7 ವರ್ಷಗಳ ನಂತರ ಬಾಂಗ್ಲಾದೇಶ ತಲುಪಿದ ಭಾರತ ತಂಡದ ಆರಂಭ 2015ರ ಪ್ರವಾಸದಂತೆಯೇ ಆಗಿದೆ. ಏಳು ವರ್ಷಗಳ ಹಿಂದೆ ಮೀರ್‌ಪುರದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಟೀಂ ಇಂಡಿಯಾವನ್ನು ಅತ್ಯಂತ ಸುಲಭವಾಗಿ ಸೋಲಿಸಿತ್ತು. ಡಿಸೆಂಬರ್ 4 ಭಾನುವಾರದಂದು ಮೀರ್‌ಪುರದ ಅದೇ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಅದೇ ಕಥೆ ಮತ್ತೊಮ್ಮೆ ಪುನರಾವರ್ತಿಸಲಾಗೆ. ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಫ್ಲಾಪ್ ಬ್ಯಾಟಿಂಗ್ ಮತ್ತು ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಬಾಂಗ್ಲಾದೇಶ 1 ವಿಕೆಟ್‌ನಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸೋಲಿನ ಸುಳಿಯಲ್ಲಿ ನಿಂತಿದ್ದ ತಮ್ಮ ತಂಡಕ್ಕೆ ಕೊನೆಯ ಬ್ಯಾಟ್ಸ್ ಮನ್ ಜತೆಗೂಡಿ ಮೆಹಿದಿ ಹಸನ್ ಮಿರಾಜ್ ಸ್ಮರಣೀಯ ಜಯ ತಂದುಕೊಟ್ಟರು.
ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತವನ್ನು ಸೋಲಿಸಿದೆ. ಮೀರಜ್ ಒಂಬತ್ತನೇ ವಿಕೆಟ್‌ಗೆ ಮುಸ್ತಫಿಜುರ್ ರೆಹಮಾನ್ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಮೀರಜ್ 38 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರೆ ರೆಹಮಾನ್ ಅವರೊಂದಿಗೆ 10 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವಿಕೆಟ್ ಕೀಪಿಂಗ್ ಮಾಡುತ್ತಿರುವ ಕೆಎಲ್ ರಾಹುಲ್, ಹಸನ್ ಕ್ಯಾಚ್ ಕೈಬಿಟ್ಟರು. ರಾಹುಲ್ ಈ ಕ್ಯಾಚ್ ಹಿಡಿದಿದ್ದರೆ ಬಾಂಗ್ಲಾದೇಶದ ಇನ್ನಿಂಗ್ಸ್ ಇಲ್ಲಿಗೇ ಮುಗಿಯುತ್ತಿತ್ತು.
41ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮೆಹೆದಿ ಹಸನ್ ಮಿರಾಜ್ ಸಿಕ್ಸರ್ ಬಾರಿಸಿದರು. ಕುಲದೀಪ್ ಸೇನ್ ಬೌಲ್ ಮಾಡಿದ ಶಾರ್ಟ್ ಬಾಲ್ ಔಟ್ ಆಫ್ ಸ್ಟಂಪ್ ಹೊರಗಿತ್ತು. ಹಸನ್ ಅದನ್ನು ಥರ್ಡ್ ಮ್ಯಾನ್ ಕಡೆಗೆ ಸಿಕ್ಸರ್ ಬಾರಿಸಿದರು.
40ನೇ ಓವರ್‌ನ ಐದನೇ ಎಸೆತದಲ್ಲಿ ಮುಸ್ತಾಫಿಜುರ್ ರೆಹಮಾನ್ ಬೌಂಡರಿ ಬಾರಿಸಿದರು. ಬರೋಬ್ಬರಿ 102 ಎಸೆತಗಳ ನಂತರ ಈ ಬೌಂಡರಿ ಬಂದಿದೆ.
40ನೇ ಓವರ್ ಎಸೆದ ಮೊಹಮ್ಮದ್ ಸಿರಾಜ್ ಭಾರತಕ್ಕೆ ಒಂಬತ್ತನೇ ಯಶಸ್ಸು ತಂದುಕೊಟ್ಟಿದ್ದಾರೆ. ಅವರು ಈ ಓವರ್‌ನ ಎರಡನೇ ಎಸೆತದಲ್ಲಿ ಹಸನ್ ಮಹಮೂದ್ ಅವರನ್ನು ಔಟ್ ಮಾಡಿದರು.
ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಇಬಾದತ್ ಹುಸೇನ್ ಹಿಟ್ ವಿಕೆಟ್ ಆಗಿ ಔಟಾಗಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದ ಎಂಟನೇ ವಿಕೆಟ್ ಪತನಗೊಂಡಿದೆ.
ಕುಲದೀಪ್ ಸೇನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದರು. ಅವರು ಅಫೀಫ್ ಹುಸೇನ್ ಅವರನ್ನು ವಜಾಗೊಳಿಸಿದ್ದಾರೆ.
38ನೇ ಓವರ್ ಎಸೆದ ಸಿರಾಜ್ ಅದ್ಭುತ ಬೌಲಿಂಗ್ ಮಾಡಿ ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳಿಗೆ ರನ್ ಗಳಿಸುವ ಅವಕಾಶವನ್ನೇ ನೀಡಲಿಲ್ಲ. ಈ ಓವರ್‌ನಲ್ಲಿ ಸಿರಾಜ್ ನೀಡಿದ್ದು ಮೂರು ರನ್ ಮಾತ್ರ.
36ನೇ ಓವರ್‌ನ ಮೊದಲ ಎಸೆತದಲ್ಲಿ ಮುಶ್ಫಿಕರ್ ರಹೀಮ್ ಬೌಲ್ಡ್ ಆದರು. ಸಿರಾಜ್ ಅವರ ಚೆಂಡು ಬೌನ್ಸ್ ಆಗಿದರಿಂದ ಅದನ್ನು ಥರ್ಡ್ ಮ್ಯಾನ್‌ನಲ್ಲಿ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ಬಡಿದು ನಂತರ ಸ್ಟಂಪ್‌ಗೆ ಬಡಿಯಿತು.
35ನೇ ಓವರ್‌ನ ಕೊನೆಯ ಎಸೆತದಲ್ಲಿ ಮಹಮ್ಮದುಲ್ಲಾ ಎಲ್‌ಬಿಡಬ್ಲ್ಯೂ ಆದರು. ಮಹಮ್ಮದುಲ್ಲಾ ಪ್ಲಿಕ್ ಮಾಡಲು ಪ್ರಯತ್ನಿಸಿದರಾದರೂ ತಪ್ಪಿ ಚೆಂಡು ಪ್ಯಾಡ್‌ಗೆ ಬಡಿಯಿತು.
ಬಾಂಗ್ಲಾದೇಶ 33 ಓವರ್‌ಗಳಲ್ಲಿ 122 ರನ್ ಗಳಿಸಿದೆ. ರಹೀಮ್ ಮತ್ತು ಮಹಮ್ಮದುಲ್ಲಾ ನಡುವೆ 28 ಎಸೆತಗಳಲ್ಲಿ 14 ರನ್‌ಗಳ ಜೊತೆಯಾಟವಿದೆ. ತಂಡ ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಿದೆ.
30ನೇ ಓವರ್‌ನಲ್ಲಿ ಶಹಬಾಜ್ ಅಹ್ಮದ್ ಆರು ರನ್ ನೀಡಿದರು. ಠಾಕೂರ್ 31ನೇ ಓವರ್ನಲ್ಲಿ ಕೇವಲ ಒಂದು ರನ್ ನೀಡಿದರು. ಬಾಂಗ್ಲಾದೇಶ ನಿಧಾನವಾಗಿ ಗೆಲುವಿನ ಸಮೀಪಕ್ಕೆ ಬರುತ್ತಿದೆ. ವಿಕೆಟ್‌ಗಾಗಿ ಭಾರತದ ಕಾಯುವಿಕೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ.
ಶಹಬಾಜ್ ಅಹ್ಮದ್ 28ನೇ ಓವರ್‌ನಲ್ಲಿ ಮೂರು ರನ್ ನೀಡಿದರು. ಬಾಂಗ್ಲಾದೇಶದ ಸ್ಕೋರ್ 109ಕ್ಕೆ ತಲುಪಿದೆ.ಇಲ್ಲಿಂದ ಪಂದ್ಯ ಭಾರತದ ಕೈಯಿಂದ ತಪ್ಪಿ ಹೋಗುವಂತಿದೆ.
24ನೇ ಓವರ್‌ನಲ್ಲಿ ಶಕೀಬ್ ಅಲ್ ಹಸನ್ ಅವರನ್ನು ವಾಷಿಂಗ್ಟನ್ ಸುಂದರ್ ಔಟ್ ಮಾಡಿದರು. ಓವರ್‌ನ ಮೂರನೇ ಎಸೆತವನ್ನು ಶಕೀಬ್ ಕವರ್‌ನತ್ತ ಆಡಿದರು, ಕೊಹ್ಲಿ ಗಾಳಿಯಲ್ಲಿ ಜಿಗಿದು ಒಂದು ಕೈಯಿಂದ ಅದ್ಭುತ ಕ್ಯಾಚ್ ಪಡೆದರು. ಶಕೀಬ್ 38 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು.
ಶಹಬಾದ್ ಅಹ್ಮದ್ ಅವರ ಓವರ್‌ನಲ್ಲಿ ಶಕೀಬ್ ಅಲ್ ಹಸನ್ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಓವರ್‌ನ ಮೂರನೇ ಎಸೆತದಲ್ಲಿ ಶಕೀಬ್ ಮೊದಲ ಎಕ್ಸ್ಟ್ರಾ ಕವರ್‌ನಲ್ಲಿ ಬೌಂಡರಿ ಬಾರಿಸಿದರೆ, ಮುಂದಿನ ಚೆಂಡನ್ನು ಸ್ವೀಪ್ ಮಾಡಿ ಸತತ ಎರಡನೇ ಫೋರ್ ಹೊಡೆದರು. ಈ ಓವರ್‌ನಲ್ಲಿ ಶಹಬಾಜ್ 9 ರನ್ ನೀಡಿದರು
20ನೇ ಓವರ್‌ನ ಎರಡನೇ ಎಸೆತದಲ್ಲಿ ಲಿಟ್ಟನ್ ದಾಸ್ ಔಟಾದರು. ಚೆಂಡು ಲಿಟ್ಟನ್ ಅವರ ಬ್ಯಾಟ್‌ಗೆ ಬಡಿದು ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತು. ಲಿಟ್ಟನ್ ದಾಸ್ 63 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ಇದರೊಂದಿಗೆ ಲಿಟ್ಟನ್ ಮತ್ತು ಶಕೀಬ್ ಅವರ ಬಲಿಷ್ಠ ಜೊತೆಯಾಟವನ್ನು ಭಾರತವೂ ಮುರಿದಿದೆ, ಆದರೆ ಗೆಲುವು ಇನ್ನೂ ದೂರದಲ್ಲಿದೆ.
ಕುಲದೀಪ್ ಸೇನ್ 16ನೇ ಓವರ್ ಬೌಲ್ ಮಾಡಿ 10 ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಲಿಟ್ಟನ್ ದಾಸ್ ಎಳೆದು ಸಿಕ್ಸರ್ ಬಾರಿಸಿದರು. ಸೇನ್ ಇದುವರೆಗೆ ತಮ್ಮ ಮೂರು ಓವರ್‌ಗಳಲ್ಲಿ 22 ರನ್‌ಗಳನ್ನು ನೀಡಿದ್ದಾರೆ.
ಬಾಂಗ್ಲಾದೇಶ 15 ಓವರ್‌ಗಳಲ್ಲಿ 51 ರನ್ ಗಳಿಸಿದೆ. ಭಾರತ ರನ್‌ಗಳ ವೇಗವನ್ನು ನಿಯಂತ್ರಿಸಿದೆ ಆದರೆ ಒತ್ತಡವನ್ನು ಸೃಷ್ಟಿಸಲು ವಿಕೆಟ್‌ಗಳನ್ನು ಪಡೆಯಬೇಕಾಗಿದೆ. ಇದೀಗ ಸ್ಪಿನ್ ಬೌಲರ್ ಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿರುವುದರಿಂದ ಅವರ ಪಾತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.
14ನೇ ಓವರ್ ಎಸೆದ ಕುಲದೀಪ್ ಸೇನ್ ನಾಲ್ಕನೇ ಎಸೆತವು ಶಾರ್ಟ್ ಬಾಲ್ ಆಗಿದ್ದು, ಅದರಲ್ಲಿ ಲಿಟ್ಟನ್ ದಾಸ್ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಬೌಂಡರಿ ಬಾರಿಸಿದರು.
13ನೇ ಓವರ್‌ನಲ್ಲಿ ಲಿಟನ್ ದಾಸ್ ಅವರ ಬ್ಯಾಟ್‌ಗೆ ಚೆಂಡು ಬಡಿದು ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಕೈಸೇರಿತು. ಆದಾಗ್ಯೂ, ಅವರು ಹೆಚ್ಚು ಆತ್ಮವಿಶ್ವಾಸ ತೋರಲಿಲ್ಲ. ಅಂಪೈರ್ ರಿಪ್ಲೇ ತೆಗೆದುಕೊಂಡರು, ಚೆಂಡು ರೋಹಿತ್ ತಲುಪುವ ಮೊದಲು ನೆಲಕ್ಕೆ ಬಡಿದಿದ್ದು ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು
11ನೇ ಓವರ್‌ನಲ್ಲಿ ದೀಪಕ್ ಚಹಾರ್ 1 ರನ್ ನೀಡಿದರು. ಬಾಂಗ್ಲಾದೇಶದ ಆಟಗಾರರಿಗೆ ಗುರಿ ತುಂಬಾ ದೊಡ್ಡದಲ್ಲ ಎಂಬುದು ಗೊತ್ತು. ಅದಕ್ಕಾಗಿಯೇ ಅವರು ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ನಿಧಾನಗತಿಯಲ್ಲಿ ಆಡುತ್ತಿದ್ದಾರೆ.
ಮೊಹಮ್ಮದ್ ಸಿರಾಜ್ 10ನೇ ಓವರ್‌ನ ಮೊದಲ ಎಸೆತದಲ್ಲಿ ಅನಾಮುಲ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಅನಾಮುಲ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಚೆಂಡು ಮಿಡ್ ವಿಕೆಟ್ ಕಡೆಗೆ ಹೋಯಿತು, ವಾಷಿಂಗ್ಟನ್ ಸುಂದರ್ ಸರಳ ಕ್ಯಾಚ್ ಪಡೆದರು.
ಬಾಂಗ್ಲಾದೇಶ ಆರು ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ. ಗುರಿ ತುಂಬಾ ದೊಡ್ಡದಲ್ಲ. ಈ ಕಾರಣಕ್ಕಾಗಿ ಕೇವಲ ಬಿಗಿ ಬೌಲಿಂಗ್ ಕೆಲಸ ಮಾಡುವುದಿಲ್ಲ. ಪಂದ್ಯ ಗೆಲ್ಲಲು ಭಾರತ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಬೇಕಿದೆ
ಮೊಹಮ್ಮದ್ ಸಿರಾಜ್ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಏಳು ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಅನಾಮುಲ್ ಫೈನ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು.
ಎರಡನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಕೇವಲ ಮೂರು ರನ್ ನೀಡಿದರು. 3ನೇ ಓವರ್ ಎಸೆಯಲು ಬಂದ ದೀಪಕ್ ಚಹಾರ್ ಕೇವಲ ಒಂದು ರನ್ ನೀಡಿದರು.
ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಬಾಂಗ್ಲಾದೇಶಕ್ಕೆ ಪೆಟ್ಟು ಬಿದ್ದು ನಜ್ಮುಲ್ ಹುಸೇನ್ ಔಟಾದರು. ಮೊದಲ ಓವರ್ ಮಾಡುತ್ತಿದ್ದ ದೀಪಕ್ ಚಹಾರ್ ಎಸೆದ ಮೊದಲ ಎಸೆತ ನಜ್ಮುಲ್ ಹುಸೇನ್ ಶಾಂಟೊ ಬ್ಯಾಟ್‌ನ ಅಂಚಿಗೆ ತಾಗಿ ರೋಹಿತ್ ಶರ್ಮಾ ಕೈಸೇರಿತು. ಶಾಂತೋ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ
ಭಾರತ ತಂಡದ ಕಳಪೆ ಬ್ಯಾಟಿಂಗ್‌ನಿಂದಾಗಿ 41.2 ಓವರ್‌ಗಳಲ್ಲಿ ಆಲೌಟ್ ಆಗಿದೆ. ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 186 ರನ್‌ಗಳಿವೆ. ಭಾರತ ಪರ ಕೆಎಲ್ ರಾಹುಲ್ ಅತಿ ಹೆಚ್ಚು ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 73 ರನ್‌ಗಳು ಬಂದವು. ನಾಯಕ ರೋಹಿತ್ ಶರ್ಮಾ 27 ರನ್ ಗಳಿಸಿದರು. ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ ಐದು, ಇಬಾದತ್ ಹುಸೇನ್ 4 ಹಾಗೂ ಹಸನ್ ಮಹಮೂದ್ ಒಂದು ವಿಕೆಟ್ ಪಡೆದರು.
ಭಾರತದ ಕೊನೆಯ ಭರವಸೆಯಾಗಿದ್ದ ಕೆಎಲ್ ರಾಹುಲ್ ಕೂಡ 40ನೇ ಓವರ್‌ನಲ್ಲಿ ಔಟಾದರು. ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಮಿಡ್ ಆಫ್ ಓವರ್‌ನಲ್ಲಿ ಸಿಕ್ಸರ್ ಬಾರಿಸಿದರು ಮತ್ತು ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಐದನೇ ಎಸೆತದಲ್ಲಿ ಡಾಡ್ಜ್ ಮಾಡಿದ ರಾಹುಲ್ ಫೈನ್ ಲೆಗ್‌ನಲ್ಲಿ ಅನಾಮುಲ್‌ಗೆ ಕ್ಯಾಚ್ ನೀಡಿದರು.
ಬಾಂಗ್ಲಾದೇಶದ ಮುಂದೆ ಭಾರತದ ಬ್ಯಾಟಿಂಗ್ ತುಂಬಾ ಕೆಟ್ಟದಾಗಿದೆ. ತಂಡದ ಸ್ಕೋರ್ 200ಕ್ಕೂ ತಲುಪಿಲ್ಲ. ಈಗಾಗಲೇ 9 ವಿಕೆಟ್ ಕಳೆದುಕೊಂಡಿದೆ. ಸುಂದರ್ ಮತ್ತು ರಾಹುಲ್ ಜೊತೆಯಾಟದಿಂದ ನಿರೀಕ್ಷೆಗಳಿದ್ದವು, ಆದರೆ ಅವರ ನಿರ್ಗಮನದ ನಂತರ, ಬಾಂಗ್ಲಾದೇಶವು ಈಗ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ. ಈಗ ರಾಹುಲ್ ಕೂಡ ಔಟಾಗಿರುವುದರಿಂದ ಭಾರತಕ್ಕೆ ಭಾರಿ ಹಿನ್ನಡೆಯುಂಟಾಗಿದೆ.
37ನೇ ಓವರ್‌ನಲ್ಲಿ ಶಕೀಬ್ ಅಲ್ ಹಸನ್ ಏಳು ರನ್ ನೀಡಿದರು. ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ಚೆಂಡನ್ನು ಆಡಿ ಬೌಂಡರಿ ಬಾರಿಸಿದರು. ಸದ್ಯ ಕೆಎಲ್ ರಾಹುಲ್ ಭಾರತದ ಕೊನೆಯ ಭರವಸೆಯಾಗಿದ್ದಾರೆ.
ಶಾಕಿಬ್ ಅಲ್ ಹಸನ್ ದೀಪಕ್ ಚಾಹರ್ರನ್ನು ಎಲ್ಬಿ ಬಲೆಗೆ ಬೀಳಿಸಿದ್ದಾರೆ. ಒಂದೇ ಓವರ್ನಲ್ಲಿ ಶಾಕಿಬ್ಗೆ ಎರಡು ವಿಕೆಟ್ ಬಿದ್ದವು. ದೀಪಕ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಶಾಕಿಬ್ ಅಲ್ ಹಸನ್ ಮತ್ತೊಮ್ಮೆ ದಾಳಿಗೆ ಬಂದು ಶಾರ್ದೂಲ್ ಠಾಕೂರ್ ಅವರನ್ನು ಬಲಿಪಶು ಮಾಡಿದರು. 35ನೇ ಓವರ್‌ನ ಮೊದಲ ಎಸೆತದಲ್ಲಿ, ಠಾಕೂರ್ ಬ್ಯಾಕ್‌ಫೂಟ್‌ನಲ್ಲಿ ಹೋಗಿ ಇನ್ಸೈಡ್ ಲೈನ್‌ನಲ್ಲಿ ಚೆಂಡನ್ನು ಆಡಲು ಯತ್ನಿಸದರು ಆದರೆ ಚೆಂಡು ಸೀದಾ ಸ್ಟಂಪ್‌ಗೆ ಬಡಿಯಿತು. ಕೇವಲ 2 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಇಬಾದತ್ ಹುಸೇನ್ ಶಹಬಾಜ್ ಹುಸೇನ್ ಅವರನ್ನು ಔಟ್ ಮಾಡುವ ಮೂಲಕ ಟೀಂ ಇಂಡಿಯಾಕ್ಕೆ ಆರನೇ ಹೊಡೆತ ನೀಡಿದರು. ಭಾರತ ಸತತ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಶಹಬಾದ್ ಅಹ್ಮದ್ ಬ್ಯಾಕ್‌ಫೂಟ್‌ನಲ್ಲಿ ಹೋಗಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಶಾರ್ಟ್ ಕವರ್‌ನಲ್ಲಿ ಶಾಕಿಬ್ ಅಲ್ ಹಸನ್ ಅವರಿಗೆ ಕ್ಯಾಚ್ ನೀಡಿದರು. ಶಹಬಾಜ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ
33ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಶಕೀಬ್ ಹುಸೇನ್‌ಗೆ ಬಲಿಯಾದರು. ಓವರ್‌ನ ಮೂರನೇ ಎಸೆತದಲ್ಲಿ, ಸುಂದರ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ನಿಂತಿದ್ದ ಫೀಲ್ಡರ್ ಕೈಗೆ ಹೋಯಿತು. ಸುಂದರ್ 43 ಎಸೆತಗಳಲ್ಲಿ 19 ರನ್ ಗಳಿಸಿದರು
ಹಸನ್ ಮಹಮೂದ್ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಹುಲ್ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಅವರು 49 ಎಸೆತಗಳಲ್ಲಿ 50 ರನ್ ಪೂರೈಸಿದರು.
ಮೆಹದಿ ಹಸನ್ ಅವರ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್‌ಗೆ ದೊಡ್ಡ ಜೀವನ ಸಿಕ್ಕಿತು. ಓವರ್‌ನ ಎರಡನೇ ಎಸೆತದಲ್ಲಿ ಸುಂದರ್ ವೈಡ್ ಆಫ್‌ನಲ್ಲಿ ಚೆಂಡನ್ನು ಆಡಿದರು, ಇಬಾದ್ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ಸುಂದರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
27ನೇ ಓವರ್‌ನಲ್ಲಿ ಅಂತಿಮವಾಗಿ ಕೆಎಲ್ ರಾಹುಲ್ ಅವರ ಬ್ಯಾಟ್‌ನಿಂದ ಬಿಗ್ ಶಾಟ್ ಹೊರಬಂತು. ಐದನೇ ಎಸೆತವನ್ನು ಡೀಪ್ ಮಿಡ್-ವಿಕೆಟ್ ಮೇಲೆ ರಾಹುಲ್ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಹಸನ್ ಮಹಮೂದ್ 10 ರನ್ ನೀಡಿದರು.
100 ರನ್ ಗಳಿಸುವುದಕ್ಕೂ ಮೊದಲು ಭಾರತ ತನ್ನ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಲ್ಲಿಯವರೆಗೆ ಭಾರತದ ಇನ್ನಿಂಗ್ಸ್ನ 22 ಓವರ್‌ಗಳು ನಡೆದಿದ್ದು, ಭಾರತದ ಸ್ಕೋರ್ 98ಕ್ಕೆ ತಲುಪಿದೆ. ಸುಂದರ್ 8 ಎಸೆತಗಳಲ್ಲಿ 3 ಮತ್ತು ರಾಹುಲ್ 22 ಎಸೆತಗಳಲ್ಲಿ 18 ರನ್ ಗಳಿಸಿ ಆಡುತ್ತಿದ್ದಾರೆ.
ಇಬಾದತ್ ಹುಸೇನ್ 20ನೇ ಓವರ್ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಅಯ್ಯರ್ ಪುಲ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಮೇಲ್ಭಾಗದ ಅಂಚನ್ನು ತಾಗಿ ವಿಕೆಟ್‌ಕೀಪರ್ ಮುಶ್ಫಿಕರ್ ಕೈಸೇರಿತು.
16ನೇ ಓವರ್‌ನಲ್ಲಿ ಮತ್ತೊಮ್ಮೆ ಶ್ರೇಯಸ್ ಅಯ್ಯರ್ ಅವರ ಬ್ಯಾಟ್‌ನಿಂದ ದೊಡ್ಡ ಶಾಟ್ ಹೊರಹೊಮ್ಮಿತು. ಓವರ್‌ನ ನಾಲ್ಕನೇ ಎಸೆತದಲ್ಲಿ, ಅಯ್ಯರ್ ಬ್ಯಾಟ್ ಬೀಸಿ ನೇರ ಡ್ರೈವ್‌ನೊಂದಿಗೆ ಬೌಂಡರಿ ಬಾರಿಸಿದರು.
ಇಬಾದತ್ ಹುಸೇನ್ 14ನೇ ಓವರ್ನಲ್ಲಿ ಏಳು ರನ್ ನೀಡಿದರು. ಮುಂದಿನ ಓವರ್‌ನ ಮೂರನೇ ಎಸೆತದಲ್ಲಿ ಕೆಎಲ್ ರಾಹುಲ್ ಸ್ವೀಪ್ ಮಾಡಿ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಶಕೀಬ್ ಅಲ್ ಹಸನ್ 8 ರನ್ ನೀಡಿದರು.
ಇಬಾದತ್ ಹುಸೇನ್ 12ನೇ ಓವರ್ನಲ್ಲಿ ಕೇವಲ ಒಂದು ರನ್ ನೀಡಿದರು. ಅದೇ ವೇಳೆ ಶಕೀಬ್ ಅವರ ಓವರ್‌ನಲ್ಲಿ ಆರು ರನ್‌ಗಳು ಬಂದವು. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಹೊಸ ಬ್ಯಾಟ್ಸ್‌ಮನ್‌ಗಳು. ಅವರು ಕ್ರೀಸ್‌ನಲ್ಲಿ ಸೆಟ್ ಆಗಲು ಸಮಯ ತೆಗೆದುಕೊಳ್ಳುತ್ತಿದ್ದಾರೆ.
ರೋಹಿತ್ ನಂತರ, ಶಕೀಬ್ ಅಲ್ ಹಸನ್ 11 ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು. ವೈಡ್ ಲೈನ್ ಮೇಲೆ ಚೆಂಡು ಬರುತ್ತದೆ ಎಂದು ಭಾವಿಸದ ವಿರಾಟ್ ಕೊಹ್ಲಿ, ಒಂದೇ ಕೈಯಿಂದ ಡ್ರೈವ್ ಮಾಡಲು ಪ್ರಯತ್ನಿಸಿದರು. ಆದರೆ ಬಾಂಗ್ಲಾ ನಾಯಕ ಲಿಟ್ಟನ್ ದಾಸ್ ಕವರ್ಸ್‌ನಲ್ಲಿ ಅದ್ಭುತ ಕ್ಯಾಚ್ ಪಡೆದರು. ಈ ಕ್ಯಾಚ್ ನೋಡಿ ಸ್ವತಃ ಕೊಹ್ಲಿಯೇ ಆಶ್ಚರ್ಯಚಕಿತರಾದರು.
ರೋಹಿತ್ ಶರ್ಮಾ ರೂಪದಲ್ಲಿ ಟೀಂ ಇಂಡಿಯಾ ದೊಡ್ಡ ಹೊಡೆತ ಅನುಭವಿಸಿದೆ. ಅವರು 27 ರನ್ ಗಳಿಸಿ ಔಟಾದರು. ಶಾಕಿಬ್ ಅಲ್ ಹಸನ್ ಅವರನ್ನು ಬೌಲ್ಡ್ ಮಾಡಿದರು. ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ಶ್ರೇಯಸ್ ಅಯ್ಯರ್ ಮೈದಾನಕ್ಕೆ ಬಂದಿದ್ದಾರೆ.
10 ಓವರ್‌ಗಳ ನಂತರ ಟೀಂ ಇಂಡಿಯಾ 1 ವಿಕೆಟ್‌ಗೆ 48 ರನ್ ಬಾರಿಸಿದೆ. ರೋಹಿತ್ ಶರ್ಮಾ 29 ಎಸೆತಗಳಲ್ಲಿ 27 ಮತ್ತು ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ 9 ರನ್ ಗಳಿಸಿ ಆಡುತ್ತಿದ್ದಾರೆ. ರೋಹಿತ್ 4 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದಾರೆ.
ಏಳನೇ ಓವರ್‌ನಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ಅದ್ಭುತ ಸಿಕ್ಸರ್ ಬಂದಿತು. ಹಸನ್ ಮಹಮೂದ್ ಎಸೆತದಲ್ಲಿ ಚೆಂಡನ್ನು ಎಳೆದ ರೋಹಿತ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು. ಅದರ ಮುಂದಿನ ಚೆಂಡು ವೈಡ್ ಆಗಿತ್ತು. ಈ ಓವರ್‌ನಲ್ಲಿ ಒಟ್ಟು ಏಳು ರನ್‌ಗಳು ಬಂದವು
ಆರನೇ ಓವರ್‌ನಲ್ಲಿ ಮೆಹದಿ ಹಸನ್ ಭಾರತಕ್ಕೆ ಮೊದಲ ಹೊಡೆತ ನೀಡಿದರು. ಧವನ್, ಹಸನ್ ಮಿರಾಜ್ ವಿರುದ್ಧ ಆಡಲು ತೊಂದರೆ ಪಡುತ್ತಿದ್ದರು ಮತ್ತು ಒತ್ತಡದಲ್ಲಿದ್ದರು. ಇದರ ಲಾಭವನ್ನು ಮೆಹದಿ ಹಸನ್ ಪಡೆದರು. ಧವನ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸುತ್ತಿದ್ದರು ಆದರೆ ಚೆಂಡು ಕೈಗೆ ಬಡಿದ ನಂತರ ಸ್ಟಂಪ್‌ಗೆ ಬಡಿಯಿತು. ಧವನ್ 17 ಎಸೆತಗಳಲ್ಲಿ 7 ರನ್ ಗಳಿಸಿ ಮರಳಿದರು.
4 ಓವರ್‌ಗಳ ಆಟ ಮುಗಿದಿದೆ. ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ. ರೋಹಿತ್ 6 ಮತ್ತು ಶಿಖರ್ ಧವನ್ 6 ರನ್ ಗಳಿಸಿ ಆಡುತ್ತಿದ್ದಾರೆ.
ಮೂರನೇ ಓವರ್‌ಗೆ ಬಂದ ಮುಸ್ತಫಿಜುರ್ ಈ ಬಾರಿ ಐದು ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ, ಶಿಖರ್ ಧವನ್ ಏರಿಯಲ್ ಶಾಟ್ ಆಡಿ ಕವರ್ ಮೇಲೆ ಬೌಂಡರಿ ಬಾರಿಸಿದರು. ಧವನ್ ಅವರ ಟೈಮಿಂಗ್ ಅತ್ಯುತ್ತಮವಾಗಿತ್ತು
ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೆ ನೀಡಿದ್ದು, ”ಬಿಸಿಸಿಐ ವೈದ್ಯಕೀಯ ತಂಡದೊಂದಿಗೆ ಸಮಾಲೋಚನೆ ನಡೆಸಿ ರಿಷಬ್ ಪಂತ್ ಅವರನ್ನು ಏಕದಿನ ತಂಡದಿಂದ ಬಿಡುಗಡೆ ಮಾಡಲಾಗಿದೆ. ಅವರು ಟೆಸ್ಟ್ ಸರಣಿ ಆರಂಭ ಆಗುವ ಹೊತ್ತಿಗೆ ತಂಡ ಸೇರಿಕೊಳ್ಳಲಿದ್ದಾರೆ,” ಎಂದು ಬರೆದುಕೊಂಡಿದೆ. ಹಾಗೆಯೆ ರಿಷಭ್ ಪಂತ್ ಜಾಗಕ್ಕೆ ಯಾವುದೇ ಬದಲಿ ಆಟಗಾರ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಪಂತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಪರ ರೋಹಿತ್-ಧವನ್ ಕಣಕ್ಕಿಳಿದಿದ್ದು, ಬಾಂಗ್ಲಾ ಪರ ಮುಸ್ತಫಿಜುರ್ ರೆಹಮಾನ್ ಆರಂಭಿಸಿದರು. ಈ ಓವರ್ನಲ್ಲಿ ಟೀಂ ಇಂಡಿಯಾ 1 ರನ್ ಕಲೆಹಾಕಿತು.
ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಎಂಎಚ್ ಮಿರಾಜ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಇಬಾದತ್ ಹೊಸೈನ್
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 11:02 am, Sun, 4 December 22