LLC 2023: ಲೆಜೆಂಡ್ಸ್ ಲೀಗ್​ನಲ್ಲಿ ಮಣಿಪಾಲ್ ಟೈಗರ್ಸ್ ಚಾಂಪಿಯನ್ಸ್​

Manipal Tigers vs Urbanrisers Hyderabad: ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ರಿಕ್ಕಿ ಕ್ಲರ್ಕ್​ 52 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 80 ರನ್ ಬಾರಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಗುರುಕೀರತ್ ಸಿಂಗ್ 36 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 64 ಸಿಡಿಸಿದರು.

LLC 2023: ಲೆಜೆಂಡ್ಸ್ ಲೀಗ್​ನಲ್ಲಿ ಮಣಿಪಾಲ್ ಟೈಗರ್ಸ್ ಚಾಂಪಿಯನ್ಸ್​
LLC 2023
Follow us
| Updated By: ಝಾಹಿರ್ ಯೂಸುಫ್

Updated on: Dec 09, 2023 | 11:06 PM

ಸೂರತ್​ನ ಲಾಲ್​ಭಾಯ್​ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್​ (Legends League Cricket 2023) ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಮಣಿಪಾಲ್ ಟೈಗರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅರ್ಬನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪಾಲ್ ಟೈಗರ್ಸ್ ತಂಡದ ನಾಯಕ ಹರ್ಭಜನ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ (0) ಹಾಗೂ ಡ್ವೇನ್ ಸ್ಮಿತ್ (21) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ರಿಕ್ಕಿ ಕ್ಲರ್ಕ್​ ಅದ್ಭುತ ಇನಿಂಗ್ಸ್ ಆಡಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ರಿಕ್ಕಿ ಕ್ಲರ್ಕ್​ 52 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 80 ರನ್ ಬಾರಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಗುರುಕೀರತ್ ಸಿಂಗ್ 36 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 64 ಸಿಡಿಸಿದರು. ಈ ಮೂಲಕ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ರನ್​ ಕಲೆಹಾಕಿತು.

188 ರನ್​ಗಳ ಕಠಿಣ ಗುರಿ ಪಡೆದ ಮಣಿಪಾಲ್ ಟೈಗರ್ಸ್ ತಂಡಕ್ಕೆ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (40) ಹಾಗೂ ಚಾಡ್ವಿಕ್ ವಾಲ್ಟನ್ (29) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಬಂದ ಏಂಜೆಲೊ ಪೆರೇರಾ 30 ರನ್​ಗಳ ಕೊಡುಗೆ ನೀಡಿದರು. ಇನ್ನು ತಿಸಾರ ಪೆರೇರಾ 25 ರನ್​ಗಳಿಸಿದರೆ, ಅಸೆಲಾ ಗುಣರತ್ನೆ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್​ನೊಂದಿಗೆ ಅಜೇಯ 51 ರನ್ ಬಾರಿಸಿದರು. ಈ ಮೂಲಕ ಮಣಿಪಾಲ್ ಟೈಗರ್ಸ್​ ತಂಡವು 19 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 193 ರನ್​ ಬಾರಿಸಿ​ ಭರ್ಜರಿ ಜಯ ಸಾಧಿಸಿದೆ.

ಅರ್ಬನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಡ್ವೇನ್ ಸ್ಮಿತ್ , ರಿಕ್ಕಿ ಕ್ಲಾರ್ಕ್ , ಗುರುಕೀರತ್ ಸಿಂಗ್ ಮನ್ , ಸುರೇಶ್ ರೈನಾ (ನಾಯಕ) , ಪೀಟರ್ ಟ್ರೆಗೊ , ಸ್ಟುವರ್ಟ್ ಬಿನ್ನಿ , ಅಸ್ಗರ್ ಅಫ್ಘಾನ್ , ಅಮಿತ್ ಪೌನಿಕರ್ (ವಿಕೆಟ್ ಕೀಪರ್) , ಜೆರೋಮ್ ಟೇಲರ್ , ಕ್ರಿಸ್ ಎಂಪೋಫು.

ಇದನ್ನೂ ಓದಿ: WPL 2024ರ ಆಕ್ಷನ್​ನಲ್ಲಿ ಹರಾಜಾದ ಹಾಗೂ ಹರಾಜಾಗದ ಆಟಗಾರ್ತಿಯರ ಪಟ್ಟಿ ಇಲ್ಲಿದೆ

ಮಣಿಪಾಲ್ ಟೈಗರ್ಸ್ ಪ್ಲೇಯಿಂಗ್ 11: ಚಾಡ್ವಿಕ್ ವಾಲ್ಟನ್ , ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಅಮಿತ್ ವರ್ಮಾ , ಏಂಜೆಲೊ ಪೆರೆರಾ , ಅಸೆಲಾ ಗುಣರತ್ನೆ , ತಿಸಾರಾ ಪೆರೆರಾ , ಪಂಕಜ್ ಸಿಂಗ್ , ಅಮಿಟೋಜ್ ಸಿಂಗ್ , ಹರ್ಭಜನ್ ಸಿಂಗ್ (ನಾಯಕ) , ಪ್ರವೀಣ್ ಗುಪ್ತಾ , ಮಿಚೆಲ್ ಮೆಕ್ಲೆನಾಘನ್.

ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ