IND vs ENG: ರೋಹಿತ್- ಜೈಸ್ವಾಲ್ ಅರ್ಧಶತಕ; 5ನೇ ಟೆಸ್ಟ್ ಮೊದಲ ದಿನ ಭಾರತದ್ದೇ ಪಾರುಪತ್ಯ
IND vs ENG: ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಸಂಪೂರ್ಣವಾಗಿ ಟೀಂ ಇಂಡಿಯಾ ಹೆಸರಿನಲ್ಲಿತ್ತು. ಈಗಾಗಲೇ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ, ಪಂದ್ಯದ ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ ಕೇವಲ 218 ರನ್ ಗಳಿಗೆ ಆಲೌಟ್ ಮಾಡಿ ನಂತರ ಉತ್ತರವಾಗಿ ಕೇವಲ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಸಂಪೂರ್ಣವಾಗಿ ಟೀಂ ಇಂಡಿಯಾ ಹೆಸರಿನಲ್ಲಿತ್ತು. ಈಗಾಗಲೇ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ, ಪಂದ್ಯದ ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ ತಂಡವನ್ನು (India vs England) ಮೊದಲ ಇನಿಂಗ್ಸ್ನಲ್ಲಿ ಕೇವಲ 218 ರನ್ ಗಳಿಗೆ ಆಲೌಟ್ ಮಾಡಿ ನಂತರ ಉತ್ತರವಾಗಿ ಕೇವಲ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ. ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್‌ಗಿಂತ 83 ರನ್ ಹಿಂದಿದೆ. ಬೌಲಿಂಗ್ನಲ್ಲಿ ಮಿಂಚಿದ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕುಲ್ದೀಪ್ ಗರಿಷ್ಠ 5 ವಿಕೆಟ್ ಪಡೆದರೆ, 100ನೇ ಟೆಸ್ಟ್ ಆಡುತ್ತಿರುವ ರವಿಚಂದ್ರನ್ ಅಶ್ವಿನ್ (Ravichandran Ashwin) ಕೂಡ 4 ವಿಕೆಟ್ ಪಡೆದರು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (57) ಹಾಗೂ ನಾಯಕ ರೋಹಿತ್ ಶರ್ಮಾ (Rohit Sharma) (ಔಟಾಗದೆ 52) ಅಜೇಯ ಅರ್ಧಶತಕ ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ರೋಹಿತ್ ಜೊತೆಗೆ ಶುಭ್ಮನ್ ಗಿಲ್ (ಔಟಾಗದೆ 26) ಕ್ರೀಸ್ ಹಂಚಿಕೊಳ್ಳಲಿದ್ದಾರೆ.
ಕುಲ್ದೀಪ್ ಅಶ್ವಿನ್ ಮ್ಯಾಜಿಕ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲ್ದೀಪ್ ಯಾದವ್ ಮತ್ತು ಆರ್ ಅಶ್ವಿನ್ ಸ್ಪಿನ್ ಜೋಡಿಯ ಮುಂದೆ ಮಂಡಿಯೂರಿತು. ಹೀಗಾಗಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 218 ರನ್‌ಗಳಿಗೆ ಕೊನೆಗೊಂಡಿತು. ಇಂಗ್ಲೆಂಡ್ ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿದ್ದು, ಸ್ಪಿನ್ ಜೋಡಿಯ ಕರಾರುವಕ್ಕಾದ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು. ಕೇವಲ 4 ವಿಕೆಟ್‌ಗೆ 175 ರನ್ ಕಲೆಹಾಕಿದ್ದ ಇಂಗ್ಲೆಂಡ್ ಆ ನಂತರ 218 ರನ್‌ಗಳಿಗೆ ಆಲೌಟ್ ಆಯಿತು.
IND vs ENG: 5 ವಿಕೆಟ್ ಉರುಳಿಸಿ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಕುಲ್ದೀಪ್ ಯಾದವ್..!
43 ರನ್‌ಗಳಿಗೆ 7 ವಿಕೆಟ್
ವಾಸ್ತವವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್‌ನ ಆರಂಭ ಅದ್ಭುತವಾಗಿತ್ತು. ಬೆನ್ ಡಕೆಟ್ ಮತ್ತು ಝಾಕ್ ಕ್ರೌಲಿ ಇಬ್ಬರೂ 64 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ಬೆನ್ ಡಕೆಟ್ 27 ರನ್ ಗಳಿಸಿ ಔಟಾದರು. ನಂತರ ಒಲಿ ಪೋಪ್ ರೂಪದಲ್ಲಿ ಇಂಗ್ಲೆಂಡ್ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಅರ್ಧಶತಕ ಸಿಡಿಸಿದ್ದ ಝಾಕ್ ಕ್ರೌಲಿ ವಿಕೆಟ್ನೊಂದಿಗೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತ್ತು. ಆದರೆ ಕ್ರೌಲಿ ಔಟಾದ ನಂತರ ಇಂಗ್ಲೆಂಡ್ ತಂಡದ ಕುಸಿತ ಆರಂಭವಾಗಿ ನಂತರದ 7 ವಿಕೆಟ್‌ಗಳನ್ನು 43 ರನ್‌ಗಳಿಗೆ ಕಳೆದುಕೊಂಡಿತು.
5 ವಿಕೆಟ್ ಉರುಳಿಸಿದ ಕುಲ್ದೀಪ್
100ನೇ ಟೆಸ್ಟ್ ಪಂದ್ಯವನ್ನು ಆಡಿದ ಜಾನಿ ಬೈರ್ಸ್ಟೋವ್ 29, ಜೋ ರೂಟ್ 26, ಕ್ಯಾಪ್ಟನ್ ಬೆನ್ ಸ್ಟೋಕ್ಸ್ 0, ಟಾಮ್ ಹಾರ್ಟ್ಲಿ 6, ಮಾರ್ಕ್ ವುಡ್ 0, ಬೆನ್ ಫೋಕ್ಸ್ 24 ಮತ್ತು ಜೇಮ್ಸ್ ಆಂಡರ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಶೋಯೆಬ್ ಬಶೀರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಕುಲ್ದೀಪ್ ಯಾದವ್ ಟೀಂ ಇಂಡಿಯಾ ಪರ ಅತಿ ಹೆಚ್ಚು 5 ವಿಕೆಟ್ ಪಡೆದ ಸಾಧನೆ ಮಾಡಿದರೆ, 100ನೇ ಪಂದ್ಯ ಆಡಿದ ಆರ್ ಅಶ್ವಿನ್ ಕೂಡ 4 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Thu, 7 March 24
