ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಬುಧವಾರ ಆರಂಭವಾಗಿದ್ದು ಭಾರತ (India) ಊಹಿಸಲಾಗದ ರೀತಿಯ ಕಳಪೆ ಆರಂಭ ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್ ಅನ್ನು ಸಂಪೂರ್ಣವಾಗಿ ಒಂದು ದಿನವೂ ಆಡದೆ ಕೇವಲ 78 ರನ್ಗೆ ಕೊಹ್ಲಿ (Virat Kohli) ಪಡೆ ಸರ್ವಪತನ ಕಂಡಿದೆ. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 120 ರನ್ ಬಾರಿಸಿದ್ದು 42 ರನ್ ಗಳ ಮುನ್ನಡೆಯೊಂದಿಗೆ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದೆ. ಈ ಮೂಲಕ ಮೊದಲ ದಿನವೇ ರೂಟ್ (Joe Root) ಪಡೆ ಪಂದ್ಯವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಎರಡನೇ ಬಾರಿಗೆ ಟೀಮ್ ಇಂಡಿಯಾ ಅತಿ ಕಡಿಮೆ ಸ್ಕೋರ್ಗೆ ಔಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಇತ್ತ ಕ್ರೀಡಾಂಗಣದಲ್ಲೂ ಭಾರತೀಯ ಆಟಗಾರರು ಅವಮಾನ ಎದುರಿಸಬೇಕಾಯಿತು. ಆದರೆ, ಮೊಹಮ್ಮದ್ ಸಿರಾಜ್ ತಮ್ಮನ್ನು ಕೆಣಕಲು ಬಂದ ಇಂಗ್ಲೆಂಡ್ ಅಭಿಮಾನಿಗಳಿಗೆ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ಟೀಮ್ ಇಂಡಿಯಾ ಆಲೌಟ್ ಆಗಿ ಫೀಲ್ಡಿಂಗ್ಗೆ ಇಳಿದಾಗ ಗ್ಯಾಲರಿಯಲ್ಲಿ ಕೂತಿದ್ದ ಇಂಗ್ಲೆಂಡ್ ಅಭಿಮಾನಿಗಳು ಮೊಹಮ್ಮದ್ ಸಿರಾಜ್ ಬಳಿ ನಿಮ್ಮ ಸ್ಕೋರ್ ಎಷ್ಟು ಕೇಳುತ್ತಾರೆ. ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ಸಿರಾಜ್ 1-0 ಎಂದು ಕೈಯಲ್ಲಿ ಸನ್ನೆ ಮಾಡುವ ಮೂಲಕ ಉತ್ತರಿಸುತ್ತಾರೆ. ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕಾರಣ ಸಿರಾಜ್ ಈರೀತಿಯಾಗಿ ಉತ್ತರ ನೀಡಿದ್ದಾರೆ.
Mohammed Siraj signalling to the crowd “1-0” after being asked the score.#ENGvIND pic.twitter.com/Eel8Yoz5Vz
— Neelabh (@CricNeelabh) August 25, 2021
ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 40.4 ಓವರ್ನಲ್ಲಿ 78 ರನ್ಗೆ ಸರ್ವಪತನ ಕಂಡಿತು. ಭಾರತ ಪರ ರೋಹಿತ್ ಶರ್ಮಾ 19 ರನ್ ಹಾಗೂ ಅಜಿಂಕ್ಯಾ ರಹಾನೆ 18 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳ ಸ್ಕೋರ್ ಎರಡಂಕಿ ದಾಟಲಿಲ್ಲ.
— Jon | Michael | Tyrion ?? (@tyrion_jon) August 25, 2021
ಅದರಲ್ಲೂ ಭರ್ಜರಿ ಫಾರ್ಮ್ನಲ್ಲಿದ್ದ ಕೆ. ಎಲ್ ರಾಹುಲ್ ಶೂನ್ಯಕ್ಕೆ ಔಟ್ ಆದರೆ, ಚೇತೇಶ್ವರ್ ಪೂಜಾರ 1, ನಾಯಕ ವಿರಾಟ್ ಕೊಹ್ಲಿ 7, ರಿಷಭ್ ಪಂತ್ 2 ಹಾಗೂ ರವೀಂದ್ರ ಜಡೇಜಾ 4 ರನ್ಗೆ ನಿರ್ಗಮಿಸಿದ್ದು ಅತ್ಯಂತ ಹೀನಾಯ ಬ್ಯಾಟಿಂಗ್ ಪ್ರದರ್ಶನವಾಗಿದೆ. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಹಾಗೂ ಕ್ರೈಗ್ ಓವರ್ಒನ್ ತಲಾ ವಿಕೆಟ್ ಕಿತ್ತರು.
ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು ಅಮೋಘವಾಗಿ ಆರಂಭಿಸಿದೆ. ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 120 ರನ್ ಬಾರಿಸಿ, 42 ರನ್ಗಳ ಮುನ್ನಡೆ ಸಾಧಿಸಿದೆ. ರಾರಿ ಬರ್ನ್ಸ್ 52 ಹಾಗೂ ಹಸೀಬ್ ಹಮೀದ್ 60 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
India vs England: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ತಕ್ಷಣ ಜೇಮ್ಸ್ ಆ್ಯಂಡರ್ಸನ್ ಮಾಡಿದ್ದೇನು ನೋಡಿ
George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?
(India vs England Mohammed Siraj mocks England fans at Headingley When they asked the score)