ಭಾರತ ತಂಡಕ್ಕೆ ಹೀನಾಯ ಸೋಲುಣಿಸಿದ ಇಂಗ್ಲೆಂಡ್
India vs England 2nd T20: ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (0) ಮೊದಲ ಓವರ್ನ 2ನೇ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆದರು. ಇನ್ನು ಸ್ಮೃತಿ ಮಂಧಾನ 10 ರನ್ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ದೀಪ್ತಿ ಶರ್ಮಾ (0) ಬಂದ ವೇಗದಲ್ಲೇ ಹಿಂತಿರುಗಿದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮಹಿಳಾ ತಂಡದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ (Team India) ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (0) ಮೊದಲ ಓವರ್ನ 2ನೇ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆದರು. ಇನ್ನು ಸ್ಮೃತಿ ಮಂಧಾನ 10 ರನ್ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ದೀಪ್ತಿ ಶರ್ಮಾ (0) ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ರಿಚಾ ಘೋಷ್ (4) ಹಾಗೂ ಪೂಜಾ ವಸ್ತ್ರಾಕರ್ (6) ಇನಿಂಗ್ಸ್ ಒಂದಂಕಿಗೆ ಸೀಮಿತವಾಯಿತು. ಇದಾಗ್ಯೂ ಮತ್ತೊಂದೆಡೆ ಜೆಮಿಮಾ ರೊಡ್ರಿಗಾಸ್ ಕ್ರೀಸ್ ಕಚ್ಚಿ ನಿಂತಿದ್ದರು.
ರಕ್ಷಣಾತ್ಮಕ ಆಟದೊಂದಿಗೆ ರನ್ಗಳಿಸುತ್ತಾ ಸಾಗಿದ ಜೆಮಿಮಾ 33 ಎಸೆತಗಳಲ್ಲಿ 30 ರನ್ ಬಾರಿಸಿದರು. ಈ ಹಂತದಲ್ಲಿ ಸಾರ ಗ್ಲೆನ್ ಎಸೆದ ಚೆಂಡನ್ನು ಗುರುತಿಸುವಲ್ಲಿ ಎಡವಿ ಎಲ್ಬಿಡಬ್ಲ್ಯೂ ಆದರು. ಇನ್ನು ಶ್ರೇಯಾಂಕಾ ಪಾಟೀಲ್ 4 ರನ್ಗಳಿಸಿದರೆ, ಟಿಟಾಸ್ ಸಾಧು 2 ರನ್ ಬಾರಿಸಿದರು. ಅಂತಿಮವಾಗಿ ಸೈಕಾ ಇಶಾಖ್ 8 ರನ್ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಮ್ ಇಂಡಿಯಾ 16.2 ಓವರ್ಗಳಲ್ಲಿ ಕೇವಲ 80 ರನ್ಗಳಿಗೆ ಆಲೌಟ್ ಆಯಿತು.
81 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಮೂರನೇ ಓವರ್ನಲ್ಲಿ ಸೋಫಿಯಾ ಡಂಕ್ಲಿ (6) ಹಾಗೂ ಡೇನಿಯಲ್ ವ್ಯಾಟ್ (0) ಬೌಲ್ಡ್ ಮಾಡುವ ಮೂಲಕ ರೇಣುಕಾ ಸಿಂಗ್ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.
ಈ ಹಂತದಲ್ಲಿ ಜೊತೆಗೂಡಿದ ಆಲಿಸ್ ಕ್ಯಾಪ್ಸಿ – ನ್ಯಾಟ್ ಸ್ಕೈವರ್-ಬ್ರಂಟ್ ಉತ್ತಮ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮೂರನೇ ವಿಕೆಟ್ಗೆ 42 ರನ್ಗಳಿಸಿ ಈ ಜೋಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಆದರೆ ಗೆಲುವಿನ ಸಮೀಪದಲ್ಲಿರುವಾಗ ಪೂಜಾ ವಸ್ತ್ರಾಕರ್ ನ್ಯಾಟ್ ಸ್ಕೈವರ್ (16) ಅವರನ್ನು ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಸೈಕಾ ಇಶಾಕ್ ಎಸೆತದಲ್ಲಿ ಆಲಿಸ್ ಕಾಪ್ಸಿ (25) ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ದೀಪ್ತಿ ಶರ್ಮಾ ಆಮಿ ಜೋನ್ಸ್ ಹಾಗೂ ಫ್ರೇಯಾ ಕೆಂಪ್ ವಿಕೆಟ್ ಕಬಳಿಸಿದರು. ಇದಾಗ್ಯೂ ಇಂಗ್ಲೆಂಡ್ ತಂಡ 11.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 82 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿತು.
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೋಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ಶ್ರೇಯಾಂಕಾ ಪಾಟೀಲ್ , ಪೂಜಾ ವಸ್ತ್ರಾಕರ್ , ತೀತಾಸ್ ಸಾಧು , ರೇಣುಕಾ ಠಾಕೂರ್ ಸಿಂಗ್ , ಸೈಕಾ ಇಶಾಕ್.
ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ಇಂಗ್ಲೆಂಡ್ ಪ್ಲೇಯಿಂಗ್ 11: ಸೋಫಿಯಾ ಡಂಕ್ಲಿ , ಡೇನಿಯಲ್ ವ್ಯಾಟ್ , ಆಲಿಸ್ ಕ್ಯಾಪ್ಸಿ , ನ್ಯಾಟ್ ಸ್ಕೈವರ್-ಬ್ರಂಟ್ , ಹೀದರ್ ನೈಟ್ (ನಾಯಕಿ) , ಆಮಿ ಜೋನ್ಸ್ (ವಿಕೆಟ್ ಕೀಪರ್) , ಫ್ರೇಯಾ ಕೆಂಪ್ , ಸೋಫಿ ಎಕ್ಲೆಸ್ಟೋನ್ , ಷಾರ್ಲೆಟ್ ಡೀನ್ , ಸಾರಾ ಗ್ಲೆನ್ , ಲಾರೆನ್ ಬೆಲ್.