
ಭಾರತ ಮತ್ತು ಇಂಗ್ಲೆಂಡ್ (India vs England ODI) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 233 ರನ್‌ಗಳಿಗೆ ಆಲೌಟ್ ಆಗಿದೆ. ತಂಡಕ್ಕೆ ಉತ್ತಮ ಆರಂಭ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಆಲ್‌ರೌಂಡರ್‌ಗಳ ಕಳಪೆ ಬ್ಯಾಟಿಂಗ್ನಿಂದಾಗಿ ಈ ಪಂದ್ಯದಲ್ಲಿ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ 44 ಓವರ್ಗಳಿಗೆ ಆಲೌಟ್ ಆಯಿತು. ತಂಡದ ಪರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ನಾಯಕ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನೀಡಿದರು. ಶುಭ್ಮನ್ ಗಿಲ್ 31 ರನ್‌ಗಳಿಗೆ ಔಟಾದರೆ, ರೋಹಿತ್ ಶರ್ಮಾ ಕೂಡ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 47 ಎಸೆತಗಳಲ್ಲಿ 26 ರನ್‌ಗಳಿಗೆ ಔಟಾದರು. ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 60 ರನ್‌ಗಳ ಜೊತೆಯಾಟವಾಡಿದರು. ಕೆಎಲ್ ರಾಹುಲ್ ಬದಲಿಗೆ ಬಂದ ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಕೇವಲ 1 ರನ್‌ಗೆ ಕೊನೆಗೊಂಡಿತು. ಅದಾದ ನಂತರ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ತಂಡದ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ವಿರಾಟ್ ಕೊಹ್ಲಿ ಔಟಾಗುವುದರ ಜೊತೆಗೆ ತಂಡದ ಬ್ಯಾಟಿಂಗ್ ಕುಸಿಯಲು ಪ್ರಾರಂಭಿಸಿತು.
IND vs ENG: ಶತಕದ ಪಂದ್ಯದಲ್ಲಿ 78ನೇ ಏಕದಿನ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ಅದರಲ್ಲೂ ಕಳೆದ ಪಂದ್ಯದಲ್ಲಿ ಮಿಂಚಿದ್ದ ಆಲ್‌ರೌಂಡರ್ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲಿ 5 ಎಸೆತಗಳಲ್ಲಿ 2 ರನ್ಗಳಿಸಿ ಔಟಾದರೆ, ಅಕ್ಷರ್ ಪಟೇಲ್ ಅವರ ಇನ್ನಿಂಗ್ಸ್ ಕೂಡ 1 ರನ್‌ಗೆ ಅಂತ್ಯವಾಯಿತು. ಆ ಬಳಿಕ ಬಂದ ಶಿವಂ ದುಬೆಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಗುರ್ನೂರ್ ಬ್ರಾರ್ 7 ರನ್ ಗಳಿಸಿ ಟೆಂಟ್‌ಗೆ ಮರಳಿದರೆ, ಪ್ರಸಿದ್ಧ್ ಕೃಷ್ಣಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಜಸ್ಪ್ರೀತ್ ಬುಮ್ರಾ 13 ಎಸೆತಗಳಲ್ಲಿ ಅಜೇಯ 20 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು.
Published On - 9:21 pm, Thu, 16 July 26