India vs England 2nd Test: ಉಭಯ ತಂಡಗಳಿಗೂ ಬಿಗ್ ಶಾಕ್: ಇಬ್ಬರು ಆಟಗಾರರು ಔಟ್

| Updated By: ಝಾಹಿರ್ ಯೂಸುಫ್

Updated on: Aug 11, 2021 | 4:11 PM

India vs England 2nd Test: ಯುಕೆ ಮಾಧ್ಯಮ ವರದಿಗಳ ಪ್ರಕಾರ, ಅಭ್ಯಾಸ ವೇಳೆ ಗಾಯಗೊಂಡಿರುವ ಸ್ಟುವರ್ಟ್ ಬ್ರಾಡ್ ತನ್ನ ಬಲ ಕಾಲಿನ ಮೇಲೆ ಒತ್ತಡ ಹಾಕಲು ಸಾಧ್ಯವಾಗುತ್ತಿಲ್ಲ.

India vs England 2nd Test: ಉಭಯ ತಂಡಗಳಿಗೂ ಬಿಗ್ ಶಾಕ್: ಇಬ್ಬರು ಆಟಗಾರರು ಔಟ್
india vs england 2nd Test
Follow us on

ಭಾರತ ಮತ್ತು ಇಂಗ್ಲೆಂಡ್ (India vs England 2nd Test) ನಡುವಣ ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ (ಆಗಸ್ಟ್​ 12) ಲಾರ್ಡ್ಸ್ ನಲ್ಲಿ ಆರಂಭವಾಗಲಿದೆ. 5 ಪಂದ್ಯಗಳ ಪ್ರತಿಷ್ಠಿತ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಉಭಯ ತಂಡಗಳು ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿವೆ. ಅದರಲ್ಲೂ ಕ್ರಿಕೆಟ್ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್​ ವಿರುದ್ದ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ (Team India). ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನವೇ ಉಭಯ ತಂಡಗಳಿಗೂ ಆಘಾತ ಎದುರಾಗಿದೆ. ತಂಡದ ಪ್ರಮುಖ ಬೌಲರುಗಳಿಬ್ಬರೂ ಗಾಯಗೊಂಡಿದ್ದು, ಹೀಗಾಗಿ 2ನೇ ಪಂದ್ಯದ ವೇಳೆ ಕಣಕ್ಕಿಳಿಯುವುದು ಅನುಮಾನ. ಹೌದು, ಮೊದಲ ಟೆಸ್ಟ್​ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದ ಟೀಮ್ ಇಂಡಿಯಾ ವೇಗಿ ಶಾರ್ದುಲ್ ಠಾಕೂರ್ (Shardul Thakur) ಹಾಗೂ ಇಂಗ್ಲೆಂಡ್ ಸ್ಟಾರ್ ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಗಾಯಗೊಂಡಿದ್ದಾರೆ.

ಶಾರ್ದುಲ್ ಠಾಕೂರ್ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೆಯೇ ಸ್ಟುವರ್ಟ್ ಬ್ರಾಡ್ ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಇಬ್ಬರನ್ನು ಈಗಾಗಲೇ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕ ವರದಿ ಪ್ರಕಾರ ಇಬ್ಬರು 2ನೇ ಟೆಸ್ಟ್ ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ.

ಕ್ರಿಕೆಟ್ ಕಾಶಿಯಲ್ಲಿ 150ನೇ ಪಂದ್ಯ:
ಯುಕೆ ಮಾಧ್ಯಮ ವರದಿಗಳ ಪ್ರಕಾರ, ಅಭ್ಯಾಸ ವೇಳೆ ಗಾಯಗೊಂಡಿರುವ ಸ್ಟುವರ್ಟ್ ಬ್ರಾಡ್ ತನ್ನ ಬಲ ಕಾಲಿನ ಮೇಲೆ ಒತ್ತಡ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಬಹುದು. ಅದರಲ್ಲೂ ಕ್ರಿಕೆಟ್​ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ಬ್ರಾಡ್ ತಮ್ಮ ವೃತ್ತಿಜೀವನದ 150 ನೇ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು. ಆದರೆ ಇದೀಗ ಗಾಯಗೊಂಡಿರುವ ಕಾರಣ 2ನೇ ಟೆಸ್ಟ್​ನಲ್ಲಿ ಮಾರ್ಕ್ ವುಡ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಶಾರ್ದುಲ್ ಬದಲಿಗೆ ಯಾರು?
ದಿ ಗಾರ್ಡಿಯನ್ ವರದಿ ಪ್ರಕಾರ, ಎರಡನೇ ಟೆಸ್ಟ್‌ನಲ್ಲಿ ಶಾರ್ದುಲ್ ಠಾಕುರ್ ಆಡುವುದು ಅನುಮಾನ. ಅವರ ಬದಲಿಗೆ ಇಶಾಂತ್ ಶರ್ಮಾ ಅವರಿಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಈ ಮೂಲಕ 2ನೇ ಟೆಸ್ಟ್​ನಲ್ಲೂ ಭಾರತ 4 ವೇಗದ ಬೌಲರ್‌ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.

ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ

ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ

(India vs England 2nd Test: Shardul Thakur, Stuart Broad suffer injuries ahead of Lord’s Test)