ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಈ ಪಂದ್ಯವು ಭಾರತೀಯ ಕಾಲಮಾನ ಮುಂಜಾನೆ ಶುರುವಾಗಲಿದೆ. ಈ ಪಂದ್ಯದ ಟಾಸ್ ಪ್ರಕ್ರಿಯೆ ಆಸ್ಟ್ರೇಲಿಯಾ ಸಮಯ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಅಂದರೆ ಭಾರತೀಯ ಕಾಲಮಾನ 4.30 ಕ್ಕೆ ಟಾಸ್ ಪ್ರಕ್ರಿಯೆ ಮುಗಿಯಲಿದೆ. ಇನ್ನು ಭಾರತದಲ್ಲಿ ಪಂದ್ಯವನ್ನು ಮುಂಜಾನೆ 5 ಗಂಟೆಯಿಂದ ಲೈವ್ ವೀಕ್ಷಿಸಬಹುದು.
ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಪಂದ್ಯವು ಬೆಳಿಗ್ಗೆ 9.30 ಕ್ಕೆ (ಭಾರತದಲ್ಲಿ 5.30 ಕ್ಕೆ) ಆರಂಭವಾಗಿತ್ತು. ಆದರೀಗ ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನು ಬೆಳಿಗ್ಗೆ 10.30 ಕ್ಕೆ (ಭಾರತದಲ್ಲಿ 5 ಗಂಟೆ) ಆರಂಭಿಸಲು ನಿರ್ಧರಿಸಲಾಗಿದೆ. ಅದರಂತೆ ಮೊದಲ ಸೆಷನ್ ಬೆಳಿಗ್ಗೆ 5 am IST ಗಂಟೆಯಿಂದ 7 am IST ಗಂಟೆಯವರೆಗೆ ನಡೆಯಲಿದೆ.
ಇನ್ನು ದ್ವಿತೀಯ ಸೆಷನ್ ಶುರುವಾಗುವುದು ಭಾರತೀಯ ಕಾಲಮಾನ 7.40 am ರಿಂದ, 9.40 am ವರೆಗೆ ಎರಡನೇ ಸೆಷನ್ ನಡೆಯಲಿದೆ. ಇದಾದ ಬಳಿಕ ಟೀ ಬ್ರೇಕ್ ಇರಲಿದೆ. ಆ ಬಳಿಕ 10 am ರಿಂದ 12 pm ರವರೆಗೆ ಮೂರನೇ ಸೆಷನ್ ಜರುಗಲಿದೆ. ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಯಾಗುವಷ್ಟರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿಯಲಿದೆ.
ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಆ್ಯಪ್ ಹಾಗೂ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.