Asia Cup Super 4 Schedule: ಏಷ್ಯಾಕಪ್‌ನ ಸೂಪರ್-4 ನಲ್ಲಿ ಭಾರತದ ಮೊದಲು ಎದುರಾಳಿ ಯಾರು?, ಪಂದ್ಯ ಯಾವಾಗ?
India vs Pakistan, Super 4: 2025 ರ ಏಷ್ಯಾಕಪ್‌ನ ಸೂಪರ್-4 ರಲ್ಲಿ ಭಾರತ ತಂಡದ ವೇಳಾಪಟ್ಟಿಯನ್ನು ನೋಡಿದರೆ, ಅದು ಸೆಪ್ಟೆಂಬರ್ 21 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿಯಲಿದೆ. ಇದರ ನಂತರ, ಟೀಮ್ ಇಂಡಿಯಾ ಸೆಪ್ಟೆಂಬರ್ 24 ರ ಬುಧವಾರ ಬಾಂಗ್ಲಾದೇಶ ತಂಡದ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.

ಬೆಂಗಳೂರು (ಸೆ. 20): 2025 ರ ಏಷ್ಯಾ ಕಪ್ ನ ಲೀಗ್ ಹಂತ ಮುಕ್ತಾಯಗೊಂಡಿದೆ. ಸೂಪರ್ 4 ಹಂತ ಸೆಪ್ಟೆಂಬರ್ 20 ರಂದು ಆರಂಭವಾಗುತ್ತದೆ. ಭಾರತ (Indian Cricket Team), ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೂಪರ್ 4 ಹಂತ ತಲುಪಿದ ತಂಡಗಳು. ಭಾರತವು ಒಮಾನ್ ವಿರುದ್ಧದ ಪಂದ್ಯಾವಳಿಯ ಕೊನೆಯ ಲೀಗ್ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ಓಮನ್ ಅನ್ನು 21 ರನ್‌ಗಳಿಂದ ಸೋಲಿಸಿತು. ವಿಸೇಷ ಎಂದರೆ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ತನ್ನ ಲೀಗ್ ಹಂತದ ಮೂರೂ ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಸದ್ಯ, ಭಾರತ ತಂಡವು ತನ್ನ ಮೊದಲ ಸೂಪರ್ 4 ಪಂದ್ಯವನ್ನು ಯಾವಾಗ ಮತ್ತು ಯಾರ ವಿರುದ್ಧ ಆಡಲಿದೆ ಎಂಬುದನ್ನು ನೋಡೋಣ.
ಏಷ್ಯಾಕಪ್ 2025 ಸೂಪರ್ 4 ನಲ್ಲಿ ಭಾರತೀಯ ತಂಡದ ಪೂರ್ಣ ವೇಳಾಪಟ್ಟಿ
ಏಷ್ಯಾ ಕಪ್ ಸೂಪರ್ 4 ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನು ಆಡಲಿದೆ. ಟೀಮ್ ಇಂಡಿಯಾದ ಮೊದಲ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದೆ. ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿಯೂ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದಿತ್ತು. ಇದು ಇಬ್ಬರ ನಡುವಿನ ಎರಡನೇ ಮುಖಾಮುಖಿಯಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಸೂಪರ್ 4 ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ತಂಡವು ತನ್ನ ಎರಡನೇ ಸೂಪರ್ ಫೋರ್ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯವು ಸೆಪ್ಟೆಂಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಳಿಕ ಶ್ರೀಲಂಕಾ ವಿರುದ್ಧ ಸೆಪ್ಟೆಂಬರ್ 26 ರಂದು ಮೂರನೇ ಪಂದ್ಯ ಆಡಲಿದೆ. ಇದುಕೂಡ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂಪರ್ 4 ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳು 2025 ರ ಏಷ್ಯಾಕಪ್‌ನ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೂಪರ್-4 ರಲ್ಲಿ ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7:30 ಕ್ಕೆ ನಡೆಯಲಿದೆ.
IND vs PAK, Super 4: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಅಕ್ಷರ್ ಪಟೇಲ್ ಇಂಜುರಿ
ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಅಸಾಧಾರಣ ಪ್ರದರ್ಶನ ನೀಡಿತು. ಟೀಮ್ ಇಂಡಿಯಾದ ಮೊದಲ ಪಂದ್ಯ ಯುಎಇ ವಿರುದ್ಧವಾಗಿತ್ತು, ಅಲ್ಲಿ ಅವರು 9 ವಿಕೆಟ್‌ಗಳಿಂದ ಜಯಗಳಿಸಿದರು. ಭಾರತ ಕೇವಲ 27 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಇದಲ್ಲದೆ, ತಮ್ಮ ಎರಡನೇ ಪಂದ್ಯದಲ್ಲಿ, ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು, ಬಳಿಕ ಸೂರ್ಯ ಪಡೆ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಓಮನ್ ತಂಡವನ್ನು 21 ರನ್‌ಗಳಿಂದ ಸೋಲಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




