George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

IPL 2021 RCB: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ.

George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?
George Garton
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 25, 2021 | 9:21 PM

ಜಾರ್ಜ್​ ಗಾರ್ಟನ್(George Garton)…ರಾಯಲ್ ಚಾಲೆಂಜರ್ಸ್​ ಬೆಂಗಳೂರು (Rcb) ತಂಡಕ್ಕೆ ಎಂಟ್ರಿ ಕೊಡುತ್ತಿದ್ದಂತೆ 24 ವರ್ಷದ ಯುವ ವೇಗಿಯ ಹೆಸರು ಕ್ರಿಕೆಟ್ (Cricket) ಅಂಗಳದಲ್ಲಿ ಸೌಂಡ್ ಮಾಡಲಾರಂಭಿಸಿದೆ. ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲದಿದ್ದರೂ ಜಾರ್ಜ್​ ಗಾರ್ಟನ್ ನೇರವಾಗಿ ಐಪಿಎಲ್​​ಗೆ (IPL 2021) ಎಂಟ್ರಿ ಪಡೆದು ಇಂಗ್ಲೆಂಡ್ (England) ಸ್ಟಾರ್ ಆಟಗಾರರೇ ಹುಬ್ಬೇರುವಂತೆ ಮಾಡಿದ್ದಾರೆ. ಇತ್ತ ನೇರವಾಗಿ ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್​ಗೆ (IPL 2021 Phase 2) ಎಂಟ್ರಿ ಪಡೆಯುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳಲ್ಲಿ ಯಾರೀತ ಎಂಬ ಪ್ರಶ್ನೆಯೊಂದು ಮೂಡಿದೆ.

ಎಸ್.. ಪ್ರಸ್ತುತ ಕ್ರಿಕೆಟ್ ಅಂಗಳದ ಉದಯೋನ್ಮುಖ ಅತ್ಯುತ್ತಮ ಯುವ ವೇಗಿಗಳಲ್ಲಿ ಜಾರ್ಜ್ ಗಾರ್ಟನ್ ಕೂಡ ಒಬ್ಬರು. ಈ ಹಿಂದೆ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ಅಂಡರ್​ 19 ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಏಕೆಂದರೆ ಇಂಗ್ಲೆಂಡ್​ನ ಪ್ರತಿಷ್ಠಿತ ಕೌಂಟಿ ಕ್ಲಬ್ ಸೆಸೆಕ್ಸ್​ ತಂಡದ ಖಾಯಂ ಸದಸ್ಯರಾದರು. ಇದಕ್ಕೂ ಮುನ್ನವೇ ತಮ್ಮ 13ನೇ ವಯಸ್ಸಿನಲ್ಲೇ ಸೆಸೆಕ್ಸ್​ ಅಂಡರ್ 13 ತಂಡದಲ್ಲಿ ಸ್ಥಾನ ಪಡೆದಿದ್ದರು. ಆ ಬಳಿಕ ಅಂಡರ್​-14,15, ಹಾಗೂ ಅಂಡರ್​-16 ತಂಡಗಳನ್ನು ಗಾರ್ಟನ್ ಪ್ರತಿನಿಧಿಸಿದ್ದರು.

ಇದೀಗ ಎಡಗೈ ವೇಗದ ಬೌಲಿಂಗ್​ ಮೂಲಕ ಆಂಗ್ಲರ ನಾಡಿನಲ್ಲಿ ಸಂಚಲನ ಸೃಷ್ಟಿಸಿರುವ ಗಾರ್ಟನ್​ಗೆ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿದೆ. ಅದು ಕೂಡ ಬಲಿಷ್ಠ ಆರ್​ಸಿಬಿ ತಂಡದಲ್ಲಿ ಎಂಬುದು ವಿಶೇಷ. ಹೀಗೆ ಆರ್​ಸಿಬಿ ತಂಡಕ್ಕೆ ಬುಲಾವ್ ಸಿಗಲು ಒಂದು ಕಾರಣ ಇತ್ತೀಚೆಗೆ ನಡೆದ ದಿ ಹಂಡ್ರೆಡ್ ಲೀಗ್.

ಸ್ಟಾರ್ ಆಟಗಾರರ ದಂಡೇ ಒಳಗೊಂಡಿದ್ದ ಈ ಲೀಗ್​ನಲ್ಲಿ ಜಾರ್ಜ್​ ಗಾರ್ಟನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. 10 ವಿಕೆಟ್ ಉರುಳಿಸಿದ್ದ ಜಾರ್ಜ್​ ದಿ ಹಂಡ್ರೆಡ್ ಲೀಗ್​ನಲ್ಲಿ ಸದರ್ನ್ ಬ್ರೇವ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಲ್ಲದೆ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ 23 ಪಂದ್ಯಗಳಲ್ಲಿ 53 ವಿಕೆಟ್ ಉರುಳಿಸಿ ಮಿಂಚಿದ್ದರು. ಇನ್ನು ಆಡಿರುವ 38 ಟಿ20 ಪಂದ್ಯಗಳಿಂದ 44 ವಿಕೆಟ್ ಪಡೆದಿದ್ದಾರೆ.

ಇನ್ನು ಬ್ಯಾಟ್ ಮೂಲಕ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಫಸ್ಟ್ ಕ್ಲಾಸ್​ ಕ್ರಿಕೆಟ್​ನಲ್ಲಿ ಜಾರ್ಜ್ ಗಾರ್ಟನ್ 23 ಪಂದ್ಯಗಳಿಂದ 543 ರನ್ ಕಲೆಹಾಕಿದ್ದಾರೆ. ಹೀಗಾಗಿ ಅಂತಿಮ ಓವರ್​ಗಳಲ್ಲಿ ಬಿರುಸಿನ ಹೊಡೆತದ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಅದರಂತೆ ಜಾರ್ಜ್ ಗಾರ್ಟನ್ ಅವರನ್ನು ಆಲ್​ರೌಂಡರ್ ರೂಪದಲ್ಲೂ ಬಳಸಿಕೊಳ್ಳಬಹುದು.

ಇತ್ತ ಡೇನಿಯಲ್ ಸ್ಯಾಮ್ಸ್​ ಅಲಭ್ಯತೆಯಿಂದ ತೆರವಾಗಿದ್ದ ಎಡಗೈ ವೇಗಿಯ ಸ್ಥಾನಕ್ಕೆ ಸೂಕ್ತ ಬದಲಿ ಬೇಕಿತ್ತು. ಅದರಂತೆ ಪ್ರಸ್ತುತ ಫಾರ್ಮ್​​ನಲ್ಲಿರುವ ಜಾರ್ಜ್ ಗಾರ್ಟನ್ ಅವರನ್ನು ಆರ್​ಸಿಬಿ ಆಯ್ಕೆ ಮಾಡಿದೆ. ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ ದ್ವಿತಿಯಾರ್ಧದಲ್ಲಿ ಆರ್​ಸಿಬಿ ಪರ ನ್ಯೂಜಿಲೆಂಡ್ ಬಲಗೈ ವೇಗಿ ಕೈಲ್ ಜೇಮಿಸನ್ ಜೊತೆ ಇಂಗ್ಲೆಂಡ್ ವೇಗಿ ಎಡಗೈ ಜಾರ್ಜ್ ಬಾಲ್ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಗ್ಲೆನ್ ಮ್ಯಾಕ್ಸ್ ವೆಲ್, ಟಿಮ್ ಡೇವಿಡ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್, ಹರ್ಷಲ್ ಪಟೇಲ್, ಜಾರ್ಜ್​ ಗಾರ್ಟನ್

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(IPL 2021: RCB sign England’s George Garton for IPL 2021 Phase 2)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್