Jarvo 69: ಟೀಮ್ ಇಂಡಿಯಾ ಅಭಿಮಾನಿಗೆ ಜೀವನ ಪರ್ಯಂತ ನಿಷೇಧ ಹೇರಿದ ಇಂಗ್ಲೆಂಡ್ ಕ್ರಿಕೆಟ್: ಯಾಕೆ ಗೊತ್ತೇ?

| Updated By: Vinay Bhat

Updated on: Aug 29, 2021 | 10:15 AM

India vs England: ಯೂಟ್ಯೂಬರ್ ಆಗಿರುವ ಡೇನಿಯಲ್ ಜಾರ್ವಿಸ್ ಉರುಫ್/‘ಜಾರ್ವೋ 69’ ಹೆಸರಿನ ವ್ಯಕ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಮತ್ತು ಮೂರನೇ ಟೆಸ್ಟ್‌ ಪಂದ್ಯಗಳ ವೇಳೆ ಆಟದ ಮಧ್ಯೆ ಮೈದಾನಕ್ಕೆ ಪ್ರವೇಶಿಸಿದ್ದರು.

Jarvo 69: ಟೀಮ್ ಇಂಡಿಯಾ ಅಭಿಮಾನಿಗೆ ಜೀವನ ಪರ್ಯಂತ ನಿಷೇಧ ಹೇರಿದ ಇಂಗ್ಲೆಂಡ್ ಕ್ರಿಕೆಟ್: ಯಾಕೆ ಗೊತ್ತೇ?
Virat Kohli and Jarvo 69
Follow us on

ಲೀಡ್ಸ್​ನ ಹೆಡಿಂಗ್ಲೇ ಮೈದಾನದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲುಕಂಡಿತು. ಇನ್ನಿಂಗ್ಸ್ ಹಾಗೂ 76 ರನ್​ಗಳ ಗೆಲುವು ದಾಖಲಿಸಿದ ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಈ ನಡುವೆ ಇಂಗ್ಲೆಂಡ್ ಕ್ರಿಕೆಟ್ ತನ್ನದೇ ದೇಶದ ಭಾರತದ ಅಭಿಮಾನಿಯೋರ್ವನಿಗೆ ಜೀವನ ಪರ್ಯಂತ ನಿಷೇಧ ಹೇರಿದೆ. ಮೂರನೇ ಟೆಸ್ಟ್​ನಲ್ಲಿ (3rd Test) ಭಾರತದ ಪರ ಬ್ಯಾಟಿಂಗ್ ಮಾಡಲು ಪ್ಯಾಡ್ ಕಟ್ಟಿ ಮೈದಾನಕ್ಕಿಳಿದಿದ್ದ ಜಾರ್ವೋ 69ಗೆ (Jarvo 69) ಇಂಗ್ಲೀಷ್ ಕೌಂಟಿ ಯಾರ್ಕ್‌ಷೈರ್ ನಿಷೇಧ ಹೇರಿದೆ.

ಯೂಟ್ಯೂಬರ್ ಆಗಿರುವ ಡೇನಿಯಲ್ ಜಾರ್ವಿಸ್ ಉರುಫ್/‘ಜಾರ್ವೋ 69’ ಹೆಸರಿನ ವ್ಯಕ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಮತ್ತು ಮೂರನೇ ಟೆಸ್ಟ್‌ ಪಂದ್ಯಗಳ ವೇಳೆ ಆಟದ ಮಧ್ಯೆ ಮೈದಾನಕ್ಕೆ ಪ್ರವೇಶಿಸಿ ಗೊಂದಲ ಸೃಷ್ಠಿಸಿದ್ದರು. ವಿಶೇಷವಾದ ಸಂಗತಿಯೆಂದರೆ ಈ ವ್ಯಕ್ತಿ ಎರಡೂ ಸಾರಿಯೂ ಟೀಮ್ ಇಂಡಿಯಾ ನಕಲಿ ಜೆರ್ಸಿಯೊಂದಿಗೆ ಮೈದಾನಕ್ಕೆ ಪ್ರವೇಶಿಸಿ ಭಾರತದ ಪರ ಆಡುವುದಾಗಿ ಹೇಳಿದ್ದರು.

ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ಜೆರ್ಸಿ ಧರಿಸಿ ಮೈದಾನಕ್ಕೆ ನುಗ್ಗಿ ಫೀಲ್ಡಿಂಗ್ ಮಾಡಲು ಜಾರ್ವೋ ಮುಂದಾಗಿದ್ದರು.ಇದಾಗಿ ಲೀಡ್ಸ್ ಪಂದ್ಯದ ವೇಳೆ ಶುಕ್ರವಾರ ಆಟದ ಮಧ್ಯದಲ್ಲಿ ನುಗ್ಗಿ ಬ್ಯಾಟಿಂಗ್‌ ಮಾಡಲು ಮುಂದಾಗಿದ್ದರು. ರೋಹಿತ್ ಶರ್ಮಾ ಅರ್ಧ ಶತಕ ಬಾರಿಸಿ ಪೆವಿಲಿಯನ್‌ಗೆ ನಿರ್ಗಮಿಸುತ್ತಿರುವಾಗ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ ಜಾರ್ವೋ ಬ್ಯಾಟಿಂಗ್‌ ಮಾಡಲು ಯತ್ನಿಸಿದ್ದರು. ಈ ಸಂದರ್ಭ ಬ್ಯಾಟಿಂಗ್‌ಗಾಗಿ ಸಜ್ಜಾಗಿದ್ದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಒಮ್ಮೆ ಇದು ಯಾರೆಂದು ಶಾಕ್ ಆಗಿದ್ದು ಸುಳ್ಳಲ್ಲ.

 

ತಾನೇ ಬ್ಯಾಟಿಂಗ್ ಮಾಡಲು ಮುಂದಿನ ಪ್ಲೇಯರ್‌ ಎಂಬ ರೀತಿಯಲ್ಲಿ ಬಿಂದಾಸ್‌ ಆಗಿ ಪಿಚ್​ಗೆ ಎಂಟ್ರಿ ಕೊಟ್ಟಿದ್ದ ಜಾರ್ವೋ ಅವರನ್ನು ತಕ್ಷಣ ಅಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ‘ಹೌದು ಡೇನಿಯಲ್ ಜಾರ್ವಿಸ್ ಎಂಬಾತನನ್ನು ಹೆಡಿಂಗ್ಲೆ ಮೈದಾನದಿಂದ ಜೀವಮಾನ ನಿಷೇಧ ಹೇರಲಾಗಿದೆ. ಜತೆಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುವುದು’ ಎಂದು ಯಾರ್ಕ್‌ಷೈರ್ ಸಿಸಿಸಿ ಕ್ರೀಡಾ ವಕ್ತಾರ ತಿಳಿಸಿದ್ದಾರೆ.

ಜಾರ್ವೋ ಮಾಡಿದ ಈ ತಮಾಷೆಯ ಸಂಗತಿ ಯಾರಿಗೂ ನೋವುಂಟು ಮಾಡಿಲ್ಲ. ಟೀಮ್ ಇಂಡಿಯಾದ ಬಗ್ಗೆ ಅತೀವ ಅಭಿಮಾನವೇ ಏನೋ ಗೊತ್ತಿಲ್ಲ. ಭಾರತದ ಪರ ಆಡಲು ಅನಧಿಕೃತವಾಗಿ ಹೀಗೆ ಅತೀ ಉತ್ಸಾಹ ತೋರಿಸಿದ್ದಾರಷ್ಟೇ. ಸಾಮಾಜಿಕ ಜಾಲತಾಣದಲ್ಲಿ ಜಾರ್ವೋ ವರ್ತನೆಗೆ ಅನೇಕರು ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ.

 

ಆದರೆ ಕೋವಿಡ್-19 ಭೀತಿಯ ಈ ದಿನಗಳಲ್ಲಿ ಬಯೋ ಬಬಲ್ ಒಳಗೆ ಪಂದ್ಯ ನಡೆಯುತ್ತಿದ್ದಾಗ ಹೀಗೆ ಪಂದ್ಯದ ಮಧ್ಯದಲ್ಲಿ ಮೈದಾನಕ್ಕೆ ಪ್ರವೇಶಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಪರಾಧ ಹೀಗಾಗಿ ಯಾರ್ಕ್‌ಶೈಕ್ ಕೌಂಟಿ ಕ್ರಿಕೆಟ್ ಕ್ಲಬ್ ಜಾರ್ವೋ ವರ್ತನೆಯನ್ನು ಅಪರಾಧವಾಗಿ ಪರಿಗಣಿಸಿದೆ. ಕೋವಿಡ್ ಕಾಲದಲ್ಲಿ ಬಯೋಬಬಲ್ ವ್ಯಾಪ್ತಿಯಲ್ಲಿ ಹೀಗೆ ಏಕಾಏಕಿ ಮೈದಾನಕ್ಕೆ ನುಗ್ಗುವುದು ಆತಂಕಕ್ಕೆ ಕಾರಣವಾಗಿತ್ತು. ಭಾರತ ತಂಡದ ಮಾಜಿ ಆಟಗಾರರು ಈ ಕುರಿತು ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.

Ravindra Jadeja: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಮತ್ತೊಂದು ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಪದಕ: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ

(India vs England Jarvo 69 again enters field of play Stadium intruder fined and banned for life from Headingley)