‘ಹೊಸಬನಂತೆ ಭಾವಿಸುತ್ತಿದೆ’; ಪಾಕ್ ಮಂಡಳಿ ವಿರುದ್ಧ ಶೋಯೆಬ್ ಅಖ್ತರ್ ಅಸಮಾಧಾನ
Shoaib Akhtar Slams PCB: ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ನಂತರ, ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ತಮ್ಮನ್ನು ಮುಖ್ಯ ಕೋಚ್ ಆಗಿ ನೇಮಿಸಲು ಪಿಸಿಬಿ ನಿರಾಕರಿಸುತ್ತಿದೆ ಎಂದು ಆರೋಪಿಸಿದ್ದು, 20 ಸದಸ್ಯರ ಆಯ್ಕೆ ಸಮಿತಿಯ ರಚನೆಗೆ ಒತ್ತಾಯಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ನ ಸುಧಾರಣೆಗೆ ಅವರು ಮೂರು ವರ್ಷಗಳ ಸಮಯವನ್ನು ಕೋರಿದ್ದಾರೆ.

ಏಷ್ಯಾಕಪ್‌ನಲ್ಲಿ (Asia Cup 2025) ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ಕಳಪೆಯಾಗಿದೆ. ಭಾರತದ ವಿರುದ್ಧದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಸೋಲು ಅನುಭವಿಸಿದೆ. ಈಗ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಮ್ಮ ತಂಡ ಮತ್ತು ಮಂಡಳಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ನಡುವೆ ತಂಡದ ಮಾಜಿ ವೇಗದ ಬೌಲ್ ಶೋಯೆಬ್ ಅಖ್ತರ್ (Shoaib Akhtar) ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧ ಅಸಮಾಧಾನ ಹೊರಹಾಗಿದ್ದು, ಪಿಸಿಬಿ ತಮ್ಮನ್ನು ಎಂದಿಗೂ ಕೋಚ್ ಆಗಿ ನೇಮಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ, ನನ್ನನ್ನು ಪಿಸಿಬಿ ಹೊಸಬರಂತೆ ಭಾವಿಸುತ್ತಿದೆ. ಒಂದು ವೇಳೆ ಪಿಸಿಬಿ ನನ್ನನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿದರೆ, 20 ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸುವುದಾಗಿ ಹೇಳಿದ್ದಾರೆ.
ಪಾಕ್ ಮಂಡಳಿ ವಿರುದ್ಧ ಅಖ್ತರ್ ಅಸಮಾಧಾನ
ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೋಯೆಬ್ ಅಖ್ತರ್, ‘ಮೊದಲನೆಯದಾಗಿ, ಪಿಸಿಬಿ ನನ್ನನ್ನು ಎಂದಿಗೂ ಕೋಚ್ ಆಗಿ ನೇಮಿಸುವುದಿಲ್ಲ. ಕಾರಣ ನಾನು ಸರಿಯಾದ ಕೆಲಸವನ್ನು ಮಾಡುತ್ತೇನೆ. ನನಗೆ ಎಲ್ಲಾ ಅಧಿಕಾರ ನೀಡಿ ಎಂದು ನಾನು ಹೇಳುತ್ತಿಲ್ಲ. ನಾನು ತಂಡದ ಕೆಲಸದಲ್ಲಿ ನಂಬಿಕೆ ಇಡುತ್ತೇನೆ. ನಾನು ಒಟ್ಟಿಗೆ ಕೆಲಸ ಮಾಡುವುದರಲ್ಲಿ ನಂಬಿಕೆ ಇಡುತ್ತೇನೆ. ಆದರೆ ನನಗೆ ಅಧಿಕಾರ ನೀಡಿದ ಕೂಡಲೇ ನಾನು ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಅರ್ಥವಲ್ಲ. ಅದು ಹಾಗಲ್ಲ. ನನಗೆ 20 ಸದಸ್ಯರ ಆಯ್ಕೆ ಸಮಿತಿ ಬೇಕು. ನಾನು ಅವರ ಸಲಹೆಯನ್ನು ಆಲಿಸಿ ಒಟ್ಟಿಗೆ ಕೆಲಸ ಮಾಡುತ್ತೇನೆ ಎಂದಿರುವ ಶೋಯೆಬ್ ಅಖ್ತರ್, ಪ್ರಸ್ತುತ ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರ ತರಬೇತಿ ಮತ್ತು ಆಯ್ಕೆ ಸಮಿತಿಯನ್ನು ಅಸಂಬದ್ಧ ಎಂದಿದ್ದಾರೆ.
3 ವರ್ಷ ಸಮಯ ಕೇಳಿದ ಅಖ್ತರ್
ಮುಂದುವರೆದು ಮಾತನಾಡಿರುವ ಶೋಯೆಬ್ ಅಖ್ತರ್, ತಂಡದ ತಪ್ಪುಗಳನ್ನು ಸರಿಪಡಿಸಲು ಮೂರು ವರ್ಷಗಳು ಬೇಕು. ಪಾಕಿಸ್ತಾನ ಕ್ರಿಕೆಟ್ ಅನ್ನು ಸುಧಾರಿಸಲು ಮತ್ತು ಆಟಗಾರರಿಗೆ ಆತ್ಮವಿಶ್ವಾಸ ತುಂಬಲು ನನಗೆ ಮೂರು ವರ್ಷಗಳನ್ನು ನೀಡಿದರೆ, ಸ್ಯಾಮ್‌ಗೆ ಹೋಗಿ ಮುಕ್ತವಾಗಿ ಆಡಲು ಹೇಳುತ್ತೇನೆ. ಟೀಂ ಇಂಡಿಯಾ ಆರಂಭಿಕ ಅಭಿಷೇಕ್‌ಗೆ ಮುಖ್ತವಾಗಿ ಆಡಲು ಪರವಾನಗಿ ನೀಡಲಾಗಿದೆ. ಆದ್ದರಿಂದ ನೀವು ಸಹ ಮುಖ್ತವಾಗಿ ಆಡಬಹುದು. ಒಂದೆರಡು ಬಾರಿ ನೀವು ವಿಫಲರಾದರೆ, ನಿಮ್ಮನ್ನು ತಂಡದಿಂದ ಕೈಬಿಡಲಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಾನು ಸ್ಯಾಮ್‌ಗೆ ಒಂದು ವರ್ಷ ಸಮಯಾವಕಾಶ ನೀಡಿ, ಇಡೀ ವರ್ಷ ನಿನ್ನದೇ ಎಂದು ಹೇಳುತ್ತೇನೆ, ನಂತರ ಅವನು ಹೇಗೆ ಉತ್ತಮವಾಗಿ ಪ್ರದರ್ಶನ ನೀಡುವುದಿಲ್ಲ ಎಂದು ನಾನು ನೋಡುತ್ತೇನೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
