India vs Australia T20 WC Highlights: ಅಜೇಯ ತಂಡವಾಗಿ ಸೆಮಿಫೈನಲ್​ಗೇರಿದ ಭಾರತ

|

Updated on: Jun 25, 2024 | 12:00 AM

India vs Australia, T20 world Cup 2024 Highlights Updates: 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಮ್ಮ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ, ಈ ಪಂದ್ಯವು ಆಸ್ಟ್ರೇಲಿಯಾಕ್ಕೆ ಹೆಚ್ಚು ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲ್ಲುವುದು ಆಸೀಸ್ ಪಡೆಗೆ ಈಗ ಅನಿವಾರ್ಯವಾಗಿದೆ.

India vs Australia T20 WC Highlights: ಅಜೇಯ ತಂಡವಾಗಿ ಸೆಮಿಫೈನಲ್​ಗೇರಿದ ಭಾರತ
ಟೀಂ ಇಂಡಿಯಾ

ರೋಹಿತ್ ಶರ್ಮಾ ನಂತರ ಅರ್ಷದೀಪ್ ಸಿಂಗ್ ನೇತೃತ್ವದ ಬೌಲರ್‌ಗಳ ಪ್ರಬಲ ಪ್ರದರ್ಶನದ ನೆರವಿನಿಂದ ಭಾರತ ತಂಡ, ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲು ಬ್ಯಾಟ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ ಅವರ 92 ರನ್‌ಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 205 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 181 ರನ್ ಗಳಿಸಿ ಸತತ ಎರಡನೇ ಸೋಲನ್ನು ಎದುರಿಸಬೇಕಾಯಿತು. ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 76 ರನ್ ಗಳಿಸಿದರು. ಅಲ್ಲದೆ ಅವರು, ನಾಯಕ ಮಿಚೆಲ್ ಮಾರ್ಷ್ ಅವರೊಂದಿಗೆ ಎರಡನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟವನ್ನು ಮಾಡಿದರು. ಹೀಗಾಗಿ ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು, ಆದರೆ ಭಾರತೀಯ ಬೌಲರ್‌ಗಳು ಬಲವಾದ ಪುನರಾಗಮನವನ್ನು ಮಾಡಿ, ಪಂದ್ಯಾವಳಿಯಲ್ಲಿ ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರೆಸಿದರು. ಭಾರತದ ಪರ ವೇಗಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದರು.

LIVE NEWS & UPDATES

The liveblog has ended.
  • 24 Jun 2024 11:49 PM (IST)

    Ind vs Aus Live Score: 24 ರನ್‌ ಜಯ

    ಅಂತಿಮವಾಗಿ ಭಾರತ ತಂಡ, ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ರೋಹಿತ್ ಶರ್ಮಾ ಅವರ 92 ರನ್‌ಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 205 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 181 ರನ್ ಗಳಿಸಿ ಸತತ ಎರಡನೇ ಸೋಲನ್ನು ಎದುರಿಸಬೇಕಾಯಿತು.

  • 24 Jun 2024 11:48 PM (IST)

    Ind vs Aus Live Score: ಡೇವಿಡ್ ಔಟ್

    ಅರ್ಷದೀಪ್ ಅವರ ಕೊನೆಯ ಓವರ್‌ನಲ್ಲಿ ಟಿಮ್ ಡೇವಿಡ್ ಅವರನ್ನು ಔಟ್ ಮಾಡಿ 3 ವಿಕೆಟ್‌ಗಳೊಂದಿಗೆ ತಮ್ಮ ಖೋಟಾವನ್ನು ಕೊನೆಗೊಳಿಸಿದರು.


  • 24 Jun 2024 11:35 PM (IST)

    Ind vs Aus Live Score: ವೇಡ್ ಔಟ್

    ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡುವ ಮೂಲಕ ಅರ್ಷದೀಪ್ ಸಿಂಗ್ ಭಾರತಕ್ಕೆ ಆರನೇ ಯಶಸ್ಸನ್ನು ನೀಡಿದರು. ಕುಲ್ದೀಪ್ ಯಾದವ್ ಅದ್ಭುತ ಕ್ಯಾಚ್ ಪಡೆದು ವೇಡ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಮ್ಯಾಥ್ಯೂ ವೇಡ್ ಎರಡು ಎಸೆತಗಳಲ್ಲಿ ಒಂದು ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಗೆಲುವಿಗೆ 16 ಎಸೆತಗಳಲ್ಲಿ 52 ರನ್‌ಗಳ ಅಗತ್ಯವಿದೆ.

  • 24 Jun 2024 11:26 PM (IST)

    Ind vs Aus Live Score: ಟ್ರಾವಿಸ್ ಹೆಡ್ ಔಟ್

    ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡಿ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಹೆಡ್ 76 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಆಸ್ಟ್ರೇಲಿಯಾ 150 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದೆ.

  • 24 Jun 2024 11:15 PM (IST)

    Ind vs Aus Live Score: ಸ್ಟೊಯಿನಿಸ್ ಕೂಡ ಔಟ್

    ಮ್ಯಾಕ್ಸ್‌ವೆಲ್ ನಂತರ ಮಾರ್ಕಸ್ ಸ್ಟೊಯಿನಿಸ್ ಕೂಡ ಔಟಾಗಿದ್ದಾರೆ. ಕುಲ್ದೀಪ್ ಓವರ್‌ನ ನಂತರ ಬಂದ ಅಕ್ಷರ್ ಪಟೇಲ್ ಅವರ ಮೊದಲ ಎಸೆತದಲ್ಲಿ ಮಾರ್ಕಸ್ ಸ್ಟೊಯಿನಿಸ್ ರಿವರ್ಸ್ ಸ್ವೀಪ್ ಮಾಡಿದರು, ಆದರೆ ಪಾಯಿಂಟ್ ಪೋಸ್ಟ್ ಮಾಡಿದ ಹಾರ್ದಿಕ್ ಕ್ಯಾಚ್ ಪಡೆದರು.

  • 24 Jun 2024 11:11 PM (IST)

    Ind vs Aus Live Score: 3ನೇ ವಿಕೆಟ್, 135/3

    ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಔಟ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಆಸ್ಟ್ರೇಲಿಯಾಕ್ಕೆ ಮೂರನೇ ಹೊಡೆತ ನೀಡಿದರು. ಮ್ಯಾಕ್ಸ್‌ವೆಲ್ 12 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು.

  • 24 Jun 2024 11:06 PM (IST)

    Ind vs Aus Live Score: ಹೆಡ್ ಅರ್ಧಶತಕ

    ಹೆಡ್ ಅರ್ಧಶತಕ ಪೂರೈಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಇದು ಅವರ ಎರಡನೇ ಅರ್ಧಶತಕ. ಇದಕ್ಕೂ ಮುನ್ನ ಸ್ಕಾಟ್ಲೆಂಡ್ ವಿರುದ್ಧ 68 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. 10 ಓವರ್‌ಗಳ ನಂತರ ತಂಡದ ಸ್ಕೋರ್ 99/2.

  • 24 Jun 2024 10:54 PM (IST)

    Ind vs Aus Live Score: ಅಕ್ಷರ್ ಅದ್ಭುತ ಕ್ಯಾಚ್

    ಕುಲ್ದೀಪ್ ಯಾದವ್ ಆಸ್ಟ್ರೇಲಿಯಾಕ್ಕೆ ಎರಡನೇ ಹೊಡೆತ ನೀಡಿದರು. ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಈ ವಿಕೆಟ್​ ಅಕ್ಷರ್​ ಪಟೇಲ್​ ಅವರ ಅದ್ಭುತ ಫೀಲ್ಡಿಂಗ್​ಗೆ ಸಲ್ಲಬೇಕು. ಬೌಂಡರಿ ಗೆರೆ ಬಳಿ ಚಿರತೆಯಂತೆ ಎಗರಿ ಅಕ್ಷರ್ ಅದ್ಭುತ ಕ್ಯಾಚ್ ತೆಗೆದುಕೊಂಡರು. ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲ ನೀಡಲು ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ.

  • 24 Jun 2024 10:38 PM (IST)

    Ind vs Aus Live Score: ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇ ಮುಗಿದಿದೆ. ಆಸ್ಟ್ರೇಲಿಯಾ ಆರು ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 65 ರನ್ ಗಳಿಸಿದೆ. ಹೆಡ್ (26) ಮತ್ತು ಮಾರ್ಷ್ (31) ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 24 Jun 2024 10:36 PM (IST)

    Ind vs Aus Live Score: ಹೆಡ್ ಅಟ್ಯಾಕ್

    ಜಸ್ಪ್ರೀತ್ ಬುಮ್ರಾ ಅವರ ಓವರ್‌ನಲ್ಲಿ ಟ್ರಾವಿಸ್ ಹೆಡ್ 3 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಕೂಡ ಅಕ್ಷರ್ ಪಟೇಲ್ ಮೇಲೆ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

  • 24 Jun 2024 10:14 PM (IST)

    Ind vs Aus Live Score: ವಾರ್ನರ್ ಔಟ್

    ಆಸ್ಟ್ರೇಲಿಯಾ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿದೆ. ಡೇವಿಡ್ ವಾರ್ನರ್ ಅವರನ್ನು ಅರ್ಷದೀಪ್ ಸಿಂಗ್ ಔಟ್ ಮಾಡಿದರು. ನಾಯಕ ಮಿಚೆಲ್ ಮಾರ್ಷ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲ ನೀಡಲು ಟ್ರಾವಿಸ್ ಹೆಡ್ ಕ್ರೀಸ್‌ನಲ್ಲಿದ್ದಾರೆ.

  • 24 Jun 2024 09:57 PM (IST)

    Ind vs Aus Live Score: 206 ರನ್ ಟಾರ್ಗೆಟ್

    ನಾಯಕ ರೋಹಿತ್ ಶರ್ಮಾ ಅವರ 92 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 205 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ ಬಲಿಷ್ಠ ಬ್ಯಾಟಿಂಗ್ ನಡೆಸಿ ಆಸ್ಟ್ರೇಲಿಯಾಕ್ಕೆ 206 ರನ್​ಗಳ ಗುರಿ ನೀಡಿದೆ. ಈ ವಿಶ್ವಕಪ್‌ನಲ್ಲಿ ಭಾರತ 200 ರನ್ ಗಳಿಸಿದ್ದು ಇದೇ ಮೊದಲು.

  • 24 Jun 2024 09:49 PM (IST)

    Ind vs Aus Live Score: ದುಬೆ ಔಟ್

    ಡೇವಿಡ್ ವಾರ್ನರ್‌ಗೆ ಕ್ಯಾಚಿತ್ತು ಶಿವಂ ದುಬೆ ಔಟಾದರು. ದುಬೆ 22 ಎಸೆತಗಳಲ್ಲಿ 28 ರನ್ ಬಾರಿಸಿ ಔಟಾದರು.

  • 24 Jun 2024 09:48 PM (IST)

    Ind vs Aus Live Score: 180 ರನ್ ಪೂರ್ಣ

    ಭಾರತದ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ತಂಡ 18 ಓವರ್‌ಗಳ ಅಂತ್ಯಕ್ಕೆ 180 ರನ್‌ಗಳ ಗಡಿ ದಾಟಿದೆ.

  • 24 Jun 2024 09:40 PM (IST)

    Ind vs Aus Live Score: ಸೂರ್ಯಕುಮಾರ್ ಯಾದವ್ ಔಟ್

    ಮಿಚೆಲ್ ಸ್ಟಾರ್ಕ್ ತಮ್ಮ ಅದ್ಭುತ ಬೌಲಿಂಗ್ ಮುಂದುವರಿಸಿ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ನಾಲ್ಕನೇ ಹೊಡೆತ ನೀಡಿದರು. ಸೂರ್ಯಕುಮಾರ್ 16 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಭಾರತ ತಂಡ ಉತ್ತಮ ಬ್ಯಾಟಿಂಗ್ ಮುಂದುವರಿಸಿ 150 ರನ್ ಗಡಿ ದಾಟಿತು. 

  • 24 Jun 2024 09:15 PM (IST)

    Ind vs Aus Live Score: ಶತಕ ವಂಚಿತ ರೋಹಿತ್

    ಆಸೀಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 92 ರನ್ ಗಳಿಸಿ ಔಟಾದರು. ಇದರೊಂದಿಗೆ ಕೇವಲ 8 ರನ್​​ಗಳಿಂದ ಶತಕವಂಚಿತರಾದರು.

  • 24 Jun 2024 09:03 PM (IST)

    Ind vs Aus Live Score: 10 ಓವರ್ ಅಂತ್ಯ

    ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಬಿರುಸಿನ ಇನ್ನಿಂಗ್ಸ್‌ನಿಂದ ಭಾರತ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 10 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗೆ 114 ರನ್ ಗಳಿಸಿದೆ. ರೋಹಿತ್ 37 ಎಸೆತಗಳಲ್ಲಿ 89 ರನ್ ಮತ್ತು ಸೂರ್ಯಕುಮಾರ್ ಯಾದವ್ ನಾಲ್ಕು ಎಸೆತಗಳಲ್ಲಿ ಏಳು ರನ್ ಗಳಿಸಿ ಆಡುತ್ತಿದ್ದಾರೆ.

  • 24 Jun 2024 08:56 PM (IST)

    Ind vs Aus Live Score: ಪಂತ್ ಔಟ್

    ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಔಟ್ ಮಾಡುವ ಮೂಲಕ ಮಾರ್ಕಸ್ ಸ್ಟೊಯಿನಿಸ್ ಭಾರತಕ್ಕೆ ಎರಡನೇ ಹೊಡೆತ ನೀಡಿದರು. ಪಂತ್ 14 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಆದರೆ, ರೋಹಿತ್ ಶರ್ಮಾ ಇನ್ನೊಂದು ತುದಿಯಿಂದ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದು, ನಿಧಾನವಾಗಿ ಶತಕದತ್ತ ಸಾಗುತ್ತಿದ್ದಾರೆ. ಭಾರತ ಎಂಟು ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗೆ 93 ರನ್ ಗಳಿಸಿದೆ. ರೋಹಿತ್ 29 ಎಸೆತಗಳಲ್ಲಿ 76 ರನ್ ಗಳಿಸಿ ಆಡುತ್ತಿದ್ದಾರೆ. 

  • 24 Jun 2024 08:42 PM (IST)

    Ind vs Aus Live Score: ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ರೋಹಿತ್

    ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ರೋಹಿತ್ ಅವರ ಬಲಿಷ್ಠ ಬ್ಯಾಟಿಂಗ್​ನಿಂದಾಗಿ ಭಾರತ ಐದನೇ ಓವರ್ ಅಂತ್ಯಕ್ಕೆ ಒಂದು ವಿಕೆಟ್​ಗೆ 52 ರನ್ ಗಳಿಸಿದೆ. ರೋಹಿತ್ ಜೊತೆಗೆ ರಿಷಬ್ ಪಂತ್ ಕೂಡ ಕ್ರೀಸ್‌ನಲ್ಲಿದ್ದಾರೆ.

  • 24 Jun 2024 08:23 PM (IST)

    Ind vs Aus Live Score: ರೋಹಿತ್ ಸಿಡಿಲಬ್ಬರ

    ಭಾರತದ ನಾಯಕ ರೋಹಿತ್ ಶರ್ಮಾ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆದ ಓವರ್‌ನಿಂದ 29 ರನ್ ಗಳಿಸಿದರು. ಸ್ಟಾರ್ಕ್ ಅವರ ಈ ಓವರ್‌ನಲ್ಲಿ ರೋಹಿತ್ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.

  • 24 Jun 2024 08:09 PM (IST)

    Ind vs Aus Live Score: ಶೂನ್ಯಕ್ಕೆ ಕೊಹ್ಲಿ ಔಟ್

    ಎರಡನೇ ಓವರ್​ನ ನಾಲ್ಕನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚಿತ್ತು ಔಟಾದರು. ಈ ಪಂದ್ಯದಲ್ಲಿ ಕೊಹ್ಲಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

  • 24 Jun 2024 08:09 PM (IST)

    Ind vs Aus Live Score: ಭಾರತದ ಇನ್ನಿಂಗ್ಸ್ ಆರಂಭ

    ಆಸ್ಟ್ರೇಲಿಯಾ ವಿರುದ್ಧ ಭಾರತದ ಇನ್ನಿಂಗ್ಸ್ ಆರಂಭವಾಗಿದ್ದು, ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಿದ್ದಾರೆ. 

  • 24 Jun 2024 07:52 PM (IST)

    Ind vs Aus Live Score: ಟಾಸ್ ಗೆದ್ದ ಆಸ್ಟ್ರೇಲಿಯಾ

    ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಸ್ಟಾರ್ಕ್​ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

  • 24 Jun 2024 07:24 PM (IST)

    Ind vs Aus Live Score: ಶೀಘ್ರದಲ್ಲೇ ಟಾಸ್

    ಈ ಪಂದ್ಯಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಡ್ಯಾರೆನ್ ಸಾಮಿ ಸ್ಟೇಡಿಯಂ ತಲುಪಿವೆ. ಸ್ವಲ್ಪ ಸಮಯದ ನಂತರ ಈ ಪಂದ್ಯದ ಟಾಸ್ ನಡೆಯಲಿದೆ. ಮಳೆಯಾಗುವ ಸಂಭವವಿದ್ದು, ಪ್ರಸ್ತುತ ವಾತಾವರಣ ಶುಭ್ರವಾಗಿದೆ.

  • 24 Jun 2024 05:59 PM (IST)

    Ind vs Aus Live Score: ಪಂದ್ಯ ರದ್ದಾದರೆ?

    ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಭಾರತ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಮಾತ್ರ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಹೋಗಲು ಸಾಧ್ಯವಾಗುತ್ತದೆ.

  • 24 Jun 2024 05:55 PM (IST)

    Ind vs Aus Live Score: ಸಮಯಕ್ಕೆ ಆಟ ಪ್ರಾರಂಭವಾಗುವುದೇ?

    ಸೇಂಟ್ ಲೂಸಿಯಾದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಪಂದ್ಯ ನಡೆಯಲಿದೆ. ಹವಾಮಾನ ವರದಿಗಳ ಪ್ರಕಾರ, ಬೆಳಿಗ್ಗೆ 7 ರಿಂದ 9 ರವರೆಗೆ ಮಳೆಯಾಗುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗುವ ಸಾಧ್ಯತೆ ಕಡಿಮೆ.

Published On - 5:55 pm, Mon, 24 June 24

Follow us on