್ ಫೆಹ್ಲುಕ್ವಾಯೊ ಮಾತ್ರ ಇದ್ದಾರೆ. ಆದ್ದರಿಂದ, ಏಡನ್ ಮಾರ್ಕ್ರಾಮ್ ಅವರು ಭಾರತ ವಿರುದ್ಧ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸಬೇಕು.

ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ಹಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.

ದಕ್ಷಿಣ ಆಫ್ರಿಕಾ ಟಿ20 ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರಿಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್,ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾದ್ ವಿಲಿಯಮ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ