India vs England: ಬ್ಯಾಟ್ ಮಾಡುತ್ತಿದ್ದ ಪಂತ್​ಗೆ ಕೊಹ್ಲಿಯಿಂದ ಸಿಗ್ನಲ್: ದಿನದಾಟವನ್ನೇ ಅಂತ್ಯಗೊಳಿಸಿದ ಅಂಪೈರ್

ಇದಾದ ಮುಂದಿನ ಎಸೆತದಲ್ಲೇ ಅಂಪೈರ್ ನಾಲ್ಕನೇ ದಿನದಾಟವನ್ನು ಕೊನೆಗೊಳಿಸಿದರು. ಸದ್ಯ ಬಾಲ್ಕನಿಯಲ್ಲಿದ್ದ ಕೊಹ್ಲಿ ಮೈದಾನಕ್ಕೆ ಪಾಸ್ ಮಾಡಿದ ಮೆಸೇಜ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

India vs England: ಬ್ಯಾಟ್ ಮಾಡುತ್ತಿದ್ದ ಪಂತ್​ಗೆ ಕೊಹ್ಲಿಯಿಂದ ಸಿಗ್ನಲ್: ದಿನದಾಟವನ್ನೇ ಅಂತ್ಯಗೊಳಿಸಿದ ಅಂಪೈರ್
Virat Kohli
Updated By: Vinay Bhat

Updated on: Aug 16, 2021 | 7:22 AM

ವಿಶ್ವ ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ಸಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 154 ರನ್​ಗಳ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ (Team India) 6 ವಿಕೆಟ್​ಗಳನ್ನು ಕಳೆದುಕೊಂಡಿದೆ. ಇಂದು ಅಂತಿಮ ದಿನವಾಗಿದ್ದು ಎಷ್ಟು ರನ್​ಗಳ ಟಾರ್ಗೆಟ್ ನೀಡುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಅಥವಾ ಡ್ರಾ ಸಾಧಿಸಲು ಪ್ಲಾನ್ ಮಾಡುತ್ತಾ ಎಂಬುದು ನೋಡಬೇಕಿದೆ. ರಿಷಭ್ ಪಂತ್ (Rishabh Pant) ಹಾಗೂ ಇಶಾಂತ್ ಶರ್ಮಾ ಕ್ರೀಸ್​ನಲ್ಲಿದ್ದಾರೆ.

ಭಾನುವಾರ ಮಂದ ಬೆಳಕಿನಿಂದಾಗಿ ನಾಲ್ಕನೆ ದಿನದಾಟವನ್ನು ಕೊಂಚ ಬೇಗ ಅಂತ್ಯಗೊಳಿಸಲಾಯಿತು. ಆದರೆ, ಅಂಪೈರ್ ಇದನ್ನು ಘೋಷಿಸುವ ಮುನ್ನ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ನಡುವಣ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾರತ ಬ್ಯಾಟಿಂಗ್​ನ ಎರಡನೇ ಇನ್ನಿಂಗ್ಸ್​ನಲ್ಲಿ 82ನೇ ಓವರ್ ಬೌಲಿಂಗ್ ಮಾಡುತ್ತಿರುವಾಗ ಕೊಹ್ಲಿ ಅವರು ಬಾಲ್ಕನಿಯಲ್ಲಿ ಕೂತು ಪಂತ್ ಕಡೆ ಕೈ ಮೇಲೆ ಮಾಡಿ ಸಿಗ್ನಲ್ ಮಾಡುತ್ತಾರೆ, ಈ ಸಂದರ್ಭ ಅಲ್ಲೇ ಇದ್ದ ರೋಹಿತ್ ಶರ್ಮಾ ಕೂಡ ಇವರಿಗೆ ಸಾತ್ ನೀಡುತ್ತಾರೆ. ಮಂದ ಬೆಳಕು ಆವರಿಸಿದೆ ಲೈಟ್ ಇಲ್ಲದೆ ನೀವು ಹೇಗೆ ಆಡುತ್ತೀರಿ? ಅಂಪೈರ್ ಬಳಿ ಮಾತನಾಡು ಎಂದು ಪಂತ್​ಗೆ ಕೊಹ್ಲಿ ಕೈ ಸನ್ನೆಯಲ್ಲಿ ಹೇಳುತ್ತಿರುವಂತಿದೆ.

ಇದಾದ ಮುಂದಿನ ಎಸೆತದಲ್ಲೇ ಅಂಪೈರ್ ನಾಲ್ಕನೇ ದಿನದಾಟವನ್ನು ಕೊನೆಗೊಳಿಸಿದರು. ಸದ್ಯ ಬಾಲ್ಕನಿಯಲ್ಲಿದ್ದ ಕೊಹ್ಲಿ ಮೈದಾನಕ್ಕೆ ಪಾಸ್ ಮಾಡಿದ ಮೆಸೇಜ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

 

ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್​ನಂತೆ ಉತ್ತಮ ಆರಂಭ ಪಡೆದುಕೊಳ್ಳಿಲ್ಲ. ಓಪನರ್​ಗಳಾದ ಕೆ. ಎಲ್ ರಾಹುಲ್ 5 ಹಾಗೂ ರೋಹಿತ್ ಶರ್ಮಾ 21 ರನ್​ಗೆ ಬೇಗನೆ ಔಟ್ ಆದರು. ನಾಯಕ ವಿರಾಟ್ ಕೊಹ್ಲಿ ಕೂಡ 20 ರನ್​ಗೆ ಬ್ಯಾಟ್ ಕಳೆಗಿಟ್ಟರು.

ಈ ಸಂದರ್ಭ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಚೇತೇಶ್ವರ್ ಪೂಜಾರ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ ಎಚ್ಚರಿಕೆಯ ಜೊತೆಯಾಟ ಆಡಿ 100 ರನ್​ಗಳ ಕಾಣಿಕೆ ನೀಡಿತು. ಪೂಜಾರ 206 ಎಸೆತಗಳಲ್ಲಿ 45 ರನ್ ಗಳಿಸಿದರೆ, ರಹಾನೆ 146 ಎಸೆತಗಳಲ್ಲಿ 61 ರನ್​ಗೆ ಔಟ್ ಆದರು, ರವೀಂದ್ರ ಜಡೇಜಾ 3 ರನ್​ಗೆ ಬೌಲ್ಡ್ ಆದರು.

ಹೀಗೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, 29 ಎಸೆತಗಳಲ್ಲಿ 93 ರನ್! ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸುನಾಮಿ ಎಬ್ಬಿಸಿದ ಕ್ರಿಕೆಟಿಗ ಯಾರು ಗೊತ್ತಾ?

IND vs ENG: ಕ್ಯಾಮರಾದಲ್ಲಿ ಸೆರೆಯಾಯ್ತು ಇಂಗ್ಲೆಂಡ್ ಕ್ರಿಕೆಟಿಗರ ಕಳ್ಳಾಟ! ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬೀಳ್ತಾರಾ ಆಂಗ್ಲರು?

(India vs England Captain Virat Kohli signaled Rishabh Pant from Lords balcony video goes viral )