IND vs AUS 1st T20I: ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ಗೆ ಭಾರೀ ಅವಮಾನ
Suryakumar Yadav Press Conference, India vs Australia 1st T20I: ಒಂದು ಪಂದ್ಯ ಆರಂಭಕ್ಕೂ ಮುನ್ನ ನಾಯಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವುದು ವಾಡಿಕೆ. ಅದರಂತೆ ಸೂರ್ಯಕುಮಾರ್ ಯಾದವ್ ಭಾರತ-ಆಸ್ಟ್ರೇಲಿಯಾ ಮೊದಲ ಟಿ20ಗು ಮುನ್ನ ಬುಧವಾರ ಸಂಜೆ ಸುದ್ದಿಗೋಷ್ಠಿಗೆ ಬಂದಿದ್ದರು. ಆದರೆ, ಇಲ್ಲಿ ಸೂರ್ಯಗೆ ಭಾರೀ ಅವಮಾನವಾಗಿದೆ.
ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ನಲ್ಲಿ ಅನುಭವಿಸಿರುವ ಆಘಾತಕಾರಿ ಸೋಲಿನ ನಡುವೆ ಟೀಮ್ ಇಂಡಿಯಾವು ನವೆಂಬರ್ 23, ಗುರುವಾರದಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾವನ್ನು ಆತಿಥ್ಯ ವಹಿಸಲಿದೆ. ಇಂದು ವಿಶಾಖಪಟ್ಟಣಂನ ಡಾ. ವೈಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇತರ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ (Suryakumar Yadav) ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ತಂಡದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವುದು ವಾಡಿಕೆ. ಅದರಂತೆ ಸೂರ್ಯ ಬುಧವಾರ ಸಂಜೆ ಸುದ್ದಿಗೋಷ್ಠಿಗೆ ಬಂದಿದ್ದರು. ಆದರೆ, ಇಲ್ಲಿ ಸೂರ್ಯಗೆ ಭಾರೀ ಅವಮಾನವಾಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಪ್ರಥಮ ಟಿ20ಯ ಸುದ್ದಿಗೋಷ್ಠಿಯಲ್ಲಿ ಕೇವಲ ಇಬ್ಬರು ಪತ್ರಕರ್ತರು ಮಾತ್ರ ಮಾಧ್ಯಮ ಸಂವಾದಕ್ಕೆ ಬಂದಿದ್ದರು. ಟೀಮ್ ಇಂಡಿಯಾ ನಾಯಕನಾಗಿ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಸೂರ್ಯಕುಮಾರ್ ಭಾರೀ ಮುಜುಗರಕ್ಕೆ ಒಳಗಾದರು.
ಲಕ್ನೋ ತಂಡವನ್ನು ತೊರೆದು ತಾನು ಚಾಂಪಿಯನ್ ಮಾಡಿದ್ದ ತಂಡ ಸೇರಿಕೊಂಡ ಗಂಭೀರ್..!
ಹಿರಿಯ ಕ್ರಿಕೆಟ್ ಪತ್ರಕರ್ತ ವಿಮಲ್ ಕುಮಾರ್ ಅವರು ಈ ಪತ್ರಿಕಾಗೋಷ್ಠಿಯ ಬಗ್ಗೆ ಆಘಾತಕಾರಿ ಮಾಹಿತಿಯನ್ನ ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದಾರೆ. ”ವಿಶ್ವಕಪ್ ಸಮಯದಲ್ಲಿ 200ಕ್ಕೂ ಅಧಿಕ ಮಾಧ್ಯಮಗಳು ಭಾರತದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದವು. ಆದರೆ, ಇಲ್ಲಿ ಕೇವಲ ಇಬ್ಬರು ಪತ್ರಕರ್ತರು ಮಾತ್ರ ಇದ್ದಾರೆ. ಸೂರ್ಯಕುಮಾರ್ ನಾಯಕನಾಗಿ ಅವರ ಮೊದಲ ಸುದ್ದಿಗೋಷ್ಠಿಯಲ್ಲಿ ಇದನ್ನು ಊಹಿಸಿರಲಿಲ್ಲ. ಇದು ಟೀಮ್ ಇಂಡಿಯಾ ಪತ್ರಿಕಾಗೋಷ್ಠಿಗೆ ಅತಿ ಕಡಿಮೆ ಪತ್ರಕರ್ತರು ಬಂದ ದಾಖಲೆಯೇ?, ಹೌದು ಎನಿಸುತ್ತದೆ,” ಎಂದು ವಿಮಲ್ ಕುಮಾರ್ ಬರೆದಿದ್ದಾರೆ.
ಕ್ರಿಕೆಟ್ ಪತ್ರಕರ್ತ ವಿಮಲ್ ಕುಮಾರ್ ಮಾಡಿರುವ ಟ್ವೀಟ್:
From 200 odd media people (during World Cup) to just two in press conference in India is staggering!
SKY wouldn’t have imagined this in his firstPC as captain.
Is this a record with fewest attendance in a press conference in India? I would imagine so. pic.twitter.com/O41WbIUKla
— Vimal कुमार (@Vimalwa) November 22, 2023
ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, “ವಿಶ್ವಕಪ್ ಸೋಲು ನಿಜಕ್ಕೂ ಬೇಸರ ತರಿಸಿದೆ. ಕೊನೆಯಲ್ಲಿ, ನೀವು ವಿಶ್ವಕಪ್ ಪಯಣವನ್ನು ಹಿಂತಿರುಗಿ ನೋಡಿದಾಗ, ಅದು ನಿಜವಾಗಿಯೂ ಉತ್ತಮವಾಗಿತ್ತು. ನಾವು ಮೈದಾನದಲ್ಲಿ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ರೀತಿಗೆ ಪ್ರತಿಯೊಬ್ಬ ಸದಸ್ಯರು, ಆಟಗಾರರು ಮಾತ್ರವಲ್ಲ, ಇಡೀ ಭಾರತವೇ ಹೆಮ್ಮೆಪಡುತ್ತಿದೆ. ಪಂದ್ಯಾವಳಿಯುದ್ದಕ್ಕೂ ನಾವು ಆಡಿದ ರೀತಿ ಚೆನ್ನಾಗಿತ್ತು. ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ,” ಎಂದು ಸೂರ್ಯಕುಮಾರ್ ಹೇಳಿದರು.
“ಫೈನಲ್ ಸೋಲನ್ನು ಮರೆಯಲು ಸಮಯ ತೆಗೆದುಕೊಳ್ಳುತ್ತದೆ. ಮರುದಿನ ಬೆಳಿಗ್ಗೆ ಎದ್ದು ನಡೆದಿರುವುದನ್ನು ಮರೆತುಬಿಡಲು ಸಾಧ್ಯವಿಲ್ಲ. ಅದೊಂದು ಸುದೀರ್ಘ ಟೂರ್ನಿ. ನಿಸ್ಸಂಶಯವಾಗಿ, ನಾವು ಗೆಲ್ಲುತ್ತೇವೆ ಎಂದು ಕಣಕ್ಕಿಳಿಯಿದೆವು. ಆದರೆ, ನಾವು ಅಂದುಕೊಂಡಂತೆ ಸಾಗಲಿಲ್ಲ. ಇದನ್ನು ಮರೆತು ಮುಂದೆ ಸಾಗಬೇಕಿದೆ,” ಎಂದು ಸೂರ್ಯ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ