
ಭಾರತ ತಂಡವು ಏಷ್ಯಾಕಪ್ 2025 ರಲ್ಲಿ (Asia Cup 2025) ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಟೂರ್ನಿಯಲ್ಲಿ ಇಲ್ಲಿಯವರೆಗೆ ಆಡಿರುವ ನಾಲ್ಕಕ್ಕೇ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಸೂಪರ್ 4 ಸುತ್ತಿನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಾಗಿದ್ದು,ಈ ಪಂದ್ಯದಲ್ಲಿ ಯಾವುದೇ ತಂಡ ಸೋತರೂ ಅದು ಸೂಪರ್ 4 ಸುತ್ತಿನಲ್ಲಿ ಅದರ ಮೊದಲ ಸೋಲಾಗಲಿದೆ. ಭಾರತ ತನ್ನ ಮೊದಲ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ, ಬಾಂಗ್ಲಾದೇಶ ಶ್ರೀಲಂಕಾವನ್ನು ಸೋಲಿಸಿತ್ತು.
ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಎರಡೂ ದೇಶಗಳ ಅಂಕಿಅಂಶಗಳನ್ನು ನೋಡಿದರೆ, ಭಾರತ ಬಾಂಗ್ಲಾದೇಶಕ್ಕಿಂತ ಬಹಳ ಮುಂದಿದೆ ಎಂದು ತೋರುತ್ತದೆ. ಎರಡೂ ದೇಶಗಳು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 17 ಬಾರಿ ಮುಖಾಮುಖಿಯಾಗಿವೆ, ಅದರಲ್ಲಿ ಭಾರತ 16 ಬಾರಿ ಗೆದ್ದಿದೆ. ಉಭಯ ತಂಡಗಳು 2009 ರಲ್ಲಿ ಮೊದಲ ಬಾರಿಗೆ ಟಿ20 ಯಲ್ಲಿ ಮುಖಾಮುಖಿಯಾಗಿದ್ದವು. ಅಂದಿನಿಂದ ಬಾಂಗ್ಲಾದೇಶ ಕೇವಲ ಒಂದು ಟಿ20 ಪಂದ್ಯವನ್ನು ಮಾತ್ರ ಗೆದ್ದಿದೆ.
Asia cup 2025: ಟಿ20 ಏಷ್ಯಾಕಪ್ ಸೂಪರ್ ಸುತ್ತಿನಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು?
2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಸೆಪ್ಟೆಂಬರ್ 24, ಬುಧವಾರ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೂಪರ್ ಫೋರ್ ಪಂದ್ಯ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಟಾಸ್ ಅರ್ಧ ಗಂಟೆ ಮೊದಲು, ಸಂಜೆ 7:30 ಕ್ಕೆ ನಡೆಯಲಿದೆ.
2025 ರ ಚಾಂಪಿಯನ್ಸ್ ಟ್ರೋಫಿಯಂತೆ ಭಾರತ-ಬಾಂಗ್ಲಾದೇಶ ಪಂದ್ಯವೂ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ನೀವು ಈ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಲು ಬಯಸಿದರೆ, ಪಂದ್ಯಾವಳಿಯ ಅಧಿಕೃತ ಪ್ರಸಾರಕರಾದ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್ 1, 2, 3 ಮತ್ತು 5 ರಲ್ಲಿ ನೀವು ಅದನ್ನು ವೀಕ್ಷಿಸಬಹುದು.
ಬುಧವಾರ ನಡೆಯಲಿರುವ ಈ ಪಂದ್ಯದ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಸೋನಿ ಲಿವ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ