AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG: ಟೀಮ್ ಇಂಡಿಯಾದ 2ನೇ ಏಕದಿನ ಪಂದ್ಯ ಯಾವಾಗ? ಇಲ್ಲಿದೆ ಮಾಹಿತಿ

India vs Afghanistan: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಸರಣಿಯಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದ್ದು, ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ದ್ವಿತೀಯ ಪಂದ್ಯದಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.

IND vs AFG: ಟೀಮ್ ಇಂಡಿಯಾದ 2ನೇ ಏಕದಿನ ಪಂದ್ಯ ಯಾವಾಗ? ಇಲ್ಲಿದೆ ಮಾಹಿತಿ
Team India Image Credit source: BCCI
ಝಾಹಿರ್ ಯೂಸುಫ್
|

Updated on: Jun 14, 2026 | 2:17 PM

Share

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಮಳೆಯಿಂದಾಗಿ 25 ಓವರ್​ಗಳಿಗೆ ಸೀಮಿತವಾಗಿದ್ದ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್​​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ (102) ಭರ್ಜರಿ ಶತಕ ಸಿಡಿಸಿದರು. ಗುರ್ಬಾಝ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ಅಫ್ಘಾನಿಸ್ತಾನ್ ತಂಡವು 24.5 ಓವರ್​ಗಳಲ್ಲಿ 194 ರನ್​ಗಳಿಸಿ ಸರ್ವಪತನ ಕಂಡಿತು.

195 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ ಅಜೇಯ 84 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಕೇವಲ 19 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಸ್ಫೋಟಕ 39 ರನ್ ಚಚ್ಚಿದರು. ಈ ಮೂಲಕ ಟೀಮ್ ಇಂಡಿಯಾ 22.5 ಓವರ್​ಗಳಲ್ಲಿ 195 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳ ದ್ವಿತೀಯ ಪಂದ್ಯಕ್ಕಾಗಿ ಲಕ್ನೋಗೆ ತೆರಳಲು ಸಜ್ಜಾಗಿದ್ದಾರೆ.

ದ್ವಿತೀಯ ಪಂದ್ಯ ಯಾವಾಗ?

ಈ ಸರಣಿಯ ದ್ವಿತೀಯ ಪಂದ್ಯವು ಜೂನ್ 17 ರಂದು ನಡೆಯಲಿದೆ. ಬುಧವಾರ ನಡೆಯಲಿರುವ ಈ ಪಂದ್ಯಕ್ಕೆ ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಸರಣಿಯ ಎಲ್ಲಾ ಪಂದ್ಯಗಳನ್ನು  ಟಿವಿಯಲ್ಲಿ ‘ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್’ ಮೂಲಕ ವೀಕ್ಷಿಸಬಹುದು. ಹಾಗೆಯೇ ಮೊಬೈಲ್ ಹಾಗೂ ಡಿಜಿಟಲ್ ಪರದೆಯಲ್ಲಿ ‘ಜಿಯೋಸ್ಟಾರ್’  ಆ್ಯಪ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

ಇದನ್ನೂ ಓದಿ: 24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಜೋರ್ಡನ್ ಕಾಕ್ಸ್​

ಅಫ್ಘಾನಿಸ್ತಾನ್ ಏಕದಿನ ತಂಡ: ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಅಝ್ಮತ್​ ಒಮರ್​ಝಾಹಿ, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಅಲ್ಲಾ ಗಝನ್​ಫರ್, ಬಿಲಾಲ್ ಸಮಿ, ದರ್ವೀಶ್ ರಸೂಲಿ, ಫರೀದ್ ಮಲಿಕ್, ಝಿಯಾ ಉರ್ ರೆಹಮಾನ್ ಶರೀಫಿ.

Follow Us
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ