Tokyo Paralympics: ತಾಲಿಬಾನಿಗಳ ಕಣ್ತಪ್ಪಿಸಿ ಪ್ಯಾರಾಲಿಂಪಿಕ್ಸ್ಗೆ ಹಾಜರಾದ ಅಫ್ಘಾನಿಸ್ತಾನದ ಇಬ್ಬರು ಸ್ಪರ್ಧಿಗಳು!
Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್ -2020 ರಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಇಬ್ಬರು ಆಟಗಾರರಾದ ಜಾಕಿಯಾ ಖುದಾದಿ ಮತ್ತು ಹೊಸೈನ್ ರಸೌಲಿ ಶನಿವಾರ ಜಪಾನ್ ರಾಜಧಾನಿಗೆ ತಲುಪಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ -2020 ರಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಇಬ್ಬರು ಆಟಗಾರರಾದ ಜಾಕಿಯಾ ಖುದಾದಿ ಮತ್ತು ಹೊಸೈನ್ ರಸೌಲಿ ಶನಿವಾರ ಜಪಾನ್ ರಾಜಧಾನಿಗೆ ತಲುಪಿದ್ದಾರೆ. ತಾಲಿಬಾನ್ ಆಕ್ರಮಣದ ನಂತರ ಇಬ್ಬರು ಪ್ಯಾರಾಲಿಂಪಿಕ್ ಆಟಗಾರರನ್ನು ಆಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಎರಡು ದಿನಗಳ ಹಿಂದೆ ಹೇಳಿತ್ತು. ಇಬ್ಬರೂ ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿದ್ದರು. ಈ ವಾರ ಈ ಇಬ್ಬರೂ ಆಟಗಾರರು ಪ್ಯಾರಿಸ್‌ನ ರಾಷ್ಟ್ರೀಯ ಕ್ರೀಡಾ ಪರಿಣತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಇಬ್ಬರೂ ಆಟಗಾರರು ಟೋಕಿಯೋ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಯಸಿ ಜಪಾನ್ ತಲುಪಿದ್ದಾರೆ.
ನಿಯಮಗಳ ಪ್ರಕಾರ, ಜಾಕಿಯಾ ಮತ್ತು ಹುಸೇನ್ ಸ್ಥಳಾಂತರಿಸುವ ಮೊದಲು, 96 ಮತ್ತು 72 ಗಂಟೆಗಳಲ್ಲಿ ಎರಡು ಪಿಸಿಆರ್ ಪರೀಕ್ಷೆಗಳು ನೆಗೆಟಿವ್ ಬರಬೇಕಿತ್ತು. ಹನೆದಾ ವಿಮಾನ ನಿಲ್ದಾಣಕ್ಕೆ ಬಂದ ನಂತರ ಇಬ್ಬರನ್ನೂ ಮತ್ತೊಮ್ಮೆ ಪರೀಕ್ಷಿಸಲಾಯಿತು. ಅವರನ್ನು ಐಪಿಸಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಮತ್ತು ಐಪಿಸಿ ಅಥ್ಲೀಟ್ಸ್ ಕೌನ್ಸಿಲ್ ಅಧ್ಯಕ್ಷ ಚೆಲ್ಸಿಯಾ ಗೊಟೆಲ್ ಟೋಕಿಯೊ ಪ್ಯಾರಾಲಿಂಪಿಕ್ ಗ್ರಾಮದಲ್ಲಿ ಸ್ವಾಗತಿಸಿದರು.
ಇಡೀ ಜಗತ್ತು ಬೆಂಬಲಿಸುತ್ತದೆ ಒಲಿಂಪಿಕ್ಸ್ ಡಾಟ್ ಕಾಮ್ ವರದಿ ಮಾಡಿದಂತೆ, ಐಪಿಸಿ ಅಧ್ಯಕ್ಷ ಆಂಡ್ರ್ಯೂ ಈ ಬಗ್ಗೆ ಮಾತನಾಡಿ, 12 ದಿನಗಳ ಹಿಂದೆ ನಾವು ಅಫ್ಘಾನಿಸ್ತಾನ ಪ್ಯಾರಾಲಿಂಪಿಕ್ ತಂಡವು ಟೋಕಿಯೋಗೆ ಬರಲು ಸಾಧ್ಯವಿಲ್ಲ ಎಂದು ತಿಳಿದುಕೊಂಡೆವು. ಇದರಿಂದ ಎಲ್ಲರೂ ಅಸಮಾಧಾನಗೊಂಡರು ಮತ್ತು ಇಬ್ಬರೂ ಆಟಗಾರರು ಇದರಿಂದ ನಿರಾಶೆಗೊಂಡರು. ಈ ವಿಚಾರ ಎಲ್ಲೆಡೆ ಹಬ್ಬಿತು, ಇದರಿಂದ ಸ್ಪರ್ಧಿಗಳಿಗೆ ಜಗತ್ತಿನಾದ್ಯಂತ ಬೆಂಬಲ ಸಿಗಲು ಆರಂಭವಾಯಿತು. ಇದರಿಂದ ಇಬ್ಬರೂ ಅಫ್ಘಾನಿಸ್ತಾನದಿಂದ ಜಪಾನ್‌ಗೆ ಸುರಕ್ಷಿತವಾಗಿ ಬರಲು ಸಾಧ್ಯವಾಯಿತು. ಇವರಿಬ್ಬರೂ ಟೋಕಿಯೊ ಗೇಮ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ನಮಗೆ ತಿಳಿದಿತ್ತು. ಅದಕ್ಕಾಗಿಯೇ ಮಂಗಳವಾರ ಉದ್ಘಾಟನಾ ಸಮಾರಂಭದಲ್ಲಿ ಅಫಘಾನ್ ಧ್ವಜವನ್ನು ಪರೇಡ್‌ನಲ್ಲಿ ಹಾರಿಸಲಾಯಿತು. ಟೋಕಿಯೊ 2020 ರಲ್ಲಿ ಉಳಿದ ಆಟಗಾರರು, ನಾವು ಕೂಡ ಭರವಸೆಯನ್ನು ಬಿಟ್ಟುಕೊಡಲಿಲ್ಲ. ಮತ್ತು ಈಗ ಜಾಕಿಯಾ, ಹುಸೇನ್ 4,403 ಪ್ಯಾರಾಲಿಂಪಿಕ್ ಆಟಗಾರರೊಂದಿಗೆ ಕ್ರೀಡಾ ಗ್ರಾಮದಲ್ಲಿದ್ದಾರೆ. ಇದು ಆಟದ ಅದ್ಭುತ ಶಕ್ತಿಯನ್ನು ಹೇಳುತ್ತದೆ ಎಂದರು.
ಅಥೆನ್ಸ್ 2004 ರ ನಂತರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರ ಜಾಕಿಯಾ ಆಗಲಿದ್ದಾರೆ. ಜಾಕಿಯಾ ಕೆ 44-49 ಕೆಜಿ ತೂಕ ವಿಭಾಗದಲ್ಲಿ ಟೇಕ್ವಾಂಡೋದಲ್ಲಿ ಆಡಲಿದ್ದಾರೆ. ಅವರು ಸೆಪ್ಟೆಂಬರ್ 2 ರಂದು ಕಣಕ್ಕಿಳಿಯಲಿದ್ದಾರೆ. ಹುಸೇನ್ ಪುರುಷರ 100 ಮೀ ಟಿ 47 ರೇಸ್‌ನಲ್ಲಿ ಭಾಗವಹಿಸಬೇಕಿತ್ತು, ಆದರೆ ಈಗ ಪುರುಷರ ಟಿ 47 400 ಮೀ ಹೀಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಸೆಪ್ಟೆಂಬರ್ 3 ರಂದು ಸ್ಪರ್ಧೆಗಿಳಿಯಲಿದ್ದಾರೆ.
Published On - 10:38 pm, Sat, 28 August 21