ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ತನ್ನ ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಟೀಂ ಇಂಡಿಯಾ 26 ರನ್‌ಗಳ ಸೋಲು ಕಂಡಿದೆ. ಪಂದ್ಯದುದಕ್ಕೂ ಮಾರಕ ದಾಳಿ ನಡೆಸಿದ ಇಂಗ್ಲೆಂಡ್ ವೇಗಿಗಳು ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲನುಭವಿಸಬೇಕಾಯಿತು. ಆದರೆ ರಾಜ್ ಕೋಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-2ಕ್ಕೆ ತಂದು ನಿಲ್ಲಿದೆ.
ರಾಜ್‌ಕೋಟ್ ಟಿ20ಯಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. 172 ರನ್‌ಗಳ ಗುರಿಗೆ ಉತ್ತರವಾಗಿ ಭಾರತ ತಂಡ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಸದ್ಯ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.
ಹಾರ್ದಿಕ್ ಪಾಂಡ್ಯ ಕೂಡ ಔಟಾಗಿದ್ದಾರೆ. ಜೇಮಿ ಓವರ್ಟನ್ ಓವರ್‌ನಲ್ಲಿ 40 ರನ್ ಗಳಿಸಿದ್ದ ಪಾಂಡ್ಯ ಔಟಾದರು. ಇದೀಗ ಭಾರತದ ಸೋಲು ಖಚಿತವಾಗಿದೆ.
ಟೀಂ ಇಂಡಿಯಾ ಗೆಲುವಿನಿಂದ ಬಹಳ ದೂರದಲ್ಲಿದೆ. 16 ಓವರ್‌ಗಳಲ್ಲಿ 108 ರನ್ ಮಾತ್ರ ಕಲೆಹಾಕಿದೆ. ಈಗ ಕೊನೆಯ ನಾಲ್ಕು ಓವರ್‌ಗಳಲ್ಲಿ 64 ರನ್‌ಗಳ ಅಗತ್ಯವಿದೆ.
ಟೀಂ ಇಂಡಿಯಾಗೆ 7 ಓವರ್‌ಗಳಲ್ಲಿ 86 ರನ್‌ಗಳ ಅಗತ್ಯವಿದೆ. ಹಾರ್ದಿಕ್ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ.
ಭಾರತ ತಂಡ ಐದನೇ ವಿಕೆಟ್ ಕಳೆದುಕೊಂಡಿದೆ. ವಾಷಿಂಗ್ಟನ್ ಸುಂದರ್ 6 ರನ್ ಗಳಿಸಿ ಔಟಾದರು. ಓವರ್ಟನ್ ವಿಕೆಟ್ ಪಡೆದರು.
10 ಓವರ್‌ಗಳು ಮುಗಿದಿವೆ. ಭಾರತ ತಂಡ 78 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದೆ. ಕೊನೆಯ 10 ಓವರ್‌ಗಳಲ್ಲಿ 94 ರನ್‌ಗಳ ಅಗತ್ಯವಿದೆ.
8ನೇ ಓವರ್ ನಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಭಾರತಕ್ಕೆ ದೊಡ್ಡ ಹೊಡೆತ ನೀಡಿದರು. ತಿಲಕ್ ವರ್ಮಾ 18 ರನ್ ಗಳಿಸಿ ಔಟಾದರು.
ಪವರ್‌ಪ್ಲೇಯಲ್ಲಿ ಭಾರತ ತಂಡ 51 ರನ್ ಗಳಿಸಲಷ್ಟೇ ಶಕ್ತವಾಗಿ ಮೂರು ವಿಕೆಟ್‌ಗಳು ಬಿದ್ದವು. ಮೊದಲ 6 ಓವರ್‌ಗಳಲ್ಲಿ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್‌ಗಳು ಪತನಗೊಂಡವು.
ನಾಯಕ ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿ ಔಟಾದರು. ಮಾರ್ಕ್ ವುಡ್ ಅವರ ವಿಕೆಟ್ ಪಡೆದರು. ಸೂರ್ಯಕುಮಾರ್ ಯಾದವ್ ಸತತ ಮೂರನೇ ಪಂದ್ಯದಲ್ಲೂ ವಿಫಲರಾದರು.
ಅಭಿಷೇಕ್ ಶರ್ಮಾ ಔಟ್…ಬ್ರೈಡನ್ ಕಾರ್ಸೆ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ಅಭಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ವಿಫಲರಾದರು. ಜೋಫ್ರಾ ಆರ್ಚರ್ ಅಚ್ಚರಿಯ ಕ್ಯಾಚ್ ಪಡೆದರು.
ಸಂಜು ಸ್ಯಾಮ್ಸನ್ 3 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಸತತ ಮೂರನೇ ಬಾರಿ ವಿಫಲರಾದರು. ಸ್ಯಾಮ್ಸನ್ ನಿರಂತರವಾಗಿ ಶಾರ್ಟ್ ಪಿಚ್ ಎಸೆತಗಳಲ್ಲಿ ಔಟ್ ಆಗುತ್ತಿದ್ದಾರೆ.
ರಾಜ್‌ಕೋಟ್ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತಕ್ಕೆ 172 ರನ್ ಟಾರ್ಗೆಟ್ ನೀಡಿದೆ. ಇಂಗ್ಲೆಂಡ್ ಪರ ಬೆನ್ ಡಕೆಟ್ 51 ರನ್ ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಲಿಯಾಮ್ ಲಿವಿಂಗ್‌ಸ್ಟನ್ ಕೂಡ 43 ರನ್‌ಗಳ ಕಾಣಿಕೆ ನೀಡಿದರು, ಉಳಿದಂತೆ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 24 ರನ್ ನೀಡಿ 5 ವಿಕೆಟ್ ಕಬಳಿಸಿ, ತಮ್ಮ T20 ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಐದು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಚಕ್ರವರ್ತಿ ರಾಜ್‌ಕೋಟ್‌ನಲ್ಲಿ ಜೋಸ್ ಬಟ್ಲರ್, ಜೇಮಿ ಸ್ಮಿತ್, ಜೇಮಿ ಓವರ್ಟನ್, ಕಾರ್ಸೆ ಮತ್ತು ಆರ್ಚರ್ ಅವರ ವಕೆಟ್ ಪಡೆದರು.
ಲಿವಿಂಗ್ಸ್ಟನ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯ ಓವರ್‌ನಲ್ಲಿ 24 ಎಸೆತಗಳಲ್ಲಿ 43 ರನ್ ಗಳಿಸಿ ಔಟಾದರು.
ರವಿ ಬಿಷ್ಣೋಯ್ ಅವರ ಓವರ್‌ನಲ್ಲಿ ಲಿವಿಂಗ್‌ಸ್ಟನ್ 3 ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 19 ರನ್‌ಗಳು ಬಂದವು. ಇಂಗ್ಲೆಂಡ್ 150ರ ಸಮೀಪ ತಲುಪಿತು.
ವರುಣ್ ಚಕ್ರವರ್ತಿ, ಜೋಫ್ರಾ ಆರ್ಚರ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪೂರೈಸಿದರು. ಅಂತರಾಷ್ಟ್ರೀಯ ಟಿ20ಯಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.
ವರುಣ್ ಚಕ್ರವರ್ತಿ ಮತ್ತೊಂದು ವಿಕೆಟ್ ಪಡೆದರು. ಮೊದಲು ಜೆಮಿ ಸ್ಮಿತ್ರನ್ನು ಔಟ್ ಮಾಡಿದ್ದ ಅವರು ನಂತರದ ಎಸೆತದಲ್ಲಿ ಜೇಮಿ ಓವರ್ಟನ್ರನ್ನು ಬೌಲ್ಡ್ ಮಾಡಿದರು. ಎರಡು ಎಸೆತಗಳಲ್ಲಿ ಎರಡು ವಿಕೆಟ್.
ಮೊದಲೆರಡು ಟಿ20ಯಲ್ಲಿ ವಿಫಲರಾಗಿದ್ದ ಹ್ಯಾರಿ ಬ್ರೂಕ್ ಮತ್ತೊಮ್ಮೆ ವಿಫಲರಾಗಿದ್ದಾರೆ. ಮೂರನೇ ಟಿ20ಯಲ್ಲಿ ಬ್ರೂಕ್ ಬಿಷ್ಣೋಯ್ ಎಸೆತದಲ್ಲಿ ಬೌಲ್ಡ್ ಆದರು.
ಅಕ್ಷರ್ ಪಟೇಲ್ ತಮ್ಮ ಮೂರನೇ ಓವರ್‌ನಲ್ಲಿ 10 ರನ್ ಬಿಟ್ಟುಕೊಟ್ಟರು. ಲಿಯಾಮ್ ಲಿವಿಂಗ್ಸ್ಟನ್ ಈ ಓವರ್‌ನಲ್ಲಿ ದೀರ್ಘ ಸಿಕ್ಸರ್ ಬಾರಿಸಿದರು. ಇಂಗ್ಲೆಂಡ್ ಸ್ಕೋರ್ 12 ಓವರ್ ಗಳಲ್ಲಿ 100ರ ಗಡಿ ದಾಟಿದೆ.
ಬೆನ್ ಡಕೆಟ್ 28 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಸುಲಭ ಕ್ಯಾಚ್ ಪಡೆದರು.
ಬೆನ್ ಡಕೆಟ್ 26 ಎಸೆತಗಳಲ್ಲಿ ತಮ್ಮ T20 ವೃತ್ತಿಜೀವನದ ಎರಡನೇ ಅರ್ಧಶತಕ ದಾಖಲಿಸಿದರು.
ವರುಣ್ ಚಕ್ರವರ್ತಿ ಟೀಂ ಇಂಡಿಯಾಗೆ ಎರಡನೇ ಯಶಸ್ಸನ್ನು ತಂದುಕೊಟ್ಟರು. ಜೋಸ್ ಬಟ್ಲರ್ 22 ಎಸೆತಗಳಲ್ಲಿ 24 ರನ್ ಗಳಿಸಲಷ್ಟೇ ಶಕ್ತರಾದರು. ಇಂಗ್ಲೆಂಡ್‌ಗೆ ದೊಡ್ಡ ಹೊಡೆತ
ವರುಣ್ ಚಕ್ರವರ್ತಿ ಪವರ್‌ಪ್ಲೇಯ ಕೊನೆಯ ಓವರ್ ಬೌಲ್ ಮಾಡಿ ಕೇವಲ 3 ರನ್ ನೀಡಿದರು. ಪವರ್‌ಪ್ಲೇಯಲ್ಲಿ ಇಂಗ್ಲೆಂಡ್ ತಂಡ 52 ರನ್ ಗಳಿಸಿದೆ.
ಹಾರ್ದಿಕ್ ಪಾಂಡ್ಯ ಅವರ ಓವರ್‌ನಲ್ಲಿ ಬೆನ್ ಡಕೆಟ್ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ಈ ಬ್ಯಾಟ್ಸ್‌ಮನ್ ಶಮಿ ಎಸೆತದಲ್ಲಿ ಸಿಕ್ಸರ್ ಕೂಡ ಬಾರಿಸಿದ್ದರು. ಇಂಗ್ಲೆಂಡ್ ಸ್ಕೋರ್ 4 ಓವರ್ ಗಳಲ್ಲಿ 34 ರನ್.
ಏಳು ರನ್‌ಗಳ ಸ್ಕೋರ್‌ನಲ್ಲಿ ಇಂಗ್ಲೆಂಡ್‌ಗೆ ಮೊದಲ ಹೊಡೆತ ಬಿದ್ದಿತು. ಹಾರ್ದಿಕ್ ಪಾಂಡ್ಯ ಫಿಲ್ ಸಾಲ್ಟ್ ಅವರನ್ನು ಬಲಿಪಶು ಮಾಡಿದರು. ನಾಯಕ ಜೋಸ್ ಬಟ್ಲರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಇಂಗ್ಲೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಕ್ರೀಸ್‌ನಲ್ಲಿದ್ದಾರೆ. ಭಾರತದ ಪರ ಮೊಹಮ್ಮದ್ ಶಮಿ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
ಜೋಸ್ ಬಟ್ಲರ್ (ನಾಯಕ), ಬೆನ್ ಡಕೆಟ್, ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಜೇಮೀ ಸ್ಮಿತ್, ಜೇಮೀ ಓವರ್‌ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಆದಿಲ್ ರಶೀದ್.
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಧ್ರುವ ಜುರೆಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ.
ಸತತ ಮೂರನೇ ಪಂದ್ಯದಲ್ಲೂ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 6:34 pm, Tue, 28 January 25