5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, 29 ಎಸೆತಗಳಲ್ಲಿ 93 ರನ್! ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸುನಾಮಿ ಎಬ್ಬಿಸಿದ ಕ್ರಿಕೆಟಿಗ ಯಾರು ಗೊತ್ತಾ?

ಸ್ಮಿತ್ ಅವರ 93 ರನ್​ಗಳಲ್ಲಿ 76 ರನ್​ಗಳು ಫೋರ್ ಮತ್ತು ಸಿಕ್ಸರ್​ನಿಂದ ಬಂದವು. ಸ್ಮಿತ್‌ನ ಬಿರುಗಾಳಿಯ ಬ್ಯಾಟಿಂಗ್‌ನೊಂದಿಗೆ, ನಮೀಬಿಯಾ ಕೊನೆಯ 46 ಎಸೆತಗಳಲ್ಲಿ 120 ರನ್ ಗಳಿಸಿತು.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, 29 ಎಸೆತಗಳಲ್ಲಿ 93 ರನ್! ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸುನಾಮಿ ಎಬ್ಬಿಸಿದ ಕ್ರಿಕೆಟಿಗ ಯಾರು ಗೊತ್ತಾ?
ಜೆಜೆ ಸ್ಮಿತ್
Follow us
TV9 Web
| Updated By: ಪೃಥ್ವಿಶಂಕರ

Updated on: Aug 15, 2021 | 8:53 PM

ಆಗಸ್ಟ್ 15 ರಂದು ಟಿ 20 ಕ್ರಿಕೆಟ್​ನಲ್ಲಿ, ರನ್​ಗಳ ಪ್ರವಾಹ ಹರಿದಿದೆ. ಐದನೇ ನಂಬರ್​ನಲ್ಲಿ ಬ್ಯಾಟಿಂಗ್​ಗೆ ಇಳಿದ ಬ್ಯಾಟ್ಸ್‌ಮನ್ ಪಂದ್ಯದಲ್ಲಿ ಅಬ್ಬರಿಸಿದರು. ಕೇವಲ 29 ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೆ ಬದಲಾಯಿಸಿದರು. ಈ ಆಟಗಾರ ನಾಲ್ಕು ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 93 ರನ್ ಗಳಿಸಿದರು. ಇದರೊಂದಿಗೆ ಅವರ ತಂಡ ನಾಲ್ಕು ವಿಕೆಟ್​ಗೆ 254 ರನ್ ಗಳಿಸಿತು. ನಂತರ ಬೌಲರ್‌ಗಳ ಬಲದ ಮೇಲೆ ತಂಡವು 132 ರನ್​ಗಳ ಭಾರೀ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳು ರನ್ ಬೆಟ್ಟದ ಮುಂದೆ ಒತ್ತಡದಲ್ಲಿ ಮಂಕಾದರು. ಅವರ ಕಡೆಯಿಂದ ಯಾವುದೇ ಬ್ಯಾಟ್ಸ್‌ಮನ್‌ 40 ರನ್ ತಲುಪಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ, ತಂಡದ ಒಬ್ಬ ಬೌಲರ್ ನಾಲ್ಕು ಓವರ್​ಗಳಲ್ಲಿ ಕೇವಲ ಐದು ರನ್ ನೀಡಿ ಒಂದು ವಿಕೆಟ್ ಪಡೆದರು. ಆದರೆ ಪಂದ್ಯದ ಹೀರೋ ಜೆಜೆ ಸ್ಮಿತ್. ಇಲ್ಲಿ ನಾವು ನಮೀಬಿಯಾ ಈಗಲ್ಸ್ ಮತ್ತು ಜಿಂಬಾಬ್ವೆ ಉದಯೋನ್ಮುಖ ಆಟಗಾರರ ನಡುವಿನ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ಇದರಲ್ಲಿ, ನಮಿಬಿಯಾದ ಸ್ಮಿತ್ 29 ಎಸೆತಗಳಲ್ಲಿ ಔಟಾಗದೆ 93 ರನ್​ಗಳ ಇನ್ನಿಂಗ್ಸ್ ಆಡಿದರು. ಇದು ಅವರ ತಂಡಕ್ಕೆ ದೊಡ್ಡ ಗೆಲುವನ್ನು ನೀಡಿತು.

ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಕ್ರೇಗ್ ವಿಲಿಯಮ್ಸ್ (77) ಮತ್ತು ಜೇನ್ ಗ್ರೀನ್ (44) ಕೇವಲ 7.3 ಓವರ್‌ಗಳಲ್ಲಿ 91 ರನ್ ಗಳಿಸಿದರು. ವಿಲಿಯಮ್ಸ್ 50 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರೆ, ಗ್ರೀನ್ 20 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 44 ರನ್ ಗಳಿಸಿದರು. ಜೆಜೆ ಸ್ಮಿತ್ ಕ್ರೀಸ್​ಗೆ ಬಂದಾಗ ನಮೀಬಿಯಾ 12.2 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತ್ತು. ಅವರ ಆಗಮನದ ನಂತರ, ಮೈದಾನದಲ್ಲಿ ರನ್​ಗಳ ಪ್ರವಾಹ ಹೆಚ್ಚಾಯ್ತು. ಸ್ಮಿತ್ ಅವರ 93 ರನ್​ಗಳಲ್ಲಿ 76 ರನ್​ಗಳು ಫೋರ್ ಮತ್ತು ಸಿಕ್ಸರ್​ನಿಂದ ಬಂದವು. ಸ್ಮಿತ್‌ನ ಬಿರುಗಾಳಿಯ ಬ್ಯಾಟಿಂಗ್‌ನೊಂದಿಗೆ, ನಮೀಬಿಯಾ ಕೊನೆಯ 46 ಎಸೆತಗಳಲ್ಲಿ 120 ರನ್ ಗಳಿಸಿತು. ತಂಡವು 20 ಓವರ್‌ಗಳ ಕೋಟಾದಲ್ಲಿ ನಾಲ್ಕು ವಿಕೆಟ್‌ಗಳಿಗೆ 254 ರನ್ ಗಳಿಸಿತು.

4 ಓವರ್‌ಗಳು 1 ಮೇಡನ್ 5 ರನ್, 3 ವಿಕೆಟ್ ಗುರಿ ಬೆನ್ನಟ್ಟಿದ ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳು ನಿಯಮಿತ ಅಂತರದಲ್ಲಿ ಔಟ್ ಆಗುತ್ತಲೇ ಇದ್ದರು. ಅವರಿಗೆ ದೊಡ್ಡ ಇನ್ನಿಂಗ್ಸ್ ಕೂಡ ಆಡಲು ಸಾಧ್ಯವಾಗಲಿಲ್ಲ. ಬ್ರಿಯಾನ್ ಚಾರಿ ಅತ್ಯಧಿಕ 33 ರನ್ ಗಳಿಸಿದರು. ಈ ರನ್ ಕೇವಲ 10 ಎಸೆತಗಳಲ್ಲಿ ಬಂದವು. ಅದರಲ್ಲಿ ಐದು ಸಿಕ್ಸರ್‌ಗಳು ಸೇರಿದ್ದವು. ಅವರನ್ನು ಹೊರತುಪಡಿಸಿ, ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು ವೇಗವಾಗಿ ಅಥವಾ ಕೊನೆಯದಾಗಿ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. 9 ನೇ ಕ್ರಮಾಂಕದ ಬ್ಯಾಟ್ಸ್ ಮನ್ ತನಕಾ ಚಿವಾಂಗಾ 21 ರನ್ ಗಳಿಸಿ ತಂಡವನ್ನು 100 ರ ಗಡಿ ದಾಟಿಸಿದರು. ಅಂತಿಮವಾಗಿ ಜಿಂಬಾಬ್ವೆಯ ಇನಿಂಗ್ಸ್ ಅನ್ನು 17 ಓವರ್ ಗಳಲ್ಲಿ 122 ರನ್ ಗಳಿಗೆ ಇಳಿಸಲಾಯಿತು. ನಮೀಬಿಯಾ ಪರ, ಜೇನ್ ನಿಕೋಲ್ ಲೋಫ್ಟಿ-ಈಟನ್ ಐದು ರನ್ ಗೆ ಮೂರು ವಿಕೆಟ್ ಪಡೆದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ