Tanveer Sangha: ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ: ಇಂದು ಕಣಕ್ಕಿಳಿಯಲಿರುವ ತನ್ವೀರ್ ಸಂಘ ಯಾರು ಗೊತ್ತೇ?

|

Updated on: Nov 23, 2023 | 12:08 PM

India vs Australia 1st T20I: ತನ್ವೀರ್ ಸಂಘ ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟರು. ಇವರು ಇದುವರೆಗೆ ಎರಡು ಏಕದಿನ ಮತ್ತು ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Tanveer Sangha: ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ: ಇಂದು ಕಣಕ್ಕಿಳಿಯಲಿರುವ ತನ್ವೀರ್ ಸಂಘ ಯಾರು ಗೊತ್ತೇ?
Tanveer Sangha
Follow us on

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ (ICC ODI World Cup 2023), ಇತರ ದೇಶಗಳಿಗೆ ಆಡುತ್ತಿರುವ ಕೆಲ ಭಾರತೀಯ ಮೂಲದ ಆಟಗಾರರು ಸಾಕಷ್ಟು ಸದ್ದು ಮಾಡಿದರು. ನ್ಯೂಝಿಲೆಂಡ್‌ನ ರಚಿನ್ ರವೀಂದ್ರ, ನೆದರ್ಲೆಂಡ್ಸ್‌ನ ಆರ್ಯನ್ ದತ್, ವಿಕ್ರಮ್ ಸಿಂಗ್ ಮತ್ತು ತೇಜ ನಿಡಮನೂರು ವಿಶ್ವಕಪ್​ನಲ್ಲಿ ಗಮನ ಸೆಳೆದರು. ಇದೀಗ ವಿಶಾಖಪಟ್ಟಣದಲ್ಲಿ ಇಂದು ಪ್ರಾರಂಭವಾಗುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯಲ್ಲಿ ಮತ್ತೊಬ್ಬ ಭಾರತೀಯ ಮೂಲದ ಆಟಗಾರ ಕಾಣಿಸಿಕೊಳ್ಳಲಿದ್ದಾರೆ. ಅವರೇ ತನ್ವೀರ್ ಸಂಘ.

ತನ್ವೀರ್ ಸಂಘ ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟರು. ಇವರು ಇದುವರೆಗೆ ಎರಡು ಏಕದಿನ ಮತ್ತು ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ತನ್ವೀರ್ ಬಲಗೈ ಲೆಗ್‌ಬ್ರೇಕ್ ಬೌಲರ್ ಆಗಿದ್ದು, ಆಡಿರುವ ಎರಡು ಟಿ20 ಪಂದ್ಯಗಳಲ್ಲಿ ಐದು ವಿಕೆಟ್ ಕಿತ್ತಿದ್ದಾರೆ. ಅಂತೆಯೆ ಎರಡು ಏಕದಿನ ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದಾರೆ.

ICC ODI Rankings: ಬ್ಯಾಟಿಂಗ್‌, ಬೌಲಿಂಗ್ ಎರಡು ವಿಭಾಗದಲ್ಲೂ ಭಾರತೀಯರದ್ದೇ ಪಾರುಪತ್ಯ..!

ಇದನ್ನೂ ಓದಿ
ಪ್ಯಾಟ್ ಕಮ್ಮಿನ್ಸ್​ರನ್ನು ಆಸ್ಟ್ರೇಲಿಯಾ ಹೇಗೆ ನಡೆಸಿಕೊಂಡಿತು ನೋಡಿ
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್​ಗೆ ಭಾರೀ ಅವಮಾನ
ರಿಂಕು ಸಿಂಗ್ ಫಿನಿಶರ್: ಆಸೀಸ್ ವಿರುದ್ಧದ ಮೊದಲ ಟಿ20ಗೆ ಭಾರತ ಪ್ಲೇಯಿಂಗ್ XI
ಇಂದು IND vs AUS ಮೊದಲ ಟಿ20 ಪಂದ್ಯ: ಸೇಡಿಗೆ ಕಾದು ಕುಳಿತಿದೆ ಸೂರ್ಯ ಪಡೆ

ಆಫ್ರಿಕಾ ವಿರುದ್ಧದ ಸರಣಿಯ ಸಮಯದಲ್ಲಿ ಆ್ಯಡಂ ಝಂಪಾ ಅನಾರೋಗ್ಯಕ್ಕೆ ಒಳಗಾದಾಗ ತನ್ವೀರ್ ಅವರ ಟಿ20 ಕ್ಯಾಪ್ ಪಡೆದರು. ಇಲ್ಲಿ 4 ಓವರ್‌ಗಳಲ್ಲಿ 31 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಇದು ಇಪ್ಪತ್ತು ವರ್ಷಗಳಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗನ ಅತ್ಯುತ್ತಮ ಟಿ20 ಪದಾರ್ಪಣೆಯ ಸಾಧನೆಯಾಗಿದೆ. 2005 ರಲ್ಲಿ ಆಸ್ಟ್ರೇಲಿಯಾದ ಮೈಕೆಲ್ ಕಾಸ್ಪ್ರೋವಿಕ್ಜ್ ಅವರು (4/29) ಈ ಸಾಧನೆ ಮಾಡಿದ್ದರು.

ತನ್ವೀರ್ ಭಾರತೀಯ ಮೂಲದ ಆಟಗಾರ

21 ವರ್ಷ ವಯಸ್ಸಿನ ತನ್ವೀರ್ ಅವರು ಸಿಡ್ನಿಯಲ್ಲಿ ಜೋಗ ಸಂಘ ಮತ್ತು ಉಪನೀತ್ ದಂಪತಿಗೆ ಜನಿಸಿದರು. ಭಾರತೀಯ ಮೂಲದವರಾದರೂ, ಅವರು ಬೆಳೆದಿದ್ದೆಲ್ಲ ಸಿಡ್ನಿಯಲ್ಲಿ. ತನ್ವೀರ್ ಸಿಡ್ನಿಯ ಈಸ್ಟ್ ಹಿಲ್ ಬಾಯ್ಸ್ ಹೈಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ, ತನ್ವೀರ್ ತಂದೆ ಜಲಂಧರ್ ಬಳಿಯ ಪಂಜಾಬ್‌ನ ಹಳ್ಳಿಯಿಂದ ಬಂದವರು. ಸಿಡ್ನಿಯಲ್ಲಿ ತನ್ವೀರ್ ತಂದೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಅಕೌಂಟೆಂಟ್ ಆಗಿದ್ದರು.

2020 ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ 15 ವಿಕೆಟ್‌ಗಳನ್ನು ಕೀಳುವ ಮೂಲಕ ತನ್ವೀರ್ ಮುನ್ನಲೆಗೆ ಬಂದರು. ಅವರು ಸಿಡ್ನಿ ಥಂಡರ್‌ನೊಂದಿಗೆ ಬಿಗ್ ಬ್ಯಾಷ್ ಲೀಗ್​ನಲ್ಲಿ (BBL) ಕಾಣಿಸಿಕೊಂಡಿದ್ದಾರೆ. ಇಲ್ಲಿ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ನ್ಯೂಝಿಲೆಂಡ್ ವಿರುದ್ಧದ ಟಿ20I ಸರಣಿಗೆ ಅವರನ್ನು ಆಯ್ಕೆ ಮಾಡಲಾಯಿತು. 2021 ರಲ್ಲಿ, ತನ್ವೀರ್ ನ್ಯೂ ಸೌತ್ ವೇಲ್ಸ್ ಪರ ಪ್ರಥಮ ದರ್ಜೆಗೆ ಕೂಡ ಪದಾರ್ಪಣೆ ಮಾಡಿದರು. ಇವರು ಆಸ್ಟ್ರೇಲಿಯಾ ಪರ ಆಡುತ್ತಿರುವ ಎರಡನೇ ಭಾರತ ಮೂಲದ ಆಟಗಾರರಾಗಿದ್ದಾರೆ. ಮೊದಲನೆಯವರು ಗುರಿಂದರ್ ಸಂಧು.

ಸದ್ಯ ಭಾರತ ವಿರುದ್ಧದ ಟಿ20 ಸರಣಿಗೆ ಆ್ಯಡಂ ಝಂಪಾ ತಂಡದಲ್ಲಿದ್ದರೂ ವಿಶ್ವಕಪ್ ಅಭಿಯಾನದ ನಂತರ ಆರಂಭದ ಕೆಲ ಪಂದ್ಯಗಳಿಂದ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ತನ್ವೀರ್ ಇಂದು ವೈಜಾಗ್‌ನಲ್ಲಿ ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಆಸೀಸ್ ಲೆಗ್ ಸ್ಪಿನ್ನರ್ ಆಗಿ ಕಣಕ್ಕಿಳಿಯಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ