India vs England: ‘ಟೀಮ್ ಇಂಡಿಯಾ ಆಟಗಾರರು ಕೆಲಸಕ್ಕೆ ಬಾರದವರು’ ಎಂದ ವಾನ್ಗೆ ಮೈಚಳಿ ಬಿಡಿಸಿದ ಅಭಿಮಾನಿಗಳು
ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಸಾಕಷ್ಟು ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಇದರ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತ ತಂಡದ ಆಟಗಾರರನ್ನು ಕೆಲಸಕ್ಕೆ ಬಾರದವರು ಎಂದು ಕಟುವಾಗಿ ಟೀಕಿಸಿದ್ದಾರೆ.
ಲೀಡ್ಸ್ನ ಹೇಡಿಂಗ್ಲೆ ಅಂಗಳದಲ್ಲಿ ಇಂಗ್ಲೆಂಡ್ (England) ವೇಗಿಗಳಿಗೆ ಬೆಂಕಿಯ ಚೆಂಡಿಗೆ ನೆಲಕಚ್ಚಿದ ಭಾರತ (India) ಇನ್ನಿಂಗ್ಸ್ ಹಾಗೂ 76 ರನ್ನುಗಳ ಸೋಲನ್ನು ಹೊತ್ತುಕೊಂಡಿದೆ. ಜೋ ರೂಟ್ (Joe Root) ಪಡೆ 1-1 ಅಂತರದಿಂದ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ನಾಲ್ಕನೆ ದಿನದಕ್ಕೇ ಪಂದ್ಯ ಮುಗಿದು ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ನಿರೀಕ್ಷೆ ಹುಟ್ಟಿಸಿದ್ದ ಚೇತೇಶ್ವರ್ ಪೂಜಾರ ಮತ್ತೆ ನಿರಾಸೆ ಮೂಡಿಸಿದರೆ, ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತದೆ ತಪ್ಪು ಮಾಡಿದರು. ಅಜಿಂಕ್ಯಾ ರಹಾನೆ ಉಪ ನಾಯಕನ ಆಟ ಆಡಲಿಲ್ಲ. ರಿಷಭ್ ಪಂತ್, ರವೀಂದ್ರ ಜಡೇಜಾ ಕೂಡ ಇಂಗ್ಲೆಂಡ್ ಬೌಲರ್ಗಳ ಪ್ಲಾನ್ಗೆ ಸಿಲುಕಿಕೊಂಡರು.
ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಸಾಕಷ್ಟು ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಇದರ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತ ತಂಡದ ಆಟಗಾರರನ್ನು ಕೆಲಸಕ್ಕೆ ಬಾರದವರು ಎಂದು ಕಟುವಾಗಿ ಟೀಕಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆ ಆಗಾಗ ತಮ್ಮದೇ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ವಾನ್ ಪಂದ್ಯದ ಫಲಿತಾಂಶದ ಬಳಿಕ ಟ್ವೀಟ್ ಮಾಡಿದ್ದಾರೆ. “ಇಂಗ್ಲೆಂಡ್ ತಂಡದಿಂದ ಅದ್ಭುತ ಪ್ರದರ್ಶನ ಮೂಡಿಬಂದಿದೆ. ಲಾರ್ಡ್ಸ್ ಟೆಸ್ಟ್ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ನಾಯಕ ಜೋ ರೂಟ್ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ. ಭಾರತ ಇದನ್ನು ಮರೆಯಲು ಇನ್ನು ಕೆಲವು ದಿನಗಳಾಗಬಹುದು. ನೀವು ನಿಜವಾಗಲೂ ಕೆಲಸಕ್ಕೆ ಬಾರದವರು’ ಎಂದು ವಾನ್ ಟ್ವೀಟ್ ಮಾಡಿದ್ದಾರೆ.
Fantastic ruthless performance from England .. that’s as good as it gets .. To do that after Lords shows great character which comes from the Skipper .. India !!!!! A few days to forget .. they really have been useless !!! #ENGvIND
— Michael Vaughan (@MichaelVaughan) August 28, 2021
ವಾನ್ ಅವರ ಈ ಟ್ವೀಟ್ ಕಂಡು ರೊಚ್ಚಿಗೆದ್ದ ಭಾರತೀಯ ಅಭಿಮಾನಿಗಳು ಭಾರತ ತಂಡವನ್ನು ಸಮರ್ಥಿಸಿಕೊಂಡಿದ್ದಾರೆ. ಅನುಪಯುಕ್ತ ಪದವನ್ನು ಕ್ರಿಕೆಟಿಗರು ಬಳಸುವುದಿಲ್ಲ, ಅಷ್ಟೇ ಅಲ್ಲದೆ ಎದುರಾಳಿ ತಂಡಗಳು ಕೂಡ ಉಪಯೋಗಿಸುವುದಿಲ್ಲ. ಬೆಳೆಯಿರಿ, ಮೈಕಲ್ ವಾನ್ ಬೆಳೆಯಿರಿ, ಇದು ಇನ್ನೂ ಮೂರನೇ ಪಂದ್ಯ ಇನ್ನೂ ಎರಡು ಪಂದ್ಯ ಬಾಕಿ ಇದೆ ಎಂದು ಭಾರತದ ಅಭಿಮಾನಿಗಳು ಸರಿಯಾಗಿ ತಿರುಗೇಟು ನೀಡಿದ್ದಾರೆ.
“Useless” is a term that one doesn’t attribute to fellow cricketers even from opposing teams! Grow up @MichaelVaughan Grow up! Just the third test! Two more to go!
— Naveen R Nair (@nav_journo) August 28, 2021
354 ರನ್ನುಗಳ ಭಾರೀ ಹಿನ್ನಡೆಯ ಬಳಿಕ ತೃತೀಯ ದಿನದಾಟದಲ್ಲಿ 2 ವಿಕೆಟಿಗೆ 215 ರನ್ ಗಳಿಸಿದ ಭಾರತ ಉತ್ತಮ ಹೋರಾಟದ ನಿರೀಕ್ಷೆ ಮೂಡಿಸಿತ್ತು. ಆದರೆ ಶನಿವಾರ ಲಂಚ್ ಒಳಗಾಗಿ ಉಳಿದ ಎಂಟೂ ವಿಕೆಟ್‌ಗಳನ್ನು 63 ರನ್ ಅಂತರದಲ್ಲಿ ಕಳೆದುಕೊಂಡಿತು. 78ರ ನಂಟನ್ನು ಮುಂದುವರಿಸಿತು. ಮೊದಲ ದಿನವೇ 78ಕ್ಕೆ ಉದುರಿ ಶರಣಾಗತಿಯ ಸೂಚನೆ ನೀಡಿದ್ದ ಕೊಹ್ಲಿ ಪಡೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 200 ರನ್ ಹೆಚ್ಚು ಗಳಿಸಿ 278ಕ್ಕೆ ಆಲೌಟ್ ಆಯಿತು.
91 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಪೂಜಾರ ಅದೇ ಮೊತ್ತಕ್ಕೆ ರಾಬಿನ್ಸನ್‌ಗೆ ಲೆಗ್ ಬಿಫೋರ್ ಆದರು (189 ಎಸೆತ, 15 ಬೌಂಡರಿ). ಕೊಹ್ಲಿ 45ರಿಂದ 55ಕ್ಕೆ ಏರಿದರು (125 ಎಸೆತ, 8 ಬೌಂಡರಿ). ರಹಾನೆ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರಿಯಿತು (10). ಪಂತ್ ಒಂದೇ ರನ್ ಮಾಡಿ ಪೆವಿಲಿಯನ್ ಸೇರಿಕೊಂಡರು. ರವೀಂದ್ರ ಜಡೇಜ ಮಾತ್ರ ಬಿರುಸಿನ ಆಟವಾಡಿ 25 ಎಸೆತಗಳಿಂದ 30 ರನ್ ಮಾಡಿದರು (6 ಫೋರ್, ಒಂದು ಸಿಕ್ಸರ್). ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಹಾಗೂ 76 ರನ್ಗಳ ಗೆಲುವು ಸಾಧಿಸಿತು.
Tokyo Paralympics: ತಾಲಿಬಾನಿಗಳ ಕಣ್ತಪ್ಪಿಸಿ ಪ್ಯಾರಾಲಿಂಪಿಕ್ಸ್ಗೆ ಹಾಜರಾದ ಅಫ್ಘಾನಿಸ್ತಾನದ ಇಬ್ಬರು ಸ್ಪರ್ಧಿಗಳು!
(India vs England Michael Vaughan labels Team India useless after England win third Test)